ಶಾರುಖ್ ಪುತ್ರನ ಬಿಜಿನೆಸ್ ಬಲು ಜೋರಾಗಿ ನಡೆಯುತ್ತಿದೆ. ಜಾಕೆಟ್ ಬೆಲೆಯೇ ಒಂದು ಲಕ್ಷ ರೂಪಾಯಿ ಆಗಿದ್ದರೂ ಬಿಡುಗಡೆಯಾದ ತಕ್ಷಣವೇ ಸೇಲ್ ಆಗುತ್ತಿರುವುದು ವಿಶೇಷ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಹೆಸರು ಕೆಲ ವರ್ಷಗಳ ಹಿಂದೆ ಡ್ರಗ್ಸ್ ಕೇಸ್ನಲ್ಲಿ ಥಳುಕು ಹಾಕಿಕೊಂಡಿತ್ತು. ಆದರೆ ಇದೀಗ ಆರ್ಯನ್ ದೊಡ್ಡ ಬಿಜಿನೆಸ್ಮೆನ್ ಆಗಿ ಹೊರಹೊಮ್ಮಿದ್ದಾರೆ. ಸ್ಟಾರ್ ಮಕ್ಕಳಿಗೆ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಅವರು ನೇರವಾಗಿ ಚಿತ್ರರಂಗಕ್ಕೂ ಎಂಟ್ರಿ ಪಡೆಯಬಹುದುದ. ಆದರೆ ಆರ್ಯನ್ ಖಾನ್ ಈ ವಿಚಾರದಲ್ಲಿ ಕೊಂಚ ಭಿನ್ನ. ನಿರ್ದೇಶನದಲ್ಲಿ ಅವರು ವೃತ್ತಿಜೀವನ ಕಟ್ಟಿಕೊಳ್ಳಲು ನಿರ್ಧರಿಸಿರೋ ಆರ್ಯನ್, ಬಿಜಿನೆಸ್ ಬಗ್ಗೆಯೂ ಇಂಟರೆಸ್ಟ್ ತೋರಿಸಿದ್ದಾರೆ. ಕಳೆದ ವರ್ಷ ತಮ್ಮದೇ ಹೊಸ ಬ್ರ್ಯಾಂಡ್ನ ಕಾಸ್ಟ್ಯೂಮ್ಗಳನ್ನು ಅವರು ಮಾರುಕಟ್ಟೆಗೆ ಪರಿಚಯಿಸಿದ್ದದರು. ಆ ಕ್ಷೇತ್ರದಲ್ಲಿ ಅವರಿಗೆ ಭರ್ಜರಿ ಲಾಭ ಆಗುತ್ತಿದೆ. ಇದೀಗ ತಮ್ಮದೇ ಸ್ವಂತ ಪ್ರೀಮಿಯಂ ಸ್ಟ್ರೀಟ್ ವೇರ್ ಬ್ರ್ಯಾಂಡ್ ಡಿ'ಯಾವೋಲ್ ಅನ್ನು ಪ್ರಾರಂಭ ಮಾಡಿದ್ದಾರೆ. ಆರ್ಯನ್ ಕಳೆದ ವರ್ಷ ತಮ್ಮ ಪ್ರೀಮಿಯಂ ವೋಡ್ಕಾ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದ ಅದೇ ಪಾಲುದಾರರಾದ ಲೆಟಿ ಬ್ಲಾಗೋವಾ ಮತ್ತು ಬಂಟಿ ಸಿಂಗ್ ಪಾಲುದಾರಿಕೆಯಲ್ಲಿ ಬಟ್ಟೆ ಕಂಪೆನಿಯನ್ನು ಪ್ರಾರಂಭಿಸಿದ್ದಾರೆ. ಇದೀಗ ಭಾರಿ ಸದ್ದು ಮಾಡುತ್ತಿರುವುದು, ಅವರ ಡೆವಿಲ್ ಎಂಬ ಹೊಸ ಅಂತಾರಾಷ್ಟ್ರೀಯ ಬಟ್ಟೆ ಬ್ರಾಂಡ್ ಬಗ್ಗೆ.
ಹೌದು. ಶಾರುಖ್ ಪುತ್ರ ಆರ್ಯನ್ ಖಾನ್ ಮತ್ತು ಪುತ್ರಿ ಸುಹಾನಾ ಖಾನ್ ಡೆವಿಲ್ ಅಂತಾರಾಷ್ಟ್ರೀಯ ಬಟ್ಟೆ ಬ್ರಾಂಡ್ಗೆ ರಾಯಭಾರಿಗಳಾಗಿದ್ದಾರೆ. ಇದೀಗ ಈ ಬಟ್ಟೆಯ ಕುರಿತು ಇಂಟರೆಸ್ಟಿಂಗ್ ವಿಷ್ಯವೊಂದು ಹೊರಬಂದಿದೆ. ಅದೇನೆಂದರೆ, ಇವರ ಡೆವಿಲ್ ಬ್ರ್ಯಾಂಡ್ನಲ್ಲಿ ಇರುವ ಡೆನಿಮ್ ಜಾಕೆಟ್ ಬೆಲೆ 99 ಸಾವಿರ ರೂಪಾಯಿಗಳು ಎನ್ನುವುದು. ಎಂದರೆ ಒಂದು ಲಕ್ಷಕ್ಕೆ ಒಂದು ರೂಪಾಯಿ ಕಮ್ಮಿಯಷ್ಟೇ. ಆದರೆ ಅದಕ್ಕಿಂತ ಕುತೂಹಲದ ಸಂಗತಿ ಏನೆಂದರೆ, ಈ ಬಟ್ಟೆ ಬಿಡುಗಡೆಯಾದ 24 ಗಂಟೆಗಳಲ್ಲಿ ಎರಡು ಡೆನಿಮ್ ಜಾಕೆಟ್ಗಳು ಮಾರಾಟವಾಗಿವೆಯಂತೆ!
