ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆತಿಯಾ; ತಾಳಿ, ಸಿಂಧೂರ ಎಲ್ಲಿ ಎಂದವರ ಬಾಯಿ ಮುಚ್ಚಿಸಿದ ರಾಹುಲ್ ಪತ್ನಿ

Published : Feb 01, 2023, 02:37 PM IST
ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆತಿಯಾ; ತಾಳಿ, ಸಿಂಧೂರ ಎಲ್ಲಿ ಎಂದವರ ಬಾಯಿ ಮುಚ್ಚಿಸಿದ ರಾಹುಲ್ ಪತ್ನಿ

ಸಾರಾಂಶ

ತಾಳಿ, ಸಿಂಧೂರ ಎಲ್ಲಿ ಎಂದು ಟ್ರೋಲ್ ಮಾಡಿದವರ ಬಾಯಿ ಮುಚ್ಚಿಸಿದ್ದಾರೆ ರಾಹುಲ್ ಪತ್ನಿ ಆತಿಯಾ ಶೆಟ್ಟಿ 

ಬಾಲಿವುಡ್ ನಟಿ ಆತಿಯಾ ಶೆಟ್ಟಿ ಮತ್ತು ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಜನವರಿ 23ರಂದು ಅದ್ದೂರಿಯಾಗಿ ವಿವಾಹವಾದರು. ಸುನಿಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಇಬ್ಬರೂ ಹಸೆಮಣೆ ಏರಿದರು. ಇಬ್ಬರೂ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಮದುವೆ ಬಳಿಕ ಇಬ್ಬರೂ ಮೆಹಂದಿ, ಸಂಗೀತ ಸಂಮಾರಂಭಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಆತಿಯಾ ಮತ್ತು ಕೆಎಲ್ ರಾಹುಲ್ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಮದುವೆ ಬಳಿಕ ಈ ಜೋಡಿ ಪಾಪರಾಜಿಗಳಿಗೆ ಸೆರೆಯಾಗಿದ್ದರು. ಇಬ್ಬರೂ ಕ್ಯಾಮರಾಗೆ ಪೋಸ್ ನೀಡಿ ನಗು ಬೀರಿದ್ದರು.

ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಮದುವೆಯಾಗಿ ಇನ್ನೂ ವಾರವಾಗಿಲ್ಲ ಆಗಲೇ ಮಂಗಳಸೂತ್ರ ಮತ್ತು ಸಿಂಧೂರ ಮಾಯವಾಗಿದೆ ಎಂದು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದರು. ಸೆಲೆಬ್ರಿಟಿಗಳು ಮದುವೆಯಾದ ಒಂದೇ ವಾರಕ್ಕೆ ಈ ರೀತಿ ಸಂಪ್ರದಾಯವನ್ನು ಮರೆಯುವುದು ಸಾಮಾನ್ಯರ ಮೇಲೆ ಪರಿಣಾಮ ಬೀರುತ್ತದೆ ನಿಮ್ಮನ್ನು ಫಾಲೋ ಮಾಡುವವರು ಹೆಚ್ಚಿದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದರು. 

ಇದರ ಬೆನ್ನಲ್ಲೇ ಇದೀಗ ಆತಿಯಾಶೇರ್ ಮಾಡಿರುವ ವಿಡಿಯೋ ಟ್ರೋಲಿಗರ ಬಾಯಿ ಮುಚ್ಚಿಸಿದೆ. ಆತಿಯಾ ಶೇರ್ ಮಾಡಿರುವ ವಿಡಿಯೋದಲ್ಲಿ ಇಬ್ಬರೂ ಒಬ್ಬರಿಗೊಬ್ಬರು ಕಿಸ್ ಮಾಡುತ್ತಿದ್ದಾರೆ. ಜೊತೆಗೆ ತಾಳಿ ಧರಿಸಿದ್ದಾರೆ. ವಿಡಿಯೋದಲ್ಲಿ ತಾಳಿ ಎದ್ದು ಕಾಣುತ್ತಿದೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ ಆತಿಯಾ. 

