ದೂರವಾಗಿರೋ ಪತಿ ಮೇಲೆ ರಜನೀ ಪುತ್ರಿಗೆ ಮತ್ತೆ ಶುರುವಾಯ್ತಾ ಪ್ರೀತಿ? ಮತ್ತೆ ಒಂದಾಗತ್ತಾ ಜೋಡಿ?

By Suvarna News  |  First Published Mar 18, 2024, 4:00 PM IST

ರಜನೀಕಾಂತ್​ ಪುತ್ರಿ ಐಶ್ವರ್ಯ ಮತ್ತು ಪತಿ ಧನುಷ್​ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಪತಿಯನ್ನು ಐಶ್ವರ್ಯ ಹೊಗಳಿದ್ದು, ಹಲವು ಗಾಳಿಸುದ್ದಿಗೆ ಕಾರಣವಾಗುತ್ತಿದೆ.
 


ಸೂಪರ್​ಸ್ಟಾರ್ ರಜನೀಕಾಂತ್ ಪುತ್ರಿ ಕಾಲಿವುಡ್ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್  (Aishwarya Rajinikanth) ಮತ್ತು ಧನುಷ್ (Dhanush)  ಪ್ರತ್ಯೇಕವಾಗಿದ್ದು ಎರಡು ವರ್ಷಗಳೇ ಕಳೆದು ಹೋಗಿವೆ. 2004 ರಲ್ಲಿ ವಿವಾಹವಾಗಿದ್ದ ಈ ಜೋಡಿ, 2022ರ ಜನವರಿಯಲ್ಲಿ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದರು. ಇದೀಗ ಇಬ್ಬರೂ  ದೂರವಾಗಿದ್ದರೂ  ಇಬ್ಬರ ನಡುವಿನ ಸ್ನೇಹ, ಗೌರವ ಹಾಗೆಯೇ ಇದೆ ಎನ್ನಲಾಗುತ್ತಿದ್ದು, ಅದಕ್ಕೆ ಸಾಕ್ಷಿಯಾಗಿ ಐಶ್ವರ್ಯ ಈಗ  ಮಾಜಿ ಪತಿ ಧನುಷ್‌ ಅವರನ್ನು ನೆನಪು ಮಾಡಿಕೊಂಡಿರುವುದೇ ಆಗಿದೆ.  ಮದುವೆಯಾಗಿ ಎರಡು ಮಕ್ಕಳಾದ ಮೇಲೆ 18 ವರ್ಷಗಳ ಬಳಿಕ ಪ್ರತ್ಯೇಕಗೊಳ್ಳುವುದಾಗಿ  ಘೋಷಿಸಿದ್ದ ಜೋಡಿ, ಇದೀಗ ಮತ್ತೆ ಒಂದಾಗುವರೆ ಎನ್ನುವ ಮಾತು ಕೂಡ ಇದೇ ವೇಳೆ ಕೇಳಿಬರುತ್ತಿದೆ. ಅಧಿಕೃತವಾಗಿ ವಿಚ್ಛೇದನವನ್ನು ಇವರು ಘೋಷಿಸದಿದ್ದರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಇವರಿಬ್ಬರ ನಡುವೆ  ಪರಸ್ಪರ ದ್ವೇಷವಿಲ್ಲ. ಅವರು ಗಂಡ ಮತ್ತು ಹೆಂಡತಿಯಾಗಿ ಒಟ್ಟಿಗೆ ವಾಸಿಸುತ್ತಿಲ್ಲವಾದರೂ, ಇಬ್ಬರೂ  ಉತ್ತಮ ಸ್ನೇಹಿತರಾಗಿದ್ದಾರೆ ಎನ್ನುವುದಕ್ಕೆ ಐಶ್ವರ್ಯ ಆಡಿರುವ ಮಾತುಗಳೇ ಸಾಕ್ಷಿಯಾಗಿವೆ.
 
