Aryan Drugs Case: ದಾಳಿ ಮಾಡಿದ್ದ NCB ಅಧಿಕಾರಿ ಸಮೀರ್‌ಗೆ ಹೆಚ್ಚಿನ ಭದ್ರತೆ

Published : Oct 15, 2021, 02:29 PM ISTUpdated : Oct 15, 2021, 02:44 PM IST
Aryan Drugs Case: ದಾಳಿ ಮಾಡಿದ್ದ NCB ಅಧಿಕಾರಿ ಸಮೀರ್‌ಗೆ ಹೆಚ್ಚಿನ ಭದ್ರತೆ

ಸಾರಾಂಶ

ಡ್ರಗ್ಸ್ ಪಾರ್ಟಿ ಮೇಲೆ ದಾಳಿ ಮಾಡಿದ್ದ ಅಧಿಕಾರಿಗೆ ಹೆಚ್ಚಿನ ಭದ್ರತೆ ತನ್ನ ಮೇಲೆ ಸ್ಪೈ ಮಾಡಲಾಗುತ್ತಿದೆ ಎಂದಿದ್ದ ಸಮೀರ್

NCB ಅಧಿಕಾರಿ ಸಮೀರ್ ವಾಂಖೆಡೆ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್‌ನನ್ನು ಒಳಗೊಂಡಿರುವ ಮುಂಬೈ ಕ್ರೂಸ್ ಡ್ರಗ್ಸ್ ಕೇಸ್ ವಿಚಾರಣೆ ಮಾಡುತ್ತಿರುವ ಅಧಿಕಾರಿಗೆ ನೀಡಲಾದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿ ಸುರಕ್ಷತೆಗೆ ಒತ್ತು ನೀಡಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಮೀರ್ ಅವರು ತನ್ನ ಮೇಲೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂದು ವಿಡಿಯೋ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಸಿಬಿ ಉನ್ನತ ಅಧಿಕಾರಿಗಳು ಮುಂಬೈ ಪೊಲೀಸರ ಜೊತೆಗೂ ಮಾತುಕತೆ ನಡೆಸಿದ್ದರು.

ಸಮೀರ್ ಅವರನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿ ಪೊಲೀಸ್ ಯುನಿಫಾರ್ಮ್‌ನಲ್ಲಿದ್ದ ಎಂದು ಹೇಳಲಾಗಿದ್ದು ಈ ನಿಟ್ಟಿನಲ್ಲಿ ಎನ್‌ಸಿಬಿ ಮುಂಬೈ ಪೊಲೀಸರಲ್ಲಿಯೇ ನೇರವಾಗಿ ಮಾತನಾಡಿತ್ತು. ಆರ್ಯನ್ ಖಾನ್ ಅರೆಸ್ಟ್ ನಂತರ ಸುದ್ದಿಯಲ್ಲಿರುವ ಸಮೀರ್ ಅವರು ಕಳೆದ ಕೆಲವು ದಿನಗಳ ಹಿಂದೆ ಇಬ್ಬರು ಮುಂಬೈ ಪೊಲೀಸರು ತನ್ನ ಮೇಲೆ ಸ್ಪೈ ಮಾಡುತ್ತಿರುವುದಾಗಿ ಆರೋಪಿಸಿದ್ದರು. ನಂತರ ಮುಂಬೈನಲ್ಲಿ ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕ ಡಿಜಿಪಿ ಸಂಜಯ್ ಪಾಂಡೆ ಅವರನ್ನು ಭೇಟಿಯಾಗಿ ಹೆಚ್ಚಿನ ಭದ್ರತೆ ಕೇಳಿದ್ದರು. 

NCB ಆಫೀಸರ್ ಮೇಲೆಯೇ ಪತ್ತೆದಾರಿಕೆ: ಹಿಂಬಾಲಿಸ್ತಿರೋದ್ಯಾರು?

ವರದಿಗಳ ಪ್ರಕಾರ, ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ಪ್ರಸ್ತುತ ಭದ್ರತಾ ಕೆಲಸಕ್ಕೆ ಹೆಚ್ಚಿನ ಶಸ್ತ್ರಸಜ್ಜಿತ ಅಂಗರಕ್ಷಕರನ್ನು ಸೇರಿಸಲಾಗಿದೆ. ಅವರ ಅಧಿಕೃತ ವಾಹನವನ್ನು ಕೂಡ ಬದಲಾಯಿಸಲಾಗಿದೆ. ಈ ಹಿಂದೆ ಅವರು ಮುಂಬೈ ಸ್ಮಶಾನಕ್ಕೆ ಭೇಟಿ ನೀಡಿದಾಗ ಆವರನ್ನು ಕೆಲವು ಪೊಲೀಸರು ಹಿಂಬಾಲಿಸಿದರು. ಅಲ್ಲಿ ಅವರ ತಾಯಿಯನ್ನು ಸಮಾಧಿ ಮಾಡಲಾಗಿದೆ ಎಂದು ಅಧಿಕಾರಿ ಹೇಳಿಕೊಂಡಿದ್ದರು. ಸಮೀರ್ ಅವರು ಸಿಬ್ಬಂದಿ ಸ್ಮಶಾನದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

ನಂತರ, ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ದೂರಿನ ಬಗ್ಗೆ ಗಮನಹರಿಸಿದ್ದಾರೆ. ಸಮೀರ್ ವಾಂಖೆಡೆ ಮಾಡಿದ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಆಯುಕ್ತರು ತನಗೆ ಲಿಖಿತ ದೂರು ಬಂದಿರುವುದನ್ನು ದೃಢಪಡಿಸಿದ್ದಾರೆ. ಆರೋಪಗಳನ್ನು ಪರಿಶೀಲಿಸಲು ಮತ್ತು ವರದಿಯನ್ನು ಸಲ್ಲಿಸಲು ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಆದೇಶಿಸಲಾಗಿದೆ.

ಮುಂಬೈ ಕ್ರೂಸ್ ಡ್ರಗ್ ರೇಡ್ ಪ್ರಕರಣದಲ್ಲಿ, ಈವರೆಗೆ 20 ಜನರನ್ನು ಬಂಧಿಸಲಾಗಿದೆ - ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಆತನ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಮತ್ತು ವಿದೇಶಿ ಪ್ರಜೆಗಳು ಮತ್ತು ಡ್ರಗ್ ಪೂರೈಕೆದಾರರು ಸೇರಿದಂತೆ ಇತರರು ಬಂಧಿಸಲ್ಪಟ್ಟಿದ್ದಾರೆ.

Drugs Case: ಮಗ ಆರ್ಯನ್ ಖಾನ್‌ ಬಿಡುಗಡೆಗಾಗಿ ನವರಾತ್ರಿಯಲ್ಲಿ ಗೌರಿ ಖಾನ್ ಪೂಜೆ, ಪ್ರಾರ್ಥನೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?