ಚುನಾವಣಾ ಪ್ರಚಾರ ಮುಗೀತಿದ್ದಂತೆಯೇ ಕುತೂಹಲದ ಟ್ವೀಟ್ ಮಾಡಿದ ಸುದೀಪ್​

Published : May 10, 2023, 12:23 PM IST
ಚುನಾವಣಾ ಪ್ರಚಾರ ಮುಗೀತಿದ್ದಂತೆಯೇ ಕುತೂಹಲದ ಟ್ವೀಟ್ ಮಾಡಿದ ಸುದೀಪ್​

ಸಾರಾಂಶ

ಬಿಜೆಪಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದ ನಟ ಕಿಚ್ಚ ಸುದೀಪ್​ ಅವರು ಪ್ರಚಾರ ಕಾರ್ಯ ಮುಗಿಯುತ್ತಿದ್ದಂತೆಯೇ ಟ್ವಿಟರ್​ನಲ್ಲಿ ಪತ್ರವೊಂದನ್ನು ಬರೆದಿದ್ದಾರೆ. ಏನದು?  

ರಾಜ್ಯ ವಿಧಾನಸಭಾ ಚುನಾವಣೆಯ (Vidhanasabha election) ಕಾವು ಜೋರಾಗಿರೋ ಈ ಹೊತ್ತಿನಲ್ಲಿ ಬಹುತೇಕ ಪಕ್ಷಗಳು ಸ್ಟಾರ್​ ಪ್ರಚಾರಕರನ್ನು ಕರೆಸಿಕೊಂಡಿದ್ದವು. ಅದರಲ್ಲಿ ಬಿಜೆಪಿ ವತಿಯಿಂದ ಕಿಚ್ಚ ಸುದೀಪ್​  ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಸುದೀಪ್​ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರವಾಗಿ ಭರ್ಜರಿ ಪ್ರಚಾರ ಕಾರ್ಯ ನಡೆಸಿದ್ದರು. ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಶಿಕಾರಿಪುರ ಕ್ಷೇತ್ರವ್ಯಾಪ್ತಿಯ ಶಿಕಾರಿಪುರ (Shikaripura) ಹಾಗೂ ಶಿರಾಳಕೊಪ್ಪಗಳಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಪರ ಪ್ರಚಾರ ನಡೆಸಿದ್ದರು. ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ರೋಡ್‌ ಶೋ  ನಡೆಸಿದ್ದರು. ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅದ್ದೂರಿ ಪ್ರಚಾರಕ್ಕೆ ನಟ ಕಿಚ್ಚ ಸುದೀಪ್ ಕೂಡ ಭರ್ಜರಿಯಾಗಿಯೇ ಸಾಥ್‌ ನೀಡಿದರು. ಇದೇ ಮೊಟ್ಟ ಮೊದಲ ಬಾರಿ ಬೆಂಗಳೂರಿನಲ್ಲಿ ಮತ ಬೇಟೆಗಿಳಿದ ಕಿಚ್ಚ ಸುದೀಪ್, ತೆರೆದ ವಾಹನದಲ್ಲಿ ರೋಡ್ ಶೋ ಮೂಲಕ ಭರ್ಜರಿ ಮತಬೇಟೆ ಮಾಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರಕ್ಕಿಳಿದಿದ್ದರು.  ಇಂದು ಮತದಾನ ನಡೆಯುತ್ತಿದ್ದು, 13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.  ಸುದೀಪ್​ ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ. ನಂತರ ಅವರೇ ಬೇರೆ ಸ್ಟಾರ್​ ನಟರನ್ನು ತಮ್ಮ ಪಕ್ಷದ ಪ್ರಚಾರಕ್ಕೆ ತೊಡಗಿಸಿಕೊಂಡಿರುವುದೂ ನಡೆದಿದೆ. ಈ ಹಿನ್ನೆಲೆಯಲ್ಲಿ ಸುದೀಪ್​ ಸದ್ಯ ಭಾರಿ ಸುದ್ದಿಯಲ್ಲಿದ್ದಾರೆ.

ಈಗ ಇಂಥ ಸುದೀಪ್​ ಪತ್ರವೊಂದನ್ನು (Letter) ಬರೆದಿದ್ದು ಬಹಳ ಕುತೂಹಲ ಮೂಡಿಸಿದೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಅವರು ಈ ಪತ್ರವನ್ನು ಬರೆದಿದ್ದಾರೆ. ಅಷ್ಟಕ್ಕೂ ಈ ಪತ್ರದಲ್ಲಿ ಏನಿದೆ ಎನ್ನುವುದೇ ವಿಶೇಷ. ಅಷ್ಟಕ್ಕೂ ಅವರು ಪತ್ರ ಬರೆದಿರುವುದು ವಿಧಾನಸಭಾ ಚುನಾವಣೆ ಪ್ರಚಾರದ ಕುರಿತಾಗಿಯೇ. ಪ್ರಚಾರ ಮುಗಿಸಿ ಸದ್ಯ  ಹೊಸ  ಸಿನಿಮಾದ  ಪ್ರೊಮೋ ಶೂಟಿಂಗ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಸುದೀಪ್​. ಈ ನಡುವೆಯೇ, ಚುನಾವಣೆಗೆ ಸಂಬಂಧಿಸಿದ ಪತ್ರವೊಂದನ್ನು ಅಪ್​ಲೋಡ್​ ಮಾಡಿದ್ದಾರೆ. ಇದರಲ್ಲಿ ಅವರು  ಪ್ರಚಾರದ ವೇಳೆಯಲ್ಲಿ ಆದ ಅನುಭವವನ್ನು ಅವರು ಕಾವ್ಯ  ರೂಪದಲ್ಲಿ ಇಳಿಸಿದ್ದಾರೆ. ಜೊತೆಗೆ ಪೊಲೀಸ್ ಏಟು ತಿಂದವರ ಕ್ಷಮೆಯನ್ನೂ ಅವರು ಕೇಳಿದ್ದಾರೆ.

