ಅನೇಕ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದರು; ಪತಿ ಚಂಕಿ ಪಾಂಡೆ ಡೇಟಿಂಗ್ ವಿಚಾರ ಬಿಚ್ಚಿಟ್ಟ ಅನನ್ಯಾ ಪಾಂಡೆ ತಾಯಿ

By Shruiti G Krishna  |  First Published Sep 22, 2022, 3:36 PM IST

ಕರಣ್ ಶೋನಲ್ಲಿ ಚಂಕಿ ಪಾಂಡೆ ಪತ್ನಿ, ಅನನ್ಯಾ ಪಾಂಡೆ ತಾಯಿ ಭಾವನಾ ಪಾಂಡೆ ಪತಿಯ ಡೇಟಿಂಗ್ ಸೀಕ್ರೆಲ್ ರಿವೀಲ್ ಮಾಡಿದ್ದಾರೆ. ಪತಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎನ್ನುವುದನ್ನು ಜಗಜ್ಜಾಹಿರು ಮಾಡಿದ್ದಾರೆ. 
 


ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಶೋನ 7ನೇ ಸೀಸನ್ ಮುಂದುವರೆದಿದೆ. ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಅಂದಹಾಗೆ ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್, ವಿಜಯ್ ದೋವರಕೊಂಡ ಮತ್ತು ಅನನ್ಯಾ ಪಾಂಡೆ, ಕರೀನಾ ಕಪೂರ್ ಮತ್ತು ಆಮೀರ್ ಖಾನ್, ವಿಕ್ಕಿ ಕೌಶಲ್ ಮತ್ತು ಸಿದ್ಧಾರ್ಥ್ ಮಲ್ಹೋತ್ರ ಸೇರಿದಂತೆ, ಅನಿಲ್ ಕಪೂರ್ ಸೇರಿದಂತೆ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಎಂದಿನಂತೆ ಈ ಬಾರಿಯೂ ಸೆಲೆಬ್ರಿಟಿಗಳು ಸಾಕಷ್ಟು ವಿಚಾರಗಳನ್ನು ಬಹಿರಂಗ ಪಡಿಸಿದರು. ಕರಣ್ ಶೋ ಹೆಚ್ಚಾಗಿ ಗಾಸಿಪ್, ವಿವಾದಗಳ ಬಗ್ಗೆ ಸದ್ದು ಮಾಡುತ್ತದೆ. ಈ ಬಾರಿ ಕೂಡ ಲವ್, ಬ್ರೇಕಪ್, ಡೇಟಿಂಗ್ ಹಾಗೂ ಸೆಕ್ಸ್ ವಿಚಾರಗಳ ಬಗ್ಗೆ ಸ್ಟಾರ್ಸ್ ಜೊತೆ ಕರಣ್ ಮಾತನಾಡಿದ್ದಾರೆ. 

ಈ ಬಾರಿಯ ಸೆಂಚಿಕೆಯಲ್ಲಿ ಶಾರುಖ್ ಖಾನ್ ಪತ್ನಿ ಗೌರಿ ಖಾನ್, ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್ ಹಾಗೂ ಚಂಕಿ ಪಾಂಡೆ ಪತ್ನಿ ಭಾವನಾ ಪಾಂಡೆ ಈ ಮೂವರು ಭಾಗಿಯಾಗಿದ್ದರು. ಮೂವರು ಸಾಕಷ್ಟು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ತಮ್ಮ ಕುಟುಂಬದ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.  ಕರಣ್ ಶೋನಲ್ಲಿ ಚಂಕಿ ಪಾಂಡೆ ಪತ್ನಿ, ಅನನ್ಯಾ ಪಾಂಡೆ ತಾಯಿ ಭಾವನಾ ಪಾಂಡೆ ಪತಿಯ ಡೇಟಿಂಗ್ ಸೀಕ್ರೆಲ್ ರಿವೀಲ್ ಮಾಡಿದ್ದಾರೆ. ಪತಿಗೆ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು ಎನ್ನುವುದನ್ನು ಜಗಜ್ಜಾಹಿರು ಮಾಡಿದ್ದಾರೆ. 

