ಮೋಹನ್‌ಲಾಲ್‌ ಜೊತೆ ನಟಿಸೋ ಆಫರ್‌ನ ರಿಷಬ್ ಶೆಟ್ಟಿ‌ ತಿರಸ್ಕರಿಸಿದ್ಯಾಕೆ?

Published : Jan 30, 2023, 03:14 PM IST
ಮೋಹನ್‌ಲಾಲ್‌ ಜೊತೆ ನಟಿಸೋ ಆಫರ್‌ನ ರಿಷಬ್ ಶೆಟ್ಟಿ‌ ತಿರಸ್ಕರಿಸಿದ್ಯಾಕೆ?

ಸಾರಾಂಶ

ಡಿವೈನ್‌ ಸ್ಟಾರ್ ಅಂತಲೇ ಫೇಮಸ್ ಆಗಿರುವ ರಿಷಬ್ ಶೆಟ್ಟಿ ಮೋಹನ್‌ಲಾಲ್ ಅವರ ಜೊತೆಗೆ ಮಲೈಕೊಟ್ಟೈ ವಲಿಬನ್‌ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಈ ಆಫರ್‌ ಅನ್ನು ಅವರು ರಿಜೆಕ್ಟ್ ಮಾಡಿದ್ದಾರೆ. ಇದಕ್ಕೆ ಏನು ಕಾರಣ, ಯಾಕೆ ಅಂಥಾ ಅವಕಾಶವನ್ನು ಅವರು ರಿಜೆಕ್ಟ್ ಮಾಡಿದರು.

ಮಲಯಾಳಂ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಟಿಸುತ್ತಿದ್ದಾರೆ ಅನ್ನೋ ಮಾತು ಕಳೆದ ವಾರ ಎಲ್ಲೆಡೆ ಕೇಳಿ ಬರುತ್ತಿತ್ತು. ರಿಷಬ್ ಶೆಟ್ಟಿ ಅವರು ಕಾಂತಾರ ಎರಡನೇ ಭಾಗದ ಕೆಲಸ ಆರಂಭಿಸೋದಕ್ಕಿಂತಲೂ ಮೊದಲು ಮಲಯಾಳಂನಲ್ಲಿ ಮೋಹನ್‌ಲಾಲ್ ಜೊತೆಗೊಂದು ಸಿನಿಮಾ ಮಾಡಿ ಬರ್ತಾರೆ ಅನ್ನೋ ಮಾತು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ರಿಷಬ್‌ ಶೆಟ್ಟಿ ಅವರ ಆಪ್ತಮೂಲಗಳೇ ಮಾಹಿತಿ ನೀಡಿವೆ ರಿಷಬ್ ಈ ಸಿನಿಮಾ ತಿರಸ್ಕರಿಸಿದ್ದಾರೆ ಅಂತ. ಮೋಹನ್‌ಲಾಲ್ ಅವರಂಥಾ ನಟರ ಜೊತೆಗೆ ಟಿಸೋ ಸಿನಿಮಾ ಅನ್ನೋದು ಒಂದು ಕಡೆ ಆದರೆ ಅದ್ದೂರಿ ಬಜೆಟ್‌ನ ಸಿನಿಮಾ ಇದು ಅನ್ನೋದು ಇನ್ನೊಂದು ಇಂಪಾರ್ಟೆಂಟ್‌ ವಿಷಯ. ಕಥೆ ವಿಚಾರದಲ್ಲೂ ಮೋಸ ಇಲ್ಲ. ಹಾಗಿರುವಾಗ ರಿಷಬ್ ಶೆಟ್ಟಿ ಇಂಥಾ ಆಫರ್‌ ಅನ್ನು ಯಾಕೆ ತಿರಸ್ಕರಿಸಿದ್ರು ಅನ್ನೋದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರವೂ ಇದೆ.

