Arbaaz Merchant Application: ಶಾರೂಖ್ ಮಗನ ಭೇಟಿಯಾಗಲು ಕೋರ್ಟ್‌ಗೆ ಅರ್ಜಿ, ಅರ್ಬಾಝ್ ಹೊಸ ನಡೆ

Suvarna News   | Asianet News
Published : Jan 07, 2022, 03:07 PM IST
Arbaaz Merchant Application: ಶಾರೂಖ್ ಮಗನ ಭೇಟಿಯಾಗಲು ಕೋರ್ಟ್‌ಗೆ ಅರ್ಜಿ, ಅರ್ಬಾಝ್ ಹೊಸ ನಡೆ

ಸಾರಾಂಶ

ಅರ್ಬಾಝ್ ಮರ್ಚೆಂಟ್‌ಗೆ ಗೆಳೆಯ ಆರ್ಯನ್ ಖಾನ್‌ನನ್ನು ಭೇಟಿ ಮಾಡೋ ತವಕ ಶಾರೂಖ್ ಮಗನ ಭೇಟಿಗಾಗಿ ಕೋರ್ಟ್‌ಗೆ ಅರ್ಜಿ ಡ್ರಗ್ಸ್ ಕೇಸ್ ಜಾಮೀನು ಪಡೆದ ನಂತರ ಭೇಟಿಯಾಗಲು ಅನುಮತಿ ನಿರಾಕರಿಸಿದ್ದ ಕೋರ್ಟ್

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್(Aryan Khan) ಮತ್ತು ಅರ್ಬಾಜ್ ಮರ್ಚೆಂಟ್(Arbaaz Merchant) ಕಳೆದ ವರ್ಷ ಡ್ರಗ್ಸ್‌ ಕೇಸ್‌ಗೆ(Drugs Case) ಸಂಬಂಧಿತ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಂತರ ದೇಶಾದ್ಯಂತ ಜನರ ಗಮನ ಸೆಳೆದಿದ್ದರು. ಅವರು ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಜೈಲಿನಿಂದ ಹೊರಬಂದ ನಂತರ ಪರಸ್ಪರ ಭೇಟಿಯಾಗುವುದನ್ನು ನಿಷೇಧಿಸುವ ಷರತ್ತನ್ನು ಕೋರ್ಟ್ ವಿಧಿಸಿತ್ತು. ಆರೋಪಿಗಳು ಪರಸ್ಪರ ಸಂವಹನ ನಡೆಸುವುದನ್ನು ನಿಷೇಧಿಸಲು ಜಾಮೀನು ಅರ್ಜಿಯಲ್ಲಿ ಈ ಷರತ್ತು ಅಳವಡಿಸಲಾಗಿದೆ. ಆದರೆ ಈಗ ಇತ್ತೀಚಿನ ವರದಿಗಳ ಪ್ರಕಾರ ಅರ್ಬಾಜ್ ಈ ಷರತ್ತನ್ನು ಕೈಬಿಡುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದಾರೆ.

ಅರ್ಬಾಜ್ ಮರ್ಚೆಂಟ್ ಅವರ ತಂದೆ ಅಸ್ಲಾಮ್ ಮರ್ಚೆಂಟ್ ಅವರು ಈ ವಿಚಾರವನ್ನು ಎನೌನ್ಸ್ ಮಾಡಿದ್ದಾರೆ. ನನ್ನ ಮಗ ನಿಜವಾಗಿಯೂ ತನ್ನ ಆತ್ಮೀಯ ಸ್ನೇಹಿತ ಆರ್ಯನ್ ಅವರನ್ನು ಭೇಟಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಾನೆ. ಆದ್ದರಿಂದ ಆರ್ಯನ್ ಖಾನ್ ಅವರನ್ನು ಭೇಟಿಯಾಗದಿರುವ ಕಂಡೀಷನ್ ಬಿಟ್ಟುಬಿಡುವಂತೆ ಕೋರಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಕರಡು ಸಿದ್ಧಪಡಿಸಲಾಗುತ್ತಿದೆ. ನನ್ನ ಮಗ ಪ್ರತಿ ವಾರ ಎನ್‌ಸಿಬಿ ಅಧಿಕಾರಿಗಳನ್ನು ಭೇಟಿ ಮಾಡಲು ಮನಸ್ಸಿಲ್ಲ ಎಂದು ಹೇಳಿದ್ದಾನೆ. ಆದರೆ ಅವನು ತನ್ನ ಸ್ನೇಹಿತ ಆರ್ಯನ್‌ನನ್ನು ಭೇಟಿಯಾಗಿ ಮಾತನಾಡಲು ಬಯಸುತ್ತಾನೆ ಎಂದಿದ್ದಾರೆ.