Tap to resize

Latest Videos

ಭಾವನಾ ಪಾಂಡೆ ಇತ್ತೀಚಿಗೆ ಕರಣ್ ಜೋಹರ್ ಚಾಟ್ ಶೋ 'ಕಾಫಿ ವಿತ್ ಕರಣ್ ನಲ್ಲಿ ರ್ಯಾಪಿಡ್ ಫೈರ್ ರೌಂಡ್‌ನಲ್ಲಿ, ಭಾವನಾ ಅವರು ಚಂಕಿ 'ಉಚಿತ ಪಾಸ್' ಹೊಂದಲು ಅರ್ಹರಲ್ಲ ಎಂದು ಹೇಳಿದರು. ಆಗ ಅವರು ತಮ್ಮ ಮದುವೆಗೆ ಮೊದಲು ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಿದರು.  ಆಗ ಕರಣ್ ಜೋಹರ್ ಮದುವೆ ಬಳಿಕವೂ ಚಂಕಿ ಪಾಂಡೆ ಇನ್ನೂ ಸಂಬಂಧವನ್ನು ಹೊಂದಿರಬಹುದು ಎಂದು ಹೇಳಿದಾಗ ಇದಕ್ಕೆ ಉತ್ತರಿಸಿದ ಭಾವನಾ, ಇದರ ಬಗ್ಗೆ ನನಗೆ ಗೊತ್ತಿಲ್ಲದಿರುವುದೇ ಉತ್ತಮ' ಎಂದು ಹೇಳಿದರು. 

ಅದಕ್ಕಿಂತ ಕೆಟ್ಟ ಪರಿಸ್ಥಿತಿ ನಾವು ಅನುಭವಿಸಿಲ್ಲ; ಮಗನ ಡ್ರಗ್ಸ ಪ್ರಕರಣದ ಬಗ್ಗೆ ಮೌನ ಮುರಿದ ಶಾರುಖ್ ಪತ್ನಿ

ಭಾವನಾ ಪಾಂಡೆ, ಗೌರಿ ಖಾನ್ ಹಾಗು ಮಹೀಪ್ ಕಪೂರ್ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗೌರಿ ಖಾನ್ ಕೂಡ ಮೊದಲ ಬಾರಿಗೆ ಮಗನ ಡ್ರಗ್ಸ್ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ. ಆ ಪರಿಸ್ಥಿತಿಗಿಂತ ಕೆಟ್ಟದ್ದು ಇರ್ಲಿಲ್ಲ ಎಂದು ಹೇಳಿದ್ದರು. ಇನ್ನು ಮಹೀಪ್ ಕಪೂರ್ ಕೂಡ ಪತಿ ಸಂಜಯ್ ದತ್ ಕೆಲಸ ವಿಲ್ಲದೆ ಮನೆಯಲ್ಲಿ ಕುಳಿತ್ತಿದ್ದ ಬಗ್ಗೆ ಬಹಿರಂಗ ಪಡಿಸಿದ್ದರು. ಕೆಲಸವಿಲ್ಲದೆ ಮನೆಯಲ್ಲಿ ಇದ್ದಿದ್ದು ಕಪೂರ್ ಕುಟುಂಬಕ್ಕೆ ಅವಮಾನ ಎಂದಿದ್ದರು. 

ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟಿಂಗ್ ಮಾಡ್ಬೇಡ; ಪುತ್ರಿ ಸುಹಾನಾಗೆ ಶಾರುಖ್ ಪತ್ನಿ ಸಲಹೆ

ಇನ್ನು ಗೌರಿ ಖಾನ್ ಮಗಳ ಡೇಟಿಂಗ್‌ಗೆ ಸಲಹೆಯನ್ನು ನೀಡಿದ್ದರು. ಕರಣ್ ಜೋಹರ್, ಗೌರಿ ಖಾನ್‌ಗೆ ಪ್ರಶ್ನೆ ಮಾಡಿ ಮಗಳು  ಸುಹಾನಾ ಖಾನ್‌ಗೆ ಡೇಟಿಂಗ್ ಸಲಹೆ ಏನು ಕೊಡುತ್ತೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಗೌರಿ ಖಾನ್, 'ಒಟ್ಟಿಗೆ ಇಬ್ಬರು ಹುಡುಗರ ಜೊತೆ ಡೇಟ್ ಮಾಡಬೇಡ' ಎಂದು ಹೇಳಿದ್ದರು. ಗೌರಿ ಖಾನ್ ಮಾತು ನೋಡುಗರಿಗೆ ಅಚ್ಚರಿ ಮೂಡಿಸಿದೆ.  

click me!