ಹಾಗೆ ನೋಡಿದರೆ ಕೆಜಿಎಫ್‌ ಸಿನಿಮಾ ನಂತರ ಒಂದಿಷ್ಟು ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಹೆಸರು ಮಾಡಿದವು. ಕೆಜಿಎಫ್‌ ನಂತರ ಕೆಜಿಎಫ್‌ 2 ಸಿನಿಮಾ, 777 ಚಾರ್ಲಿ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯನ್ನು ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡೋ ಹಾಗೆ ಮಾಡಿದವು. ಆದರೆ ಕಳೆದ ದಸರಾದ ವೇಳೆ ದೇಶಾದ್ಯಂತ ಅದ್ಭುತ ಪ್ರತಿಕ್ರಿಯೆ ಪಡೆದದ್ದು ಕಾಂತಾರ. ರಿಷಬ್ ಶೆಟ್ಟಿ ನಟನೆಯ ಈ ಸಿನಿಮಾ ಇದೀಗ ಟಿವಿಯಲ್ಲೂ ಸಖತ್ ವೀಕ್ಷಣೆ ದಾಖಲಿಸಿದೆ. ಓಟಿಟಿಯಲ್ಲೂ ಓಡ್ತನೇ ಇದೆ. ಕೆಜಿಎಫ್‌ ನಿರ್ಮಿಸಿದ ವಿಜಯ ಕಿರಗಂದೂರು ಅವರೇ ತಮ್ಮ ಹೋಂ ಬ್ಯಾನರ್ ಹೊಂಬಾಳೆ ಫಿಲಂಸ್‌ ನಡಿ ಈ ಸಿನಿಮಾ ನಿರ್ಮಿಸಿದ್ದರು. 16 ಕೋಟಿ ರು.ನಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ ಐನೂರು ಕೋಟಿಗೂ ಅಧಿಕ ಗಳಿಕೆ ಬಾಚಿಕೊಂಡ ಈ ಚಿತ್ರ ಇತ್ತೀಚೆಗೆ ಆಸ್ಕರ್ ನಾಮಿನೇಶನ್‌ಗೆ ಎಂಟ್ರಿ ಕೊಡುತ್ತೆ ಅಂತಲೇ ನಂಬಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವಕಾಶ ತಪ್ಪಿತು.

ದಳಪತಿ ವಿಜಯ್​ ಜೊತೆ ಭಾರಿ ಸುದ್ದಿಯಾಗಿದ್ದ ನಟಿ ಕೀರ್ತಿ ಸುರೇಶ್​ ಮದುವೆ?

ಡಿವೈಡ್ ಸೂಪರ್ ಮೂವಿ ಅಂತಲೇ ಹೆಸರಾಗಿರೋ 'ಕಾಂತಾರ' ಚಿತ್ರದಲ್ಲಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದು ರಿಷಬ್ ಶೆಟ್ಟಿ. ಅವರ ಊರಿನ ಪರಿಸರದಲ್ಲೇ ಈ ಚಿತ್ರವನ್ನು ತಮ್ಮೂರ ಕಥೆ ಇಟ್ಟುಕೊಂಡೇ ಅದ್ಭುತವಾಗಿ ಕಟ್ಟಿಕೊಟ್ಟರು. ಕಾಂತಾರ' ಚಿತ್ರದ ಮೂಲಕ ಅಭೂತಪೂರ್ವ ಯಶಸ್ಸು ಪಡೆದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಸಾಕಷ್ಟು ಆಫರ್‌ಗಳು ಬರುತ್ತಿವೆ. ಈಗ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ ಅವರ ಸಿನಿಮಾದಿಂದಲೂ ಆಫರ್ ಬಂದಿದ್ದು, ಅದನ್ನು ರಿಷಬ್ ಶೆಟ್ಟಿ ರಿಜೆಕ್ಟ್ ಮಾಡಿದ್ದಾರೆ. ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್ ಅವರ 'ಮಲೈಕೋಟೈ ವಲಿಬನ್' ಸಿನಿಮಾದಲ್ಲಿ ನಟಿಸುವ ಆಫರ್ ಬಂದಿದ್ದು, ಅದನ್ನು ರಿಷಬ್ ರಿಜೆಕ್ಟ್ ಮಾಡಿದ್ದಾರೆ.

