ಮಕ್ಕಳ ಜೊತೆ ನವರಾತ್ರಿ ಪೂಜೆ ಮಾಡಿದ ಶಿಲ್ಪಾ ಶೆಟ್ಟಿ: ಈ ಬಾರಿಯೂ ರಾಜ್ ಯಾಕಿಲ್ಲ ?

Published : Oct 12, 2021, 05:17 PM ISTUpdated : Oct 12, 2021, 05:23 PM IST
ಮಕ್ಕಳ ಜೊತೆ ನವರಾತ್ರಿ ಪೂಜೆ ಮಾಡಿದ ಶಿಲ್ಪಾ ಶೆಟ್ಟಿ: ಈ ಬಾರಿಯೂ ರಾಜ್ ಯಾಕಿಲ್ಲ ?

ಸಾರಾಂಶ

ಪತಿ ಬಿಡುಗಡೆಯಾಗಿ ಬಂದರೂ ಫ್ಯಾಮಿಲಿ ಪೂಜೆಯಲ್ಲಿ ಮಿಸ್ಸಿಂಗ್ ಮಗ ಮಗಳ ಜೊತೆ ಪೂಜೆ ಮಾಡಿದ ಶಿಲ್ಪಾ ಶೆಟ್ಟಿ ಹಾಗಿದ್ರೆ ರಾಜ್ ಕುಂದ್ರಾ ಎಲ್ಲಿ ? 

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(Shilpa Shetty) ಹಬ್ಬಗಳನ್ನು ಮಿಸ್ ಮಾಡುವುದಿಲ್ಲ. ಪ್ರತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅವರ ವೈಯಕ್ತಿಕ ಸಮಸ್ಯೆಗಳೇನೇ ಇರಲಿ, ಆದರೆ ಹಬ್ಬದ ದಿನ ಮಾತ್ರ ತಪ್ಪದೆ ಸಂಭ್ರಮಿಸುತ್ತಾರೆ. ಎಲ್ಲರಿಗೂ ಶುಭಾಶಯಗಳನ್ನು ತಿಳಿಸುತ್ತಾರೆ.

ಸೋಮವಾರ ಶಿಲ್ಪಾ ಶೆಟ್ಟಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಮತ್ತು ಅವರ ಮಕ್ಕಳು, ಮಗ ವಿಯಾನ್ ಮತ್ತು ಮಗಳು ಸಮೀಷಾ ಮನೆಯಲ್ಲಿ ನವರಾತ್ರಿ(Navratri) ಪೂಜೆ ಮಾಡುವುದನ್ನು ಕಾಣಬಹುದು. ಈ ಮೂವರ ಜೊತೆಗೆ ಅವರ ಸಿಬ್ಬಂದಿಯೂ ಸೇರಿಕೊಂಡಿದ್ದರು. ಆದರೆ, ಆಕೆಯ ಪತಿ ರಾಜ್ ಕುಂದ್ರಾ ಎಲ್ಲಿಯೂ ಕಾಣಿಸಲಿಲ್ಲ. ತಂಗಿ ಶಮಿತಾ ಹೇಗೂ ಬಿಗ್‌ಬಾಸ್ ಮನೆಯಲ್ಲಿದ್ದಾರೆ.

ಜೈಲಿನಿಂದ ಮರಳಿದ ಪತಿ, ಆತ್ಮೀಯವಾಗಿ ಬರ ಮಾಡಿಕೊಂಡ ಶಿಲ್ಪಾ ಶೆಟ್ಟಿ!

ವೀಡಿಯೊದಲ್ಲಿ, ಶಿಲ್ಪಾ, ವಿಯಾನ್ ಮತ್ತು ಸಮೀಷಾ ಕಿತ್ತಳೆ ಬಣ್ಣದ ಹಬ್ಬದ ಉಡುಪುಗಳನ್ನು ಧರಿಸಿದ್ದರು. ಶಿಲ್ಪಾ ಮತ್ತು ವಿಯಾನ್ ಪ್ರಾರ್ಥನೆಯನ್ನು ಪಠಿಸುತ್ತಿದ್ದರೆ, ಪುಟ್ಟ ಸಮೀಷಾ ಅಲ್ಲಿಯೇ ಆಡುತ್ತಿದ್ದರು.

ಶಿಲ್ಪಾ ವೀಡಿಯೊವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನನ್ನ ಸೋಮವಾರದ ಪ್ರೇರಣೆ ... ನನ್ನ ಮಕ್ಕಳು ಮತ್ತು ನಂಬಿಕೆ ಕೆಲವು ವಿಷಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಿಲ್ಲ. ನಮ್ಮ ಪೋಷಕರು ನಮ್ಮಲ್ಲಿ ಬೆಳೆಸಿದ ಮೌಲ್ಯಗಳು ಮತ್ತು ಸಂಪ್ರದಾಯಗಳೊಂದಿಗೆ ನನ್ನ ಮಕ್ಕಳು ಬೆಳೆಯುವುದು ನನಗೆ ಮುಖ್ಯವಾಗಿದೆ. ಚಿಕ್ಕಂದಿನಿಂದಲೂ ಇಬ್ಬರಲ್ಲೂ ನಂಬಿಕೆಯ ಬೀಜಗಳನ್ನು ಬಿತ್ತುವುದು ನಾನು ಯಾವಾಗಲೂ ನನ್ನ ಉದ್ದೇಶವಾಗಿತ್ತು ... ಏಕೆಂದರೆ ಇದರಿಂದ ನಂಬಿಕೆ ಬಲಗೊಳ್ಳುತ್ತದೆ. ನಾವು ಬೆಳೆದಂತೆ ಹೆಚ್ಚು ಆಳವಾಗಿ ಬೇರೂರುತ್ತದೆ. ನಿಮ್ಮೆಲ್ಲರಿಗೂ ಶುಭಾಶಯಗಳು ಎಂದಿದ್ದಾರೆ.

ಕೊನೆಗೂ ರಾಜ್ ಕುಂದ್ರಾಗೆ ಜಾಮೀನು.. ಯಾವ ಪಾಯಿಂಟ್ ನೆರವಿಗೆ ಬಂತು?

ಶಿಲ್ಪಾ ತನ್ನ ಮಕ್ಕಳು ಮತ್ತು ಕೆಲಸದ ಕೆಲವು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಜಾಮೀನಿನ ನಂತರ ಆಕೆಯ ಪತಿ, ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಏನನ್ನೂ ಪೋಸ್ಟ್ ಮಾಡಿಲ್ಲ. ಪ್ರಕರಣದ ವಿಚಾರಣೆಯ ಸಮಯದಲ್ಲಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಗೌಪ್ಯತೆಯನ್ನು ನೀಡುವಂತೆ ಮಾಧ್ಯಮಗಳು ಮತ್ತು ಅಭಿಮಾನಿಗಳನ್ನು ಅವರು ವಿನಂತಿಸಿದ್ದರು.

ಅಶ್ಲೀಲ ವಿಡಿಯೋಗಳನ್ನು ತಯಾರಿಸಿದ ಮತ್ತು ಮಾರಾಟ ಮಾಡಿದ ಆರೋಪದಲ್ಲಿ ರಾಜ್ ಅವರನ್ನು ಜುಲೈನಲ್ಲಿ ಬಂಧಿಸಲಾಯಿತು. ಎರಡು ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ನಂತರ ಅವರು ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆಯಾದರು. ಗಣೇಶ ಚತುರ್ಥಿ ಹಬ್ಬವನ್ನೂ ನಟಿ ಮಕ್ಕಳೊಂದಿಗೆ ಆಚರಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?