ಹತ್ತಾರು ಜಿರಲೆ ಇರೋ ಕೋಣೆಯಲ್ಲಿ ಕೂಡಿಹಾಕಿದ್ರೆ ನಾನು ಸತ್ತೇ ಹೋಗ್ತೇನೆ! ಸೋನು ನಿಗಮ್ ಮಾತಲ್ಲೇ ಕೇಳಿ...
ಹೇಳಿ ಕೇಳಿ ಶಾರುಖ್ ಪುತ್ರ. ಇನ್ನು ಇವರ ಕಸ್ಟಮರ್ಗಳೂ ಹಾಗೆಯೇ ಇರುತ್ತಾರೆ ಬಿಡಿ. ಇವರಿಗೆ ಲಕ್ಷ ಎಂದರೆ ಅಲಕ್ಷವೇ ಸರಿ. ಆದರೂ ಬಿಜಿನೆಸ್ ಎನ್ನುವುದು ಎಲ್ಲರ ಕೈಹಿಡಿಯುವಂಥದ್ದಲ್ಲ. ಅದರಲ್ಲಿಯೂ ಸ್ಟಾರ್ ನಟನೊಬ್ಬನ ಪುತ್ರ ಬಿಜಿನೆಸ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಈ ಪರಿಯಲ್ಲಿ ಸಕ್ಸಸ್ ಆಗುತ್ತಾರೆ ಎಂದರೆ ಇದು ಕುತೂಹಲದ ವಿಷಯವೇ. ಅಂದಹಾಗೆ, ಆರ್ಯನ್ ಖಾನ್ ಬ್ರಾಂಡ್ ನಿಂದ ತಯಾರಾದ ಟೀ ಶರ್ಟ್ ಬೆಲೆ 24 ಸಾವಿರ ರೂ.ಇದೆ. ಇವರು ಬಿಡುಗಡೆ ಮಾಡಿದ ಮೊದಲ ದಿನವೇ ಎಲ್ಲವೂ ಆನ್ಲೈನ್ನಲ್ಲಿ ಸೋಲ್ಡ್ಔಟ್ ಆಗಿದೆ ಎನ್ನುವುದು ವಿಶೇಷ. ಈ ಹಿಂದೆ ಇವರ ದುಬಾರಿ ಬಟ್ಟೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್ಗಳು ಬಂದಿದ್ದವು. ʻಖಾನ್ ಸಾಬ್, ಇದನ್ನು ಕೊಂಡುಕೊಳ್ಳಲು ನನ್ನ ಒಂದು ಕಿಡ್ನಿಯನ್ನು ಮಾರಿದರೂ ಸಾಕಾಗುವುದಿಲ್ಲ, ನನ್ನ ಎರಡೂ ಕಿಡ್ನಿಗಳನ್ನು ಮಾರಬೇಕಾಗುತ್ತದೆ” ಎಂದು ಬರೆದರೆ ಇನ್ನೊಬ್ಬರು “ಈಗಷ್ಟೇ ಬೆಲೆಗಳನ್ನು ನೋಡಿದೆ. ಮಧ್ಯಮ ವರ್ಗದ ವ್ಯಕ್ತಿ ಎಂದಿಗೂ ಖರೀದಿಸಲು ಸಾಧ್ಯವಿಲ್ಲʼ ಎಂದು ಬರೆದುಕೊಂಡಿದ್ದರು.
ಆರ್ಯನ್ ಖಾನ್ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಆರ್ಯನ್ ಖಾನ್ ವೆಬ್ ಸರಣಿಯಲ್ಲಿ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಶಾರುಖ್ ಖಾನ್ ಮಗ ಆರ್ಯನ್ ಖಾನ್ ವೆಬ್ ಸೀರಿಸ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರಂತೆ. ನಿರ್ದೇಶನದಲ್ಲಿ ಆರ್ಯನ್ ಖಾನ್ಗೆ ಆಸಕ್ತಿ ಇದೆ. ಈಗಾಗಲೇ ಅವರು ಸ್ಕ್ರಿಪ್ಟ್ ಕೆಲಸ ಶುರು ಮಾಡಿದ್ದಾರೆ. ಅವರ ಈ ಪ್ರಾಜೆಕ್ಟ್ಗೆ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ಟೇನ್ಮೆಂಟ್ ಸಂಸ್ಥೆ ಬಂಡವಾಳ ಹೂಡುತ್ತಿದೆ.
ದೂರವಾಗಿರೋ ಪತಿ ಮೇಲೆ ರಜನೀ ಪುತ್ರಿಗೆ ಮತ್ತೆ ಶುರುವಾಯ್ತಾ ಪ್ರೀತಿ? ಮತ್ತೆ ಒಂದಾಗತ್ತಾ ಜೋಡಿ?