ಹೊಸ ಅವಾತರದಲ್ಲಿ ನಟಿ ನಮ್ರತಾ ಮಲ್ಲ ಬೆಲ್ಲಿ ಡ್ಯಾನ್ಸ್, ಬಿರುಗಾಳಿ ಸೃಷ್ಟಿಸಿದ ವಿಡಿಯೋ!

By Chethan Kumar  |  First Published Jun 5, 2024, 10:02 PM IST

ನಟಿ ನಮ್ರತಾ ಮಲ್ಲಾ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.  ಟು ಪೀಸ್‌ನಲ್ಲಿ ಬೆಲ್ಲಿ ಡ್ಯಾನ್ಸ್ ಮಾಡಿ ಹಲವರ ನಿದ್ದೆಗೆಡಿಸಿದ್ದಾರೆ. 
 


ಸಿನಿಮಾ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ನಟ ನಟರಿಯರು ಹೆಚ್ಚು ಸಕ್ರಿಯರಾಗಿರುತ್ತಾರೆ. ಆದರೆ ಇದೇ ಸೊಶಿಯಲ್ ಮೀಡಿಯಾದಲ್ಲಿ ಹಲವರ ಖಾಸಗಿ ವಿಡಿಯೋಗಳು ಹರಿದಾಡಿ ಕರಿಯರ್ ಅಂತ್ಯಗೊಂಡ ಘಟನೆಗಳೂ ಇವೆ. ಇತ್ತೀಚೆಗೆ ನಟಿಯರು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಬೋಲ್ಡ್ ಆಗಿ ಕಾಣಿಸಿಕೊಂಡ ವಿಡಿಯೋ ಫೋಟೋಗಳನ್ನು ಹಂಚಿಕೊಂಡು ಭಾರಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇದೀಗ ನಟಿ ನಮ್ರತಾ ಮಲ್ಲಾ ಹಾಟ್ ಅಂಡ್ ಸೆಕ್ಸಿ ಬೆಲ್ಲಿ ಡ್ಯಾನ್ಸ್ ವಿಡಿಯೋ ಭಾರಿ ವೈರಲ್ ಆಗಿದೆ.

ಬೋಜ್‌ಪುರಿ ನಟಿ ನಮ್ರತಾ ಮಲ್ಲ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಜ್‌ಪುರಿ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮೂಲಕ ಹೆಜ್ಜೆ ಹಾಕಿದ್ದಾರೆ. ಟು ಪೀಸ್‌ನಲ್ಲಿ ಕಾಣಿಸಿಕೊಂಡು ಈ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾಗೆ ಕಿಚ್ಚು ಹಚ್ಚಿದ್ದಾರೆ. ಗೋಲ್ಡರ್ ಕಲರ್ ಟು ಪೀಸ್‌ನಲ್ಲಿ ನಮ್ರತಾ ಹಾಟ್ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಬೋಜುಪುರಿ ಸಿನಿ ರಸಿಕರು ನಮ್ರತಾ ಮಲ್ಲಾ ಹೊಸ ಅವತಾರವನ್ನು ಮೆಚ್ಚಿಕೊಂಡಿದ್ದಾರೆ.

Tap to resize

Latest Videos

ಬೋಜುಪುರಿಯಲ್ಲಿ ನಮ್ರತಾ ಮಲ್ಲಾ ಭಾರಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಿನಿಮಾ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ನಮ್ರಾತ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಮನತಣಿಸಿದ್ದಾರೆ. ನಮ್ರತಾ ಮಲ್ಲಾ ಬೋಜುಪುರಿ ಸಿನಿಮಾ ಕ್ಷೇತ್ರಕ್ಕೂ ಬರವು ಮೊದಲು ಅದ್ಭುತ ಡ್ಯಾನ್ಸರ್ ಆಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

 

 

ನಮ್ರತಾ ಮಲ್ಲಾ ತಮ್ಮ ಡ್ಯಾನ್ಸ್ ಪ್ರತಿಭಟೆಯನ್ನು ಸಿನಿಮಾದ ಮೂಲಕವೂ ನೀಡಿ ಅಭಿಮಾನಿಗಳ ರಂಜಿಸಿದ್ದಾರೆ. ಇತ್ತೀಚೆಗೆ ನಮ್ರತಾ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ವಿಡಿಯೋ, ಫೋಟೋಗಳನ್ನು ಹಂಚಿಕೊಂಡು ಭಾರಿ ವೈರಲ್ ಆಗಿದ್ದಾರೆ. ಇದೀಗ ನಮ್ರತಾ ಬೆಲ್ಲಿ ಡ್ಯಾನ್ಸ್‌‌ಗೆ ಹಲವು ಅಭಿಮಾನಿಗಳು ಪ್ರತಿಕ್ರಿಯ ನೀಡಿದ್ದಾರೆ. ಈ ರೀತಿಯ ಡ್ಯಾನ್ಸ್ ಮಾಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. 

ಕನ್ನಡ ಕಿರುತೆರೆಗೆ ಬರುವುದಕ್ಕೂ ಮುನ್ನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ಟಾರ್ಸ್‌ ಇವರು

ಮುಂಬೈನಲ್ಲಿ ಹುಟ್ಟಿದ ನಮ್ರತಾ ಮಾಡೆಲಿಂಗ್ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟಿದ್ದಾರೆ. 2022ರಲ್ಲಿ ಚೋರ್ ಬಜಾರ್, 2023ರಲ್ಲಿ ಅಹಿಂಸಾ, 2023ರಲ್ಲಿ ಡಾನ್ ಕುಮಾರ್ ಸೇರಿದಂತೆ ಹಲವು ಬೋಜುಪುರಿ ಚಿತ್ರಗಳಲ್ಲಿ ನಮ್ರತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜಗ್ಗು ಕಿ ಲಾಲಟನ್ ಅನ್ನೋ ಹಿಂದಿ ಚಿತ್ರದಲ್ಲೂ ನಮ್ರತಾ ಅಭಿನಯಿಸಿದ್ದಾರೆ. ಐಪಿಎಲ್ ಟೂರ್ನಿ ವೇಳೆಯೂ ಕೆಲ ಕಾರ್ಯಕ್ರಮಗಳಲ್ಲಿ ನಮ್ರತಾ ಕಾಣಿಸಿಕೊಂಡಿದ್ದಾರೆ.  
 

click me!