ನಟಿ ಕಿಯಾರಾಳನ್ನು ಮದ್ವೆ ಆಗ್ತೀನಿ ಎಂದು ಪೇಚಿಗೆ ಸಿಲುಕಿದ್ದ ಖ್ಯಾತ ಉದ್ಯಮಿ ಅಶ್ನೀರ್ ಗ್ರೋವರ್

Published : Feb 06, 2023, 03:32 PM IST
ನಟಿ ಕಿಯಾರಾಳನ್ನು ಮದ್ವೆ ಆಗ್ತೀನಿ ಎಂದು ಪೇಚಿಗೆ ಸಿಲುಕಿದ್ದ ಖ್ಯಾತ ಉದ್ಯಮಿ ಅಶ್ನೀರ್ ಗ್ರೋವರ್

ಸಾರಾಂಶ

ನಟಿ ಕಿಯಾರಾ ಅಡ್ವಾಣಿಯನ್ನು ಮದುವೆ ಆಗುತ್ತೇನೆ ಎಂದು ಹೇಳಿ ಖ್ಯಾತ ಉದ್ಯಮಿ ಅಶ್ನೀರ್ ಗ್ರೋವರ್ ಪೇಚಿಗೆ ಸಿಲುಕ್ಕಿದ್ದ ಘಟನೆ ಮತ್ತೆ ವೈರಲ್ ಆಗಿದೆ. 

ಬಾಲಿವುಡ್ ಖ್ಯಾತ ನಟಿ ಕಿಯಾರಾ ಅಡ್ವಾಣಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇಬ್ಬರ ಮದುಲವೆ ಸಮಾರಂಭ ನಡೆಯುತ್ತಿದೆ. ಜೈಪುರದ ಅರಮನೆಯಲ್ಲಿ ಅದ್ದೂರಿಯಾಗಿ ಇಬ್ಬರೂ ಹಸೆಮಣೆ ಏರುತ್ತಿದ್ದಾರೆ. ಇಬ್ಬರ ಮದುವೆಗೆ ಬಾಲಿವುಡ್‌ನ ಅನೇಕ ಗಣ್ಯರು ಹಾಜರಾಗುತ್ತಿದ್ದಾರೆ. ಈ ನಡುವೆ ಖ್ಯಾತ ಉದ್ಯಮಿ, ಭಾರತ್ ಪೇ ಸಂಸ್ಥಾಪಕ ಅಶ್ನೀರ್ ಗ್ರೋವರ್, ನಟಿ ಕಿಯಾರಾಳನ್ನು ಮದ್ವೆ ಆಗ್ತೀನಿ ಎಂದು ಪೇಚಿಗೆ ಸಿಲುಕಿದ್ದ ಘಟನೆ ವೈರಲ್ ಆಗಿದೆ. ಅಶ್ನೀರ್ ಗ್ರೋವರ್ ತನ್ನ ಆತ್ಮಚರಿತ್ರೆ ಡೋಗ್ಲಾಪನ್‌ನಲ್ಲಿ ಕಿಯಾರಾಳನ್ನು ಮದುವೆ ಆಗುವ ಬಗ್ಗೆ ಬಹಿರಂಗ ಪಡಿಸಿ ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದ ಘಟನೆಯನ್ನು ವಿವರಿಸಿದ್ದರು. ಅದರ ಸ್ಕ್ರೀನ್ ಶಾಟ್‌ಗಳು ಈಗ ಮತ್ತೆ ವೈರಲ್ ಆಗುತ್ತಿವೆ. 

ಈ ಬಗ್ಗೆ ಟ್ವೀಟ್‌ನಲ್ಲಿ, ಗ್ರೋವರ್ ತನ್ನ ಆತ್ಮಚರಿತ್ರೆ ಡೋಗ್ಲಾಪನ್‌ನಿಂದ ಕಬೀರ್ ಸಿಂಗ್ ನಟಿಯಿಂದಾಗಿ ತನ್ನ ಪತ್ನಿ ಮಾಧುರಿಯಿಂದ ಬಹುತೇಕ ವಿಚ್ಛೇದನ ಪಡೆಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. 

