
ಕೊರೋನಾ ಎರಡನೇ ಅಲೆ ಭಾರತದಲ್ಲಿ ಭೀಕರ ಪರಿಣಾಮವನ್ನು ಬೀರುತ್ತಿದೆ. ನೂರಲ್ಲಿದ್ದ ಸಾವಿನ ಸಂಖ್ಯೆ ಸಾವಿರ ತಲುಪಿದ್ದರೆ, ಸಾವಿರದಲ್ಲಿದ್ದ ಸೋಂಕಿತರ ಸಂಖ್ಯೆ ಲಕ್ಷಕ್ಕೆ ತಲುಪಿದೆ. ಭಾರತದಿಂದ ಪ್ರಯಾಣಿಕರನ್ನು ನಿಷೇಧಿಸಿದ ರಾಷ್ಟ್ರಗಳ ಸಾಲಿಗೆ ದ್ವೀಪರಾಷ್ಟ್ರ ಮಾಲ್ಡೀವ್ಸ್ ಕೂಡಾ ಸೇರಿಕೊಂಡಿದೆ.
ಮಾಲ್ಡೀವ್ಸ್‌ನಂತಹ ದ್ವೀಪ ದೇಶಗಳು ಐಷರಾಮಿ ಹೋಟೆಲ್, ಪ್ರಕೃತಿ ಸೌಂದರ್ಯದ ಮೂಲಕ ಪ್ರವಾಸಿಗರನ್ನು ಸೆಳೆಯುತ್ತಿತ್ತು. ಭಾರತದ ಬಾಲಿವುಡ್ ಸೆಲೆಬ್ರಿಟಿಗಳಂತೂ ಅಲ್ಲೇ ಬೀಡು ಬಿಟ್ಟಿದ್ದರು ಎನ್ನಬಹುದು. ಬನ್ನಿ ಬನ್ನಿ ಅಂತ ಬಾಲಿವುಡ್ ತಾರೆಗಳನ್ನ ಕರೆಸ್ಕೊಂಡ ಮಾಲ್ಡೀವ್ಸ್ ಒಮ್ಮೆ ಇಲ್ಲಿಂದ ಹೋಗಿ ಅಂತ ದಂಬಾಲು ಬೀಳೋ ಹಾಗಾಗಿದೆ.
ಕೊರೋನಾ ಟೈಂನಲ್ಲಿ ಮಾಲ್ಡೀವ್ಸ್‌ನಲ್ಲಿ ಮಜಾ: ಸ್ವಲ್ಪನಾದ್ರೂ ನಾಚ್ಕೆ ಪಡ್ಕೊಳ್ಳಿ ಎಂದ ನಟ
ಪ್ರತಿದಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಭಾರತದಿಂದ ವಿಮಾನಗಳನ್ನು ನಿಷೇಧಿಸಲು ನಿರ್ಧರಿಸಿದೆ. ಭಾನುವಾರ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯವು ತಮ್ಮ ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಿದೆ.
ಸಾರಾ ಅಲಿಖಾನ್, ಶ್ರದ್ಧಾ ಕಪೂರ್, ಮಾಧುರಿ, ಶಿಲ್ಪಾ ಶೆಟ್ಟಿ, ದಿಯಾ ಮಿರ್ಝಾ, ಜಾಹ್ನವಿ, ಮೌನಿ ರಾಯ್, ಗೌತಮಿ ಸೇರಿದಂತೆ ಬಾಲಿವುಡ್‌ನಲ್ಲಿ ಜಾಲಿ ಮಾಡಿದ ಸೆಲೆಬ್ರಿಟಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತೆ. ಅಂತೂ ಇಂತೂ ಸದ್ಯ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ.
ಈ ಸುದ್ದಿ ಹೊರಗೆ ಬೀಳ್ತಿದ್ದಂತೆ ದೇಸಿ ನೆಟ್ಟಿಗರು ಬಾಲಿವುಡ್ ಬೇಬಿಗಳನ್ನು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ. ಬರೀ ಇದಕ್ಕೆ ಸಂಬಂಧಿಸಿದ ಕಾಲೆಳೆಯೂ ಮೆಮ್ಸ್ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.