60 ವರ್ಷದ ಆಶಿಷ್​ ವಿದ್ಯಾರ್ಥಿ ಹನಿಮೂನ್​ ಫೋಟೋ ವೈರಲ್​: ಫ್ಯಾನ್ಸ್​ ಏನ್​ ಹೇಳಿದ್ರು?

By Suvarna News  |  First Published Jul 12, 2023, 12:49 PM IST

ನಟ ಆಶಿಷ್​ ವಿದ್ಯಾರ್ಥಿ ತಮ್ಮ ಪತ್ನಿಯ ಜೊತೆ ಹನಿಮೂನ್​ಗಾಗಿ ಇಂಡೋನೇಷಿಯಾದ ಬಾಲಿಗೆ ತೆರಳಿದ್ದು ಅದರ ಫೋಟೋ ವೈರಲ್​ ಆಗಿದೆ. 


ಬಹುಭಾಷಾ ನಟ ಆಶಿಷ್​ ವಿದ್ಯಾರ್ಥಿ (Ashish Vidyarthi) ಇತ್ತೀಚೆಗೆ ಭಾರಿ ಸುದ್ದಿಯಲ್ಲಿರುವ ನಟ. ಇದಕ್ಕೆ ಕಾರಣ, ಅವರು ಈಚೆಗೆ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾಗಿದ್ದರು.  ಅವರು ಮೊದಲು  ರಾಜೋಶಿ ಎಂಬುವವರನ್ನು ಮದುವೆಯಾಗಿದ್ದರು. ಇವರು  ನಟಿ ಶಕುಂತಲಾ ಬರುವಾ ಅವರ ಪುತ್ರಿ. ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆದರೆ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ನಂತರ ಉದ್ಯಮಿ ರೂಪಾಲಿ ಅವರನ್ನ ಆಶಿಷ್​ 60ನೇ ವಯಸ್ಸಿನಲ್ಲಿ  ಮದುವೆಯಾಗಿದ್ದರು. ರೂಪಾಯಿ ಅವರಿಗೆ 33 ವರ್ಷ ವಯಸ್ಸು. ಕೋಲ್ಕತಾದ ಕ್ಲಬ್‌ನಲ್ಲಿ ಮೇ25ರಂದು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಈ ವಯಸ್ಸಿನಲ್ಲಿ ವಿವಾಹವಾದುದಕ್ಕೆ ಸಕತ್​ ಟ್ರೋಲ್​ ಕೂಡ ಆಗಿದ್ದರು.  ಇದಕ್ಕೆ ಬೇಸರ ವ್ಯಕ್ತಪಡಿಸಿದ್ದ ಆಶಿಷ್​ ‘ಅನೇಕರು ನನ್ನ ಮದುವೆ ಬಗ್ಗೆ ಟ್ರೋಲ್ ಮಾಡಿದ್ದಾರೆ. ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಆದರೆ ತಪ್ಪೇನು? ನಾನು ಒಂಟಿಯಾಗಿ, ನೆಮ್ಮದಿಯಿಲ್ಲದೇ ಸಾಯಬೇಕಿತ್ತಾ?’ ಎಂದು ಅವರು ಪ್ರಶ್ನೆ ಮಾಡಿದ್ದರು. ಮದುವೆ ಅನ್ನುವುದು ವಯಸ್ಸಿಗೆ ಅಥವಾ ದೇಹಕ್ಕೆ ಸಂಬಂಧಿಸಿದ್ದಲ್ಲ, ಮನಸ್ಸಿಗೆ ಸಂಬಂಧಿಸಿದ್ದು ಎಂದು ಉತ್ತರ ನೀಡಿದ್ದರು. ಈ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದರು.

ಇದೀಗ ಈ ಜೋಡಿ ಹನಿಮೂನ್​ಗೆ ಇಂಡೋನೇಷ್ಯಾದ (Indonesia) ಬಾಲಿ ದ್ವೀಪಕ್ಕೆ ಹಾರಿದೆ. ಈ ಫೋಟೋಗಳನ್ನು ರೂಪಾಲಿ ಅವರು ಶೇರ್​ ಮಾಡಿಕೊಂಡಿದ್ದಾರೆ.   ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಕುಳಿತುಕೊಂಡಿರುವ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ.  ಈ ಹಿಂದೆ ಇವರು ಸಿಂಗಪುರಕ್ಕೆ ಹನಿಮೂನ್​ಗೆ ಹೋಗಿದ್ದರು. ಆಗ  ಫೋಟೋ ಶೇರ್​ ಮಾಡಿಕೊಂಡಿದ್ದರು. 