ಇದಕ್ಕೆ ಕಾರಣ ಏನು ಅಂತ ಬಹಳ ಮಂದಿ ತಲೆ ಕೆಡಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಮತ್ತೇನೂ ಅಲ್ಲ, ರಿಷಬ್ ಕಾಂತಾರ 2 ಮೇಕಿಂಗ್‌ನಲ್ಲಿ ಬ್ಯುಸಿ(Busy) ಆಗಿರೋದು. ಜೊತೆಗೆ ತನ್ನ ಮುಂದಿನ ಚಿತ್ರವೂ ಕನ್ನಡ ಸಿನಿಮಾವೇ ಆಗಿರಬೇಕು ಅನ್ನೋ ಅಭಿಮಾನ. ಬಾಲಿವುಡ್ ಸಿನಿಮಾ ಮಾಡ್ತೀರಾ ಎಂದು ಮುಂಬೈನಲ್ಲಿ ಮಾಧ್ಯಮದವರು(Media) ಪ್ರಶ್ನೆ ಮಾಡಿದಾಗ ರಿಷಬ್ ಶೆಟ್ಟಿ ಅವರು, 'ನನಗೆ ಬಾಲಿವುಡ್ ಸಿನಿಮಾ ಮಾಡುವ ಯಾವ ಆಸೆಯೂ ಇಲ್ಲ. ನಾನು ಕನ್ನಡದಲ್ಲಿಯೇ ಸಿನಿಮಾ ಮಾಡ್ತೀನಿ' ಎಂದು ನೇರವಾಗಿ ಹೇಳಿದ್ದರು. ಅವರ ಈ ಅಭಿಮಾನಕ್ಕೆ ಕನ್ನಡಿಗರೆಲ್ಲ ಶಹಭಾಸ್ ಅಂದಿದ್ದರು. ಅದರಂತೆ ಕಾಂತಾರ ೨ ಸಿನಿಮಾ ಕೆಲಸಗಳು ನಡೆಯುತ್ತಿವೆ. ರಿಷಬ್ ಶೆಟ್ಟಿ ಈಗಾಗಲೇ ಕಾಂತಾರ 2ಕ್ಕೆ ಸ್ಕ್ರಿಪ್ಟ್ ಬರೆಯುತ್ತಿದ್ದಾರೆ. ಕರ್ನಾಟಕದ ಕರಾವಳಿ ಭಾಗದ ಕಾಡಿನಲ್ಲಿ ಸಂಶೋಧನೆ ನಡೆಯುತ್ತಿದೆ. 'ಕಾಂತಾರ 2' ಸಿನಿಮಾದ ಕೆಲ ಭಾಗದ ದೃಶ್ಯದ ಚಿತ್ರೀಕರಣವನ್ನು ಮಳೆಗಾಲದಲ್ಲಿ ಮಾಡಬೇಕಾಗಿರೋದ್ರಿಂದ ಜೂನ್ ತಿಂಗಳಿನಲ್ಲಿ ಶೂಟಿಂಗ್ ಆರಂಭಿಸುವ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ರಿಲೀಸ್ ಮಾಡುವ ಪ್ಲ್ಯಾನ್(Plan) ಮಾಡಲಾಗಿದೆ.

ಇದೀಗ ಕಾಂತಾರ ಎರಡನೇ ಭಾಗಕ್ಕೆ ಜಗತ್ತು ಎದುರು ನೋಡುವಂತಾಗಿದೆ. ಇಂಥಾ ಟೈಮಲ್ಲಿ ಅತಿಯಾಸೆ ಪಟ್ಟುಕೊಂಡು ಕೈ ಸುಟ್ಟುಕೊಳ್ಳಬಾರದು ಅನ್ನೋ ಮಾತಿಗೆ ರಿಷಬ್ ಬದ್ಧರಾದ ಹಾಗೆ ಕಾಣುತ್ತಿದೆ.

ಶಾರುಖ್​ ಖಾನ್​ ಇಲ್ಲವೇ ಸೆಕ್ಸ್​ ಬೇಕು: ನಟಿ ನೇಹಾ ಧೂಪಿಯಾ ಹೇಳಿದ್ದೇನು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!