ಮದ್ವೆಗಾಗಿ ಮತಾಂತರಗೊಂಡಿದ್ರಾ ಖುಷ್ಬೂ? ಟ್ರೋಲಿಗರ ಪ್ರಶ್ನೆಗೆ ಹೀಗ್ ಹೇಳಿದ್ರು ನಟಿ

ಪತ್ರದಲ್ಲಿ ಏನಿದೆ?
ಟ್ವಿಟರ್​ನಲ್ಲಿ (Twitter) ಪೋಸ್ಟ್​ ಮಾಡಿರುವ ಪತ್ರದಲ್ಲಿ ‘ನಿಮ್ಮ ಕಣ್ಣಲ್ಲಿ ಕಂಡ ಅಪಾರ ಪ್ರೀತಿ ನನ್ನ ಬದುಕಿನ ರೀತಿ. ನಿಮ್ಮ ನಿರಂತರ ರಣಕೇಕೆ ಸಾಕಿಷ್ಟು ಈ ಜನುಮಕೆ. ಹಣತೆ ಹೊತ್ತಿಸಿ ಆರತಿ ಎತ್ತಿದಿರಿ. ದಾರಿಯುದ್ದಕ್ಕೂ ಹೂವ ಚೆಲ್ಲಿದಿರಿ. ನಿಮ್ಮ ಎದೆಯ ಮೇಲಿನ ಹಚ್ಚೆಯಂತೆ ಸದಾ ಜೊತೆಗಿರುವ’ ಎಂದು ಅಭಿಮಾನಿಗಳಿಗೆ ಮತ್ತು ನಾಡಿನ ಜನತೆಗೆ ಅವರು ಧನ್ಯವಾದಗಳನ್ನು ಹೇಳಿದ್ದಾರೆ. ‘ಜನಸಾಗರದ ನೂಕು ನುಗ್ಗಲಿನಲ್ಲಿ ಕೆಲವರಿಗೆ ಬಿದ್ದ ಪೊಲೀಸ್ ಲಾಠಿ ಏಟಿಗೆ ಕ್ಷಮೆ ಇರಲಿ. ಸ್ನೇಹಿತರೆ, ನಿಮ್ಮ ಪ್ರತಿ ಮನದಲ್ಲಿ ಈ ಪ್ರೀತಿ ಹೀಗೇ ಇರಲಿ. ಕರುನಾಡಲ್ಲಿ ನಡೆದ ಈ ಮೆರವಣಿಗೆಯುದ್ದಕ್ಕೂ ಜೊತೆಯಾಗಿ ಸಾಗಿ ಮಾಧ್ಯಮ ಮಿತ್ರರಿಗೆ, ಕಾಳಜಿಯಿಂದ ಕಾವಲಿಟ್ಟ ಪೊಲೀಸ್ ಸಿಬ್ಬಂದಿಗೆ, ಮಿಲಿಟರಿ ಕಮಾಂಡೋ ಸಿಬ್ಬಂದಿಗೆ, ಲಕ್ಷಾಂತರ ಕಾರ್ಯಕರ್ತರಿಗೆ ಮತ್ತು ಹೃದಯಗೀತೆಯಾದ ನನ್ನ ಪ್ರೀತಿಯ ಸ್ನೇಹಿತರಿಗೆ ಚಿರಋಣಿ’ ಎಂದು ಸುದೀಪ್​ ಬರೆದಿದ್ದಾರೆ.

ಸದ್ಯ ಸುದೀಪ್​, ಹೊಸ ಸಿನಿಮಾದ ಪ್ರೋಮೋ (Promo) ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ತಿಂಗಳು ಪ್ರೋಮೋ ಶೂಟಿಂಗ್ ನಡೆಯಲಿದ್ದು, ಇದರ ಮಾಹಿತಿಯನ್ನು ಜೂನ್ 1ರಂದು ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.  

Aamir Khan: ಮೋದಿ ಹೊಗಳಿದ ಆಮೀರ್​ ಖಾನ್​ ನೇಪಾಳಕ್ಕೆ ಹಾರಿದ್ಯಾಕೆ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?