ARYAN ARREST: ಜೈಲಿನ ಆಹಾರ ಬೇಡ: ಬಿಸ್ಕತ್ ತಿಂದು ಬದುಕ್ತಿದ್ದಾರಾ ಆರ್ಯನ್ ?

Published : Oct 13, 2021, 03:22 PM ISTUpdated : Oct 13, 2021, 03:33 PM IST
ARYAN ARREST: ಜೈಲಿನ ಆಹಾರ ಬೇಡ: ಬಿಸ್ಕತ್ ತಿಂದು ಬದುಕ್ತಿದ್ದಾರಾ ಆರ್ಯನ್ ?

ಸಾರಾಂಶ

ಜೈಲಿನ ಆಹಾರ ಬೇಡ ಅಂತಿದ್ದಾರಾ ಶಾರೂಖ್-ಗೌರಿ ಖಾನ್ ಮುದ್ದಿನ ಮಗ ? ಬಿಸ್ಕತ್ ತಿಂದು ನೀರು ಕುಡಿದು ಕಳೆಯುವುದು ಎಷ್ಟು ದಿನ ?

ಬಾಲಿವುಡ್ ನಟ ಶಾರೂಖ್ ಖಾನ್ ಮಗ ಎಂದ ಮೇಲೆ ಹೇಳಬೇಕಾ ? ಸ್ಟಾರ್ ಕಿಡ್, ದುಬಾರಿ ಶೂಸ್, ಡಸೈನರ್ ಬಟ್ಟೆ, ರೆಸ್ಟೋರೆಂಟ್ ಫುಡ್ ಎನ್ನುತ್ತಾ ಹಾಯಾಗಿದ್ದ ಆರ್ಯನ್ ಖಾನ್‌ಗೆ(Aryan Khan) ಇದೆಂಥಾ ಸ್ಥಿತಿ ಬಂತು..? ನಟ ಆರ್ಯನ್ ಖಾನ್ ಜೈಲಿನಲ್ಲಿದ್ದಾರೆ. ಮುಂಬೈ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡ ಆರ್ಯನ್ ಖಾನ್ ಅ.3ರಂದು ನಡೆದ ರೈಡ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

ಸ್ಟಾರ್ ಕಿಡ್ ಜಾಮೀನು ಅರ್ಜಿ ಕೂಡಾ ತಿರಸ್ಕರಿಸಲ್ಪಟ್ಟಿದ್ದು ಆರ್ಯನ್ ಜೈಲುವಾಸವಲ್ಲದೆ ಬೇರೆ ಗತಿ ಇಲ್ಲ ಎಂಬಂತಾಗಿದೆ. ಇತ್ತ ಶಾರೂಖ್ ಮತ್ತು ಗೌರಿ ಮಗನನ್ನು ಹೊರತರಲು ಹಗಲಿರುಳು ಚಿಂತಿಸುತ್ತಿದ್ದಾರೆ.