Tap to resize

Latest Videos

ಶಿವಾಜಿನಗರದ ಮಿಲಿಟರಿ ಹೋಟೆಲ್‌ನಲ್ಲಿ ಆಶಿಷ್ ವಿದ್ಯಾರ್ಥಿ: ಊಟ ಸವಿದು ವಾವ್.. ಎಂದ ನಟ

ಇದೀಗ ಎರಡನೆಯ ಬಾರಿ ಹನಿಮೂನ್​ (honeymoon) ಮೂಡ್​ನಲ್ಲಿದ್ದಾರೆ. ಈ ಮೊದಲಾದರೆ ಇವರಿಗೆ ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಕೇಳಿದವರೇ ಹೆಚ್ಚು. ಆದರೆ ಈ ಫೋಟೋದಲ್ಲಿ ಜನರು ಆಶಿಷ್​ ವಿದ್ಯಾರ್ಥಿಯವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಂತಿದೆ. ಹಲವಾರು ಫ್ಯಾನ್ಸ್​ ಆಶಿಷ್​ ಅವರ ಈ ಫೋಟೋಗೆ ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಫೋಟೋ ಸೂಪರ್​ ಆಗಿವೆ ಎಂದಿದ್ದಾರೆ. ಇನ್ನು ಕೆಲವರು ಸರ್​ ನೀವು ಯಾವುದೇ ಟೀಕೆಗಳಿಗೆ ಕಿವಿಗೊಡಬೇಡಿ. ಜನರಿಗೆ ಏನು ಮಾಡಿದರೂ ತಪ್ಪೇ. ಅವರನ್ನು ಸಮಾಧಾನಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ದೇವರು ನಿಮಗೆ ಒಳ್ಳೆಯದ್ದನ್ನು ಮಾಡಲಿ ಎಂದು ಹಾರೈಸಿದವರೇ ಹೆಚ್ಚು. ಕೆಲವೇ ಕೆಲವು ಜನರು ವಯಸ್ಸಿನ ಬಗ್ಗೆ ಕಾಲೆಳೆದಿದ್ದರೂ ಈ ಬಾರಿ ನಟನಿಗೆ ಶ್ಲಾಘನೆ ವ್ಯಕ್ತವಾಗಿದೆ. 


ಅಂದಹಾಗೆ  ಆಶಿಷ್ ವಿದ್ಯಾರ್ಥಿ ಅವರು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ನಟಿಸಿದ್ದಾರೆ. ಆಶಿಶ್ ವಿದ್ಯಾರ್ಥಿ ಪ್ಯಾನ್-ಇಂಡಿಯನ್ ನಟನಾಗಿದ್ದರೂ ಹೆಚ್ಚಾಗಿ ತಮಿಳು (Tamil) ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಟಾಲಿವುಡ್, ಕಾಲಿವುಡ್, ಹಾಗೂ ಸ್ಯಾಂಡಲ್ವುಡನಲ್ಲಿ ಖಳನಾಯಕ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಬಾ, ಗಿಲ್ಲಿ, ಮಾಪಿಳ್ಳೈ, ಉತ್ತಮ ಪುತ್ರನ್ ಸೇರಿದಂತೆ ಹಲವು ತಮಿಳು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ. ಅವರ ವಿಲನ್​ ಲುಕ್​ಗೆ ಅವರೇ ಸಾಟಿ. ಅತ್ಯುತ್ತಮ ಅಭಿನಯಕ್ಕಾಗಿ 1995 ರಲ್ಲಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇತ್ತೀಚಿಗೆ ಸಿನಿಮಾಗಳಲ್ಲಿ ಅವರು ಆಶಿಷ್ ವಿದ್ಯಾರ್ಥಿ  ಹೆಚ್ಚು ಕಾಣಿಸಿಕೊಂಡಿಲ್ಲ. ಅವರೊಂದು ಯೂಟ್ಯೂಬ್​ ಶುರು ಮಾಡಿದ್ದು, ಅದರಲ್ಲಿ ಆಹಾರದ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಅದರಲ್ಲಿಯೂ ಕರ್ನಾಟಕದ ಆಹಾರ ಎಂದರೆ ಅವರಿಗೆ ಪ್ರೀತಿ.  ತಮ್ಮಿಷ್ಟದ ಊಟದ ಬಗ್ಗೆ ಆಶಿಷ್ ವಿಲಾಗ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ದೇಶದ ವಿವಿದ ಪ್ರದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಫೇಮಸ್ ಹೋಟೆಲ್‌ಗೆ ಹೋಗಿ ಊಟ ಸವಿದು ಅಭಿಮಾನಿಗಳಿಗೂ ವಿವರಿಸುತ್ತಿದ್ದಾರೆ. 

ಮಲೈಕಾ- ಅರ್ಜುನ್​ ನೈಟ್​ ಔಟ್​: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!
 

 
 
 
 
 
 
 
 
 
 
 
 
 
 
 

A post shared by Rupali Barua (@ru.pa.li.73)

click me!