'ಜೋ ಜೀತಾ ವೋಹಿ ಸಿಕಂದರ್' ಖ್ಯಾತಿಯ ಆಯೇಷಾ ಹೋಗಿದ್ದೆಲ್ಲಿಗೆ?

Published : Jan 13, 2023, 04:23 PM ISTUpdated : Jan 13, 2023, 04:24 PM IST
'ಜೋ ಜೀತಾ ವೋಹಿ ಸಿಕಂದರ್' ಖ್ಯಾತಿಯ ಆಯೇಷಾ ಹೋಗಿದ್ದೆಲ್ಲಿಗೆ?

ಸಾರಾಂಶ

'ಜೋ ಜೀತಾ ವೋಹಿ ಸಿಕಂದರ್' ಮೂವಿಯ ಮುದ್ದುಮೊಗದ ಚೆಲುವೆ ಆಯೇಷಾ ಜುಲ್ಕಾ ಚಿತ್ರರಂಗದಿಂದ ಕಣ್ಮರೆಯಾಗಲು ಕಾರಣವೇನು?   

1992ರಲ್ಲಿ ಬಿಡುಗಡೆಯಾದ 'ಜೋ ಜೀತಾ ವೋಹಿ ಸಿಕಂದರ್' ಚಿತ್ರ ನೋಡಿದವರಿಗೆ ಮುದ್ದುಮೊಗದ ಹೀಯೋಯಿನ್​ ನೆನಪಿರಲಿಕ್ಕೆ ಸಾಕು. ಅಮೀರ್ ಖಾನ್ ಜೊತೆ ನಟಿಸಿದ್ದ 20 ವರ್ಷಗಳ ಚೆಲುವೆ ಆಯೇಷಾ ಜುಲ್ಕಾ (Ayesha Jhulka) ಎನ್ನುವ ಈ ಬೆಡಗಿಯ 'ಚಾಹೆ ತುಮ್ ಕುಚ್ ನಾ ಕಹೋ ಮೈನೆ ಸುನ್ ಲಿಯಾ' ಹಾಡು ಚಿಂದಿ ಉಡಾಯಿಸಿತ್ತು. ಈ ಚಿತ್ರದ ನಂತರ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದ ಆಯೇಷಾ ಸೂಪರ್​ ಸ್ಟಾರ್​ ಎನಿಸಿದ್ದ ಸಲ್ಮಾನ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್ ಸೇರಿದಂತೆ ಹಲವರ ಜೊತೆ ನಟಿಸಿದ್ದರು. 'ಖಿಲಾಡಿ', 'ಸಂಗ್ರಾಮ್', 'ದಲಾಲ್', 'ಕುರ್ಬಾನ್', 'ಮಾಸೂಮ್' ಮತ್ತು 'ಬಲ್ಮಾ' ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. 

ಇಷ್ಟೆಲ್ಲಾ ಸೂಪರ್​ಹಿಟ್​ (Superhit) ಚಿತ್ರಗಳನ್ನು ಮಾಡಿರೋ ನಟಿ ಈಗ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿಬಿಟ್ಟರು. 2018ರಲ್ಲಿ ಜೀನಿಯಸ್​ ಚಿತ್ರದಲ್ಲಿ ತಾಯಿಯ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಇದ್ದಕ್ಕಿದ್ದಂತೆಯೇ ಚಿತ್ರರಂಗದಿಂದ ದೂರವಾಗಿ ಬಿಟ್ಟರು. ಇಂದು ಈಕೆ ಅನಾಮಧೇಯ ನಟಿಯರ ಸಾಲಿಗೆ ಸೇರಿದ್ದಾರೆ. ಹಿಂದೊಮ್ಮೆ ನಟ ಅಕ್ಷಯ್​ ಕುಮಾರ್​ ಜೊತೆ ಭಾರಿ ಸುದ್ದಿಯಾಗಿದ್ದ ಈ ನಟಿ ಅವರೊಂದಿಗೆ 'ಖಿಲಾಡಿ', 'ವಕ್ತ್ ಹಮಾರಾ ಹೈ', 'ದಿಲ್ ಕಿ ಬಾಜಿ' ಮತ್ತು 'ಜೈ ಕಿಶನ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ. ಇವರಿಬ್ಬರ ಸಂಬಂಧ  ಮುರಿದು ಬಿತ್ತು. ಅದಾಗಲೇ ಡಿಪ್ರೆಷನ್​ಗೆ (Depresion) ಜಾರಿದ್ದ ಆಯೇಷಾ  ಚಿತ್ರರಂಗದಿಂದ ದೂರ ಸರಿಯುತ್ತಲೇ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಇದೀಗ ಮರೆಯಾಗಿಬಿಟ್ಟಿದ್ದಾರೆ.

ಕರೀನಾ ಕಪೂರ್‌ಗ್ಯಾಕೆ ರಾಹುಲ್ ಜೊತೆ ಡೇಟಿಂಗ್ ಮಾಡೋ ಆಸೆ?