NCB ಆಫೀಸ್ ಮುಂದೆ ಪೋಸ್ ಕೊಡೋಕೆ ತಂದೆ ಒತ್ತಾಯ, ಸ್ಟಾಪಿಟ್ ಎಂದ ಮಗ, ಪಾಪ್ಪರಾಜಿಗೆ ನಗುವೋ ನಗು

ಈ ಇಬ್ಬರೂ ಸ್ನೇಹಿತರು ಅಕ್ಟೋಬರ್ 2 ರಂದು ಅವರು ಗೋವಾ ಕ್ರೂಸ್ ಹಡಗಿನಲ್ಲಿ ಪಾರ್ಟಿ ಮಾಡುತ್ತಿದ್ದಾಗ NCB ದಾಳಿ ನಡೆಸಿ ಕಸ್ಟಡಿಗೆ ತೆಗೆದುಕೊಂಡಿತು. ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದ ನಂತರ ಆರ್ಯನ್ ಮತ್ತು ಅರ್ಬಾಜ್ ಇಬ್ಬರೂ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾದರು. ಈ ಕಾನೂನು ಹೋರಾಟ ಭಾರೀ ಚರ್ಚೆಯಾಗಿತ್ತು. ಉದ್ಯಮಿ ಹಾಗೂ ನಟನ ಮಗ ಜೈಲಿನಲ್ಲಿ ಉಳಿದದ್ದು ಅವರನ್ನು ಹೊರ ಕರೆತರಲು ಸಾಕಷ್ಟು ಪ್ರಯತ್ನದ ನಂತರವೂ ಇದು ಬಹಳ ತಡವಾಗಿ ಸಾಧ್ಯವಾಯಿತು.

ವರದಿಯ ಪ್ರಕಾರ, ಅರ್ಬಾಜ್ ಮರ್ಚೆಂಟ್ ಅವರ ವಕೀಲರು ಅರ್ಬಾಜ್ ಮತ್ತು ಆರ್ಯನ್ ಖಾನ್ ಅವರ ಭೇಟಿಗೆ ಅನುಮತಿ ಕೋರಿ ಈ ಅರ್ಜಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಆರೋಪಿಗಳು ಸಂವಹನ ನಡೆಸದಂತೆ ಮತ್ತು ಆ ಮೂಲಕ ಏಜೆನ್ಸಿಯ ನಡೆಯುತ್ತಿರುವ ತನಿಖೆಯ ಮೇಲೆ ಪ್ರಭಾವ ಬೀರಲು ಎನ್‌ಸಿಬಿ ಅಂತಹ ಷರತ್ತುಗಳನ್ನು ಜಾಮೀನಿನಲ್ಲಿ ವಿನಂತಿಸುತ್ತದೆ. ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಬಹಳ ಹಿಂದಿನಿಂದಲೂ ಸ್ನೇಹಿತರು ಎಂದು ಹೇಳಲಾಗುತ್ತದೆ. ಅವರು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರು ಒಟ್ಟಿಗೆ ಇರುವಂತಹ ಬಹಳಷ್ಟು ಫೋಟೋಗಳು ಹಿಂದೆ ವೈರಲ್ ಆಗಿದ್ದವು.

ಯಾರೀತ ಅರ್ಬಾಝ್ ಮರ್ಚೆಂಟ್?

ಈ ಕೇಸ್‌ನಲ್ಲಿ ಆರೆಸ್ಟ್‌ ಆಗಿರುವ ಆರ್ಯನ್ ಗೆಳೆದ ಅರ್ಬಾಜ್ ಮರ್ಚೆಂಟ್. ಈತ  ವೃತ್ತಿಯಲ್ಲಿ ನಟ ಮತ್ತು ಆರ್ಯನ್ ಖಾನ್ ಕ್ಲೋಸ್‌ ಫ್ರೆಂಡ್‌. ಮರ್ಚೆಂಟ್‌ ಅನೇಕ ಬಾರಿ ಸುಹಾನಾ ಮತ್ತು ಆರ್ಯನ್ ಜೊತೆ ಪಾರ್ಟಿ ಮಾಡುತ್ತಿರುವುದನ್ನು ಗುರುತಿಸಲಾಗಿದೆ. ಕೆಲವು ಫೋಟೋಗಳಲ್ಲಿ, ಅವರು ಚಂಕಿ ಪಾಂಡೆಯವರ ಮಗಳು ಮತ್ತು ನಟಿ ಅನನ್ಯಾ ಪಾಂಡೆ (Ananya Panday)ಯೊಂದಿಗೆ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿದೆ. ಅವನು ಹಲವು ವರ್ಷಗಳ ಹಿಂದೆ ಅಲಯಾ ಎಫ್ ಜೊತೆ ಡೇಟಿಂಗ್ (Dating) ಮಾಡುತ್ತಿದ್ದನೆಂಬ ವದಂತಿಗಳಿದ್ದವು.  ಉಳಿದ ಬಂಧಿತರಾದ ಮೋಹಕ್ ಜಸ್ವಾಲ್, ನೂಪುರ್ ಸಾರಿಕಾ ಎಡಿಬಿ ಗೋಮಿತ್ ಚೋಪ್ರಾ ದೆಹಲಿಯ ನಿವಾಸಿಗಳು. ಮೊಹಕ್ ಮತ್ತು ನೂಪುರ್ ಇಬ್ಬರೂ ಫ್ಯಾಷನ್ ಡಿಸೈನರ್ ಆಗಿದ್ದರೆ, ಗೋಮಿತ್ ಕೇಶ ವಿನ್ಯಾಸಕಿ ಮತ್ತು ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್‌.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?