ಐಶ್ವರ್ಯಾ ಅವರು ತಮ್ಮ ನಿರ್ದೇಶದನದ ಲಾಲ್ ಸಲಾಂಗಾಗಿ ಸಂದರ್ಶನ ನೀಡುವ ಸಮಯದಲ್ಲಿ ಧನುಷ್​ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದು, ಇವರಿಬ್ಬರೂ ಮತ್ತೆ ಒಂದಾಗುತ್ತಿದ್ದಾರಾ ಎನ್ನುವಂತೆ ಮಾಡಿದೆ.   ದಕ್ಷಿಣ ಚಿತ್ರರಂಗದ ಪ್ರಸಿದ್ಧ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರ ಕುರಿತು ಮಾತನಾಡುತ್ತಿರುವ ಸಂದರ್ಭದಲ್ಲಿ ಐಶ್ವರ್ಯ ತಮ್ಮ ಪತಿ ಧನುಷ್​ ಅವರನ್ನು ಹೊಗಳಿದ್ದಾರೆ. ಅಷ್ಟಕ್ಕೂ ಅನಿರುದ್ಧ್ ರವಿಚಂದರ್  ದೊಡ್ಡ ಸ್ಟಾರ್ ಸಂಗೀತ ನಿರ್ದೇಶಕ. ಸದ್ಯ ಅವರು ಕೋಟಿಗಳ ಲೆಕ್ಕದಲ್ಲಿ  ಸಂಭಾವನೆ ಪಡೆಯುತ್ತಾರೆ. ಆದರೆ, ಅನಿರುದ್ಧ್ ಮೊದಲು ಸಂಗೀತ ನೀಡಿದ್ದು ಐಶ್ವರ್ಯಾ ರಜನಿಕಾಂತ್ ನಿರ್ದೇಶನದ '3' ಸಿನಿಮಾಗೆ. ಆಗ ಅವರ ವಯಸ್ಸು 20ರ ಆಸುಪಾಸು ಇತ್ತು. ಇಷ್ಟು ಚಿಕ್ಕ ಹುಡುಗನ ಕೈಯಲ್ಲಿ ಸಂಗೀತ ನಿರ್ದೇಶನ ಮಾಡಿಸಬೇಕು ಎಂಬುದು ಧನುಷ್ ಆಸೆ ಆಗಿತ್ತು ಎನ್ನುವ ಮೂಲಕ ಅನಿರುದ್ಧ್ ಅವರಿಗೆ ಬ್ರೇಕ್​ ನೀಡಿದ್ದು ಧನುಷ್​ ಎಂದು ಪರೋಕ್ಷವಾಗಿ ಹೇಳಿದ್ದಾರೆ.  

ನಾನು ಸೆಕ್ಸಿಯಲ್ಲ, ಲೈಂಗಿಕತೆ, ಮಾದಕತೆಯಲ್ಲಿ ತುಂಬಾ ಹಿಂದೆ ಎನ್ನುತ್ತ ಮಹತ್ವದ ಘೋಷಣೆ ಮಾಡಿದ ಸಮಂತಾ!