ಪುಸ್ತಕದಲ್ಲಿ, ಅಶ್ನೀರ್ ತನ್ನ ಹೊಸ ಕಂಪನಿಯನ್ನು ಪ್ರಾರಂಭಿಸಿದ್ದ ಸ್ನೇಹಿತನನ್ನು ಭೇಟಿಯಾಗಿ ಮಾತಕತೆ ನಡೆಸಿದ ಘಟನೆಯನ್ನು ತಾಯಿಗೆ ವಿವರಿಸಿದ್ದರು. ಗೆಳೆಯನ ಜೊತೆ ಮದುವೆ ಯೋಜನೆಗಳ ಬಗ್ಗೆ ಚರ್ಚಿಸಿದ್ದರು. ತನ್ನ ಸ್ನೇಹಿತ ಸಿಮಾ ತಪರಿಯಾದಂತಹ ಪ್ರಸಿದ್ಧ ಮ್ಯಾಚ್ ಮೇಕರ್ ಅನ್ನು ಭೇಟಿಯಾದ ಬಗ್ಗೆ ಗ್ರೋವರ್ ಮಾತನಾಡಿದ್ದರು. ಕಿಯಾರಾ ಅಡ್ವಾಣಿ ಅವರ ಆದರ್ಶ ಜೋಡಿ ಎಂದು ಸ್ನೇಹಿತ ಬಹಿರಂಗಪಡಿಸಿದ್ದ ವಿಚಾರವನ್ನು ಗ್ರೋವರ್ ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದರು. 

ಮದುವೆಗೂ ಮುನ್ನವೇ ಸೊಸೆ ಕಿಯಾರಾ ಅಡ್ವಾನಿ ಬಗ್ಗೆ ಕಾಮೆಂಟ್ ಮಾಡಿದ ಸಿದ್ಧಾರ್ಥ್‌ ತಾಯಿ ರಿಮ್ಮಾ

ಈ ವಿಚಾರ ಹೇಳಿದ ಬಳಿಕ ಗ್ರೋವನ್ ತಾಯಿ ಮತ್ತಷ್ಟು ತಮಾಷೆ ಮಾಡಿದರು. 'ಈ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಏನು ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ನಾನು ಒಂದು ವೇಳೆ ಮದುವೆಯಾದರೆ ಕಿಯಾರಾ ಅಡ್ವಾಣಿಯನ್ನು ಮದುವೆ ಆಗಬಹುದು' ಎಂದು ತನ್ನ ತಾಯಿಗೆ ಹೇಳಿದರು. ಈ ಎಲ್ಲಾ ವಿಚಾರಗಳನ್ನು ಗ್ರೋವರ್ ತನ್ನ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.  

'ಈ ಘಟನೆ ಮಾಧುರಿಗೆ  (ಗ್ರೋವರ್ ಪತ್ನಿ) ಕೋಪ ತರಿಸಿತು. ಗಂಟೆಗಟ್ಟಲೆ ನನ್ನ ಜೊತೆ ಮಾತನಾಡಿಲ್ಲ. ನನ್ನ ಜೊತೆ ಜಗಳ ಆಡಿದಳು. ಬಹುತೇಕ ವಿಚ್ಛೇದನದ ಹಂತಕ್ಕೆ ಹೋಗಿತ್ತು. ನೀವು ಕಿಯಾರಾಳನ್ನು ಮದುವೆ ಆಗ್ತೀರಾ ಎಂದು ಕೇಳಿದಳು. ಏನು ಇಲ್ಲದಿದ್ದರೂ ಏನೋ ಇದೆ ಎನ್ನುವ ಹಾಗೆ ಮಾಡಿದಳು' ಎಂದು ಹೇಳಿದರು. ಈ ಘಟನೆಯನ್ನು ಗ್ರೋವರ್ ಅನೇಕ ಬಾರಿ ಸ್ನೇಹಿತರ ಜೊತೆ ಹಂಚಿಕೊಂಡಿದ್ದರು. ಸ್ನೇಹರು ಕೂಡ ಯಾವಾಗಲೂ ತಮಾಷೆ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ. 

ಕಿಯಾರಾ ಅಡ್ವಾಣಿ ತಮ್ಮ ಹೆಸರು ಬದಲಾಯಿಸಿಕೊಂಡ ಹಿಂದಿನ ಕಾರಣವೇನು ಗೊತ್ತಾ?

ಇದೀಗ ಕಿಯಾರಾ ಅಡ್ವಾಣಿ ಹಸೆಮಣೆ ಏರುತ್ತಿದ್ದಾರೆ. ಕಿಯಾರಾ ಮದುಗೆ ಬಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗುತ್ತಿದ್ದಾರೆ. ಸದ್ಯ ಮದುವೆ ಶಾಸ್ತ್ರಗಳು ನಡೆಯುತ್ತಿವೆ. ಫೆಬ್ರವರಿ 4ರಿಂದನೆ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು ಸಂಗೀತ, ಮೆಹಂದಿ ಸೇರಿದಂತೆ ಅನೇಕ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ. ಈ ನಡುವೆ ಗ್ರೋವರ್ ಅವರ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?