ಅಕ್ಷಯ್‌ ಅವರಿಂದ  ಬೇರ್ಪಟ್ಟ ನಂತರ, ನಾನಾ ಪಾಟೇಕರ್ (Nana Patekar) ಅವರೊಂದಿಗಿನ ಆಯೇಷಾ ಅವರ ಪ್ರಣಯದ ಚರ್ಚೆಗಳು ಬಹಳ ಸುದ್ದಿ ಮಾಡಿದ್ದವು. ಆದರೆ ಅದು ಕೂಡ ಸಕ್ಸಸ್​ (Success) ಅಗಲಿಲ್ಲ. ಈ ಎರಡು ಬ್ರೇಕಪ್​ ನಂತರ ಆಯೇಷಾ ಮತ್ತಷ್ಟು ಕುಗ್ಗಿದರು. ಆ ನಂತರ ಅವರ ವೃತ್ತಿ ಜೀವನದಲ್ಲಿ ಕೆಲವು ಹೆಸರುಗಳು ತಳುಕು ಹಾಕಿಕೊಂಡರೂ ಅಕ್ಷಯ್​ ಕುಮಾರ್​ ಮತ್ತು ನಾನಾ ಪಾಟೇಕರ್​ ಜೊತೆಗಿನ ಪ್ರೇಮ ಸಂಬಂಧ (Affair) ಮುರಿದದ್ದು ಆಯೇಷಾ ಅವರಿಗೆ ಅರಗಿಸಿಕೊಳ್ಳಲಾಗದ ತುತ್ತಾಯಿತು.

ನಾನಾ ಪಾಟೇಕರ್​ ಅವರಿಂದ ಹೆಚ್ಚಿದ್ದನ್ನು ಬಯಸ್ಸಿದ್ದ ನಟಿಗೆ ಅವರು ದೂರವಾದ ಮೇಲೆ ಜೀವನವೇ ಬೇಸರವಾಯಿತು. ಇದೇ ಅವರ  ವೃತ್ತಿಜೀವನದ ಕುಸಿತಕ್ಕೂ ಕಾರಣವಾಗಿ ಹೋಯ್ತು. ಹೀಗಿರುವಾಗ 2003ರಲ್ಲಿ ಉದ್ಯಮಿ ಸಮೀರ್ ವಾಶಿ ಎಂಬುವವರ ಜೊತೆ ಇವರ ಮದುವೆಯಾಯಿತು.  ನಂತರ ಒಂದೆರಡು ಚಿತ್ರಗಳನ್ನು ನಟಿಸಿದ ಆಯೇಷಾ ಬಾಲಿವುಡ್‌ಗೆ ವಿದಾಯ ಹೇಳಿದರು.  ಕಾಲಕ್ರಮೇಣ ಜನರ ನೆನಪಿನಿಂದ ಮರೆಯಾಗಿಬಿಟ್ಟಿರು.
 ಈ ದಿನಗಳಲ್ಲಿ ಆಯೇಷಾ ಗೋವಾದಲ್ಲಿ ತನ್ನದೇ ಆದ ಹೋಟೆಲ್ ನಡೆಸುತ್ತಿದ್ದಾರೆ. ಇವರಿಗೆ ಮಕ್ಕಳಿಲ್ಲ. ಈ ಬಗ್ಗೆ ಕೇಳಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಆಯೇಷಾ, 'ನಮಗೆ ಮಕ್ಕಳಿಲ್ಲ, ಮಕ್ಕಳನ್ನು ಪಡೆಯುವುದು ನಮಗೆ ಇಷ್ಟವಿಲ್ಲ, ಸಂಪೂರ್ಣ ಜೀವನವನ್ನು ಸಾಮಾಜಿಕ ಸೇವೆಗೆ ಮುಡುಪಾಗಿಡುತ್ತೇನೆ' ಎಂದಿದ್ದರು. 

ನಿರೀಕ್ಷೆ ಮೂಡಿಸಿದ 'ಮಿಷನ್ ಮಜ್ನು' ಟ್ರೈಲರ್: ರಶ್ಮಿಕಾ ಗೆಲುವಿನ ಹಾದಿ ಸುಗಮ?

ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದ್ದ ಆಯೇಷಾ ಅವರ  ತಂದೆ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದರು.  ತಂದೆಯ ಆಗಾಗ್ಗೆ ವರ್ಗಾವಣೆಗಳ ಕಾರಣ, ಅವರು ದೆಹಲಿಗೆ  (Dehli) ಸ್ಥಳಗೊಂಡರು. ಸದಾ  ಮಾಡೆಲಿಂಗ್​ ಕನಸು ಕಾಣುತ್ತಿದ್ದ ಆಯೇಷಾ ಅವರಿಗೆ ದೆಹಲಿಗೆ ಬಂದದ್ದು ಒಂದು ವರದಾನವೇ ಆಯಿತು. ಅಲ್ಲಿ ಮಾಡೆಲಿಂಗ್​ ವೃತ್ತಿ ಆರಂಭಿಸಲು ತೊಡಗಿಕೊಂಡರು. ನಂತರ ನಿಧಾನವಾಗಿ ಮುಂಬೈಗೆ ಸ್ಥಳಾಂತರಗೊಂಡರು. ​ ತಾಯಿ ಫ್ಯಾಷನ್​ ಡಿಸೈನರ್​ (Fashion Designer) ಆಗಿದ್ದ ಹಿನ್ನೆಲೆಯಲ್ಲಿ ಆಯೇಷಾ ಅವರಿಗೆ ಮಾಡೆಲಿಂಗ್​  ಮತ್ತಷ್ಟು ಹತ್ತಿರವಾಯಿತು. 

ಕೇವಲ 11 ವರ್ಷದವಳಿರುವಾಗಲೇ ಕೈಸೆ ಕೈಸೆ ಲೋಗ್ (1983) ಚಿತ್ರದಲ್ಲಿ  ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಕುರ್ಬಾನ್, ಖಿಲಾಡಿ ಮತ್ತು ದಲಾಲ್ ಜೋ ಜೀತಾ ಸಿಕಂದರ್ (Jo jeeta vahee Simkanderr) ಆಕೆ ನಟಿಸಿ ಸೂಪರ್​ಹಿಟ್​ ಆದ ಚಿತ್ರಗಳು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?