Aryan Arrest: ಭಾರತ ಬಿಡೋ ಪ್ಲಾನ್‌ನಲ್ಲಿದ್ದಾರಾ ಸ್ಟಾರ್ ನಟರ ಮಕ್ಕಳು

ಆರ್ಯನ್ ಖಾನ್ ಮತ್ತು ಆತನ ಕೆಲವು ಸ್ನೇಹಿತರು, ಕ್ರೂಸ್ ಹಡಗಿನಲ್ಲಿ ಬಂಧಿತರಾಗಿದ್ದರು. ಡ್ರಗ್ ಆರೋಪದ ಮೇಲೆ ಎನ್‌ಸಿಬಿ(NCB)ಯಿಂದ ಬಂಧನಕ್ಕೊಳಗಾದ ನಂತರ ನ್ಯಾಯಾಂಗ ಬಂಧನದಲ್ಲಿದ್ದು ದೇಶಾದ್ಯಂತ ದೊಡ್ಡ ಚರ್ಚೆಯಾಗಿದೆ. ಶಾರುಖ್ ಖಾನ್ ಅವರ ವಕೀಲರಾದ ಸತೀಶ್ ಮನೇಶಿಂದೆ ಆರ್ಯನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಅವರ ವಕೀಲ ತಾರಕ್ ಕೆ. ಸೈಯದ್ ಅವರು ತಮ್ಮ ಕಕ್ಷಿದಾರರಿಗೆ ಜಾಮೀನಿಗಾಗಿ ಮತ್ತೊಮ್ಮೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರೂ ಎನ್‌ಸಿಬಿ ಆಶ್ಚರ್ಯಕರವಾಗಿ ಎರಡನೇ ಕಸ್ಟಡಿ ವಿಸ್ತರಣೆಯನ್ನು ಪಡೆದಿದೆ.

"

ಆರ್ಯನ್ ಖಾನ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯಿದೆಯ ಸೆಕ್ಷನ್ 8 (ಸಿ), 20 (ಬಿ), 27, 28, 29 ಮತ್ತು 35 ರ ಅಡಿಯಲ್ಲಿ ಅಪರಾಧಗಳನ್ನು ಹೊರಿಸಲಾಗಿದೆ. ಅವರನ್ನು ಒಟ್ಟು ಮೂರು ಬಾರಿ - 3, 4 ಮತ್ತು 7 ನೇ ತಾರೀಕಿನಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಎಲ್ಲಾ ಮೂರು ವಿಚಾರಣೆಯಲ್ಲಿಯೂ ಆರ್ಯನ್ ಪರವಾಗಿ ಯಾವುದೇ ಬೆಳವಣಿಯಾಗಲಿಲ್ಲ. ಅವರ ಎರಡನೇ ಜಾಮೀನು ವಿಚಾರಣೆಯ ಸಮಯದಲ್ಲಿ, NCB ಆರ್ಯನ್ ಖಾನ್ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವುದರಲ್ಲಿ ಸಕ್ಸಸ್ ಆಗಿದೆ.

ಈಗ ಶಾರುಖ್ ಖಾನ್ ಅವರ ಮಗನ ಬಗ್ಗೆ ಹೆಚ್ಚು ಆತಂಕಕಾರಿ ಸುದ್ದಿಗಳು ಹರಿದಾಡುತ್ತಿದೆ. ಆರ್ಥರ್ ರೋಡ್ ಜೈಲಿಗೆ ಶಿಫ್ಟ್ ಮಾಡಿದಾಗಿನಿಂದ ಆರ್ಯನ್ ಸರಿಯಾಗಿ ಊಟ ಮಾಡುತ್ತಿಲ್ಲ, ಕ್ಯಾಂಟೀನ್‌ನಿಂದ ಖರೀದಿಸಿದ ಪಾರ್ಲೆ ಜಿ ಬಿಸ್ಕಟ್‌ಗಳಲ್ಲಿ ಮಾತ್ರ ತಿನ್ನುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳು ಒಳಗೆ ಪದೇ ಪದೇ ಪ್ರಯತ್ನಿಸಿದರೂ, ಹಸಿವಿನ ಕೊರತೆಯಿಂದಾಗಿ ಆರ್ಯನ್ ಮತ್ತು ಆತನ ಸ್ನೇಹಿತರು ಯಾರೂ ಜೈಲಿನ ಆಹಾರವನ್ನು ತಿನ್ನುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಆರ್ಯನ್ ಖಾನ್ ಜೈಲಿಗೆ ಪ್ರವೇಶಿಸುವಾಗ ತನ್ನೊಂದಿಗೆ ಕೊಂಡೊಯ್ದಿದ್ದ ಹನ್ನೆರಡು ಬಾಟಲಿಗಳಲ್ಲಿ ಕೇವಲ ಮೂರು ಬಾಟಲಿ ನೀರು ಮಾತ್ರ ಉಳಿದಿದೆ ಎಂದು ಹೇಳಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?