ಮದ್ವೆಯಾದ ಒಂದೇ ವಾರಕ್ಕೆ ತಾಳಿ ಸಿಂಧೂರ ತೆಗೆದ ಆತಿಯಾ ಶೆಟ್ಟಿ; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಮದುವೆ ಬಳಿಕ ಇಬ್ಬರೂ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಮದುವೆಯಲ್ಲಿ ಧರಿಸಿದ್ದ ಇಬ್ಬರ ಡ್ರೆಸ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಂಗೀತ ಸಮಾರಂಭದಲ್ಲಿ ಆತಿಯಾ ಧರಿಸಿದ್ದ ಲೆಂಹಂಗಾ ಆಕರ್ಷಕವಾಗಿತ್ತು.  ಸ್ವರೋವ್ಸ್ಕಿ ಸ್ಫಟಿಕಗಳಿಂದ ಮಾಡಲ್ಪಟ್ಟ ಚಿಕನ್‌ಕಾರಿ ಲೆಹಂಗಾ ಧರಿಸಿದ್ದರು. ಆಂಟಿಕ್ ಕಿವಿಯೋಲೆ ಮತ್ತು ಅಜ್ಜಿಯಿಂದ ಬಂದ ಪಾರಂಪರಿಕ ಆಭರಣಗಳನ್ನು ಧರಿಸಿದ್ದರು.  

ಜನವರಿ 22ರಂದು ನಡೆದ ಮೆಹಂದಿ ಮತ್ತು ಸಂಗೀತ ಸಮಾರಂಭದ ಫೋಟೋಗಳನ್ನು ಕೆಎಲ್ ರಾಹುಲ್ ಮತ್ತು ಆತಿಯಾ ಶೆಟ್ಟಿ ಇಬ್ಬರು ಈಗ ಹಂಚಿಕೊಂಡಿದ್ದಾರೆ. ಆತಿಯಾ ಅಂಜುಲ್ ಭಂಡಾರಿ ಅವರು ಡಿಸೈನ್ ಮಾಡಿರುವ ಲೆಹಂಗಾ ಧರಿಸಿದ್ದರು. ಸಂಗೀತ ಸಮಾರಂಭಕ್ಕೆ ಧರಿಸಿದ್ದ ಲೆಹಂಗಾದಲ್ಲಿ ಕೈಯಿಂದ ಮಾಡಿದ ನೇಯ್ಗೆ, ಮುತ್ತು ಮತ್ತು 39 ಸಾವಿರಕ್ಕೂ ಹೆಚ್ಚು ಸ್ವರೋವ್ಸ್ಕಿ ಸ್ಫಟಿಕಗಳಲ್ಲಿ ವಿಷೇಶ ಲೆಹಂಗಾ ಡಿಸೈನ್ ಮಾಡಲಾಗಿತ್ತು.

ಅಜ್ಜಿಯ ಆಭರಣ, ದುಬಾರಿ ಲೆಹಂಗಾ; ಸಂಗೀತ, ಮೆಹಂದಿ ಸಂಭ್ರಮದಲ್ಲಿ ಆತಿಯಾ ಜೊತೆ ರಾಹುಲ್ ಮಸ್ತ್ ಡಾನ್ಸ್

ಆತಿಯಾ ಮದುವೆಗೂ ವಿಶೇಷವಾದ ಲೆಹಂಗಾ ಧರಿಸಿದ್ದರು. ವಿಶೇಷವಾಗಿ ಡಿಸೈನ್ ಮಾಡಿಸಿ ಲೆಹಂಗಾ ಧರಿಸಿದ್ದ ಫೋಟೋಗಳನ್ನು ಈಗ ಶೇರ್ ಮಾಡುತ್ತಿದ್ದು ವೈರಲ್ ಆಗುತ್ತಿವೆ. ಮದುವೆ ದಿನ ಧರಿಸಿದ್ದ ಲೆಹಂಗಾವನ್ನು ಬರೋಬ್ಬರಿ 1 ವರ್ಷ 51 ದಿನಗಳಿಂದ ತಾಯಿರಿಸಿರುವುದು ವಿಶೇಷವಾಗಿತ್ತು. ಸದ್ಯ ಇಬ್ಬರೂ ಮದುವೆ ಜೀವನ ಎಂಜಾಯ್ ಮಾಡುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್