Tap to resize

Latest Videos

 ಕಳೆದ ಕೆಲವು ವರ್ಷಗಳಲ್ಲಿ, ಅನಿರುದ್ಧ್ ರವಿಚಂದರ್ ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಸಂಗೀತ ಸಂಯೋಜಕರಾಗಿದ್ದಾರೆ. ಅವರು ದಕ್ಷಿಣದ ಪ್ರತಿಯೊಬ್ಬ ನಿರ್ದೇಶಕರ ಮೊದಲ ಆಯ್ಕೆಯಾಗಿದ್ದಾರೆ.  2012ರಲ್ಲಿ '3' ಸಿನಿಮಾದ ಮೂಲಕ ಜರ್ನಿ ಆರಂಭಿಸಿದರು. ಆ ಚಿತ್ರದ 'ಕೊಲವೆರಿ ಡಿ..' ಹಾಡು ಆ ಕಾಲಕ್ಕೆ ಮಾಡಿದ ಮೋಡಿ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಅನಿರುದ್ಧ್ ರವಿಚಂದರ್ ಅವರು ಐಶ್ವರ್ಯ ಅವರ ಸೋದರ ಸಂಬಂಧಿ. ಆದರೆ ಅವರ ಪ್ರತಿಭೆಯನ್ನು ಧನುಷ್ ಗುರುತಿಸಿದ್ದರು ಎಂದು ಐಶ್ವರ್ಯ ತಿಳಿಸಿದರು.  ಅನಿರುದ್ಧ್‌ನ ಸಕ್ಸಸ್‌ ಜರ್ನಿ ನೋಡಿದಾಗ, ನನಗೆ ತುಂಬ ಖುಷಿಯಾಗುತ್ತದೆ. ಆತ ನನ್ನ ಸಂಬಂಧಿ. ಆದರೂ ಆತ ಮ್ಯೂಸಿಕ್ ಡೈರೆಕ್ಟರ್ ಆಗುವುದಕ್ಕೆ ನಾನು ಕಾರಣಳಲ್ಲ. ಅನಿರುದ್ಧ್‌ ಸಿನಿಮಾರಂಗಕ್ಕೆ ಬಂದಿದ್ದೇ ಧನುಷ್ ಕಡೆಯಿಂದ. ಮೂರು  ಸಿನಿಮಾಗಳ ಎಲ್ಲಾ ಹಾಡುಗಳನ್ನು ಬರೆಯಲು ಅವರು ಪ್ರೋತ್ಸಾಹಿಸಿದರು. ಇಂಡಸ್ಟ್ರಿಗೆ  ಎಂಟ್ರಿಯಾಗಲು ಧನುಷ್ ಕಾರಣ ಎಂದು ಪತಿಯನ್ನು ಹಾಡಿ ಹೊಗಳಿದ್ದಾರೆ.

ಈ ಕುರಿತು ಮತ್ತಷ್ಟು ಹೇಳಿರುವ ಐಶ್ವರ್ಯ,  ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಿಂಗಪುರಕ್ಕೆ ಹೋಗಬೇಕೆಂದು ಅನಿರುದ್ಧ್ ಪೋಷಕರು ಬಯಸಿದ್ದರು. ಆದರೆ ಸಂಗೀತದ ಮೇಲಿನ ಒಲವನ್ನು ಮುಂದುವರಿಸಬೇಕು ಎಂದು ಧನುಷ್ ಹೇಳಿದ್ದರು. ಧನುಷ್‌ಗೆ ಪ್ರತಿಭೆಗಳನ್ನು ಗುರುತಿಸುವುದು ಗೊತ್ತಿದೆ. ಧನುಷ್​ ಮನವರಿಕೆ ಮಾಡಿಕೊಟ್ಟರಿಂದ ಅನಿರುದ್ಧ್​ ಇಲ್ಲಿಯೇ ಉಳಿದು ಈ ಮಟ್ಟಕ್ಕೆ ಏರುವಂತಾಗಿದೆ ಎಂದರು. ಕೀಬೋರ್ಡ್ ಖರೀದಿಸುವುದರಿಂದ ಹಿಡಿದು  ಹಾಡುಗಳನ್ನು ಬರೆಯುವಂತೆ ಒತ್ತಡ ಹೇರುವವರೆಗೆ ಎಲ್ಲದಕ್ಕೂ ಶ್ರೇಯಸ್ಸು ಧನುಷ್‌ಗೆ ಸಲ್ಲುತ್ತದೆ ಎಂದು ಐಶ್ವರ್ಯಾ ಹೇಳಿದ್ದಾರೆ.  
ಹತ್ತಾರು ಜಿರಲೆ ಇರೋ ಕೋಣೆಯಲ್ಲಿ ಕೂಡಿಹಾಕಿದ್ರೆ ನಾನು ಸತ್ತೇ ಹೋಗ್ತೇನೆ! ಸೋನು ನಿಗಮ್​ ಮಾತಲ್ಲೇ ಕೇಳಿ...

click me!