ತಲೈವಾ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಟೀಸರ್ ರಿಲೀಸ್

Published : Oct 15, 2021, 01:34 PM ISTUpdated : Oct 29, 2021, 12:11 PM IST
ತಲೈವಾ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಟೀಸರ್ ರಿಲೀಸ್

ಸಾರಾಂಶ

'ಅಣ್ಣಾತ್ತೆ' (Annaatthe) ಟೀಸರ್ (Teaser) ಬಿಡುಗಡೆ ಪಾಲ್‌ಸಾಮಿಯಾಗಿ ಕಾಣಿಸಿಕೊಂಡ ತಲೈವಾ

ದಕ್ಷಿಣ ಚಿತ್ರರಂಗದ (South Film Industry) ಸೂಪರ್ ಸ್ಟಾರ್ ನಟ, ತಲೈವಾ ರಜನಿಕಾಂತ್ (Rajanikanth)ಅಭಿನಯದ ಬಹು ನಿರೀಕ್ಷಿತ ಚಿತ್ರ 'ಅಣ್ಣಾತ್ತೆ' (Annaatthe) ಟೀಸರ್ (Teaser) ಬಿಡುಗಡೆಯಾಗಿದೆ. ದಸರಾ ಹಬ್ಬದ ಪ್ರಯುಕ್ತ ಸನ್ ಟಿವಿಯ (Sun TV) ಅಧಿಕೃತ ಯೂಟ್ಯೂಬ್ (Youtube) ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪಾಲ್‌ಸಾಮಿಯಾಗಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. 

ಟೀಸರ್‌ನಲ್ಲಿ ರಜನಿಕಾಂತ್ ಅವರು ಭರ್ಜರಿ ಆಕ್ಷನ್‌ನೊಂದಿಗೆ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೇ ರಜನಿ ಸ್ಲೋ ಮೋಷನ್ ವಾಕ್, ಪಂಚಿಂಗ್ ಡೈಲಾಗ್‌ ನೋಡುಗರಿಗೆ ಸಖತ್ ಕಿಕ್ ಕೊಟ್ಟಿದೆ.  ರಜನಿಕಾಂತ್  ಡಬಲ್ ಶೇಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿರುವ ಹಿಂಟ್ ನೋಡುಗರಿಗೆ ಕಾಣಿಸುತ್ತದೆ. ಹಾಗೂ ಚಿತ್ರದ ಕಥಾವಸ್ತುವಿನ ಬಗ್ಗೆ ಟೀಸರ್‌ನಲ್ಲಿ ಚಿತ್ರತಂಡ ಏನನ್ನೂ ಬಹಿರಂಗಪಡಿಸಿಲ್ಲ. ಡಿ. ಇಮ್ಮಾನ್ ಸಂಗೀತದ ಕಂಪು ಸಿನಿರಸಿಕರಿಗೆ ಎದ್ದು ಕುಣಿಸುವಂತಿದೆ. ಚಿತ್ರದ ಟೀಸರ್ 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ (Trending).

ರಜನಿಕಾಂತ್ ಅಣ್ಣಾತ್ತೆ ಚಿತ್ರದ ಫಸ್ಟ್ ಲುಕ್, ಮೋಷನ್ ಪೋಸ್ಟರ್ ರಿಲೀಸ್!

'ಅಣ್ಣಾತ್ತೆ' ಆಕ್ಷನ್ ಚಿತ್ರವನ್ನು ಶಿವ (Siva) ನಿರ್ದೇಶಿಸುತ್ತಿದ್ದು, ರಜನಿಕಾಂತ್ ಜೊತೆ ನಟಿಯರಾದ ನಯನತಾರಾ (Nayanthara), ಮೀನಾ (Meena), ಖುಷ್ಬೂ (Kushbu), ಕೀತಿ ಸುರೇಶ್(Keerthi Suresh) ಕಾಣಿಸಿಕೊಂಡರೆ ಟಾಲಿವುಡ್ ನಟ ಜಗಪತಿ ಬಾಬು (Jagapathi Babu) ಮತ್ತು ಪ್ರಕಾಶ್ ರಾಜ್ (Prakash Raj) ಸೇರಿದಂತೆ ಇತರ ನಟರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಡಿ. ಇಮ್ಮಾನ್ (D.Imman)  ಸಂಗೀತ ಸಂಯೋಜಿಸಿದ್ದು, ವೆಟ್ರಿ  ಪಳನಿಸಾಮಿ (Vetri Palanisamy) ಕ್ಯಾಮೆರಾ ಕೈಚಳಕವಿದೆ.  

ಇನ್ನು 'ಅಣ್ಣಾತ್ತೆ' ಚಿತ್ರ ಕೋವಿಡ್ ಮತ್ತು ನಿರ್ಮಾಣ ಕಾರ್ಯಗಳಿಂದ ವಿಳಂಬವಾಗಿದ್ದರಿಂದ ಬಿಡುಗಡೆಯ ದಿನಾಂಕವನ್ನು ಹಲವು ಬಾರಿ ಮುಂದೂಡಲಾಗಿತ್ತು. ಇದೀಗ 'ಅಣ್ಣಾತ್ತೆ' ಚಿತ್ರ ನವೆಂಬರ್ 4 ದೀಪಾವಳಿ (Diwali) ಹಬ್ಬದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಇದರ ಹಕ್ಕುಗಳನ್ನು ಪ್ರಮುಖ ವಿತರಣಾ ಕಂಪನಿ ಏಷ್ಯನ್ ಸಿನಿಮಾಸ್ (Asian Cinemas) ಖರೀದಿಸಿದೆ.

"

ಸನ್ ಪಿಕ್ಚರ್ಸ್ (Sun Pictures) ನಿರ್ಮಾಣದಲ್ಲಿ ಮೂಡಿಬಂದಿರುವ 'ಅಣ್ಣಾತ್ತೆ' ಚಿತ್ರದ ಟೈಟಲ್ ಟ್ರ್ಯಾಕ್ (Title Track) ಇತ್ತೀಚೆಗಷ್ಟೇ ಬಿಡುಗಡೆಯಾಗಿ,  ರಜನಿಕಾಂತ್ ವೈಟ್ ಆ್ಯಂಡ್ ವೈಟ್ ಪಂಚೆ-ಶರ್ಟ್ ಧರಿಸಿ, ಕನ್ನಡಕ ಧರಿಸಿ ಟ್ರೆಡಿಷನಲ್ ಲುಕ್​ನಲ್ಲಿ ಮಾಸ್ ಆಗಿ ಹಾಡಿನಲ್ಲಿ ಮಿಂಚಿದ್ದರು. ಅಲ್ಲದೇ ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ (S.P.Balasubrahmanyam) ಮತ್ತು ರಜನಿಕಾಂತ್ ಜೋಡಿಯ ಹಾಡಾಗಿತ್ತು.

ಎಸ್‌ಪಿಬಿ ಅವರು ಹಾಡಿದ ಕೊನೆಯ ಹಾಡು ತಲೈವಾ ಸಿನಿಮಾ ಅಣ್ಣಾತೆಯಲ್ಲಿದೆ. ರಜನೀಕಾಂತ್ ಅಭಿನಯದ ಬಹುತೇಕ ಸಿನಿಮಾಗಳಲ್ಲಿ (Movie)ಎಸ್‌ಪಿಬಿ ಹಾಡುಗಳು ಇರುತ್ತವೆ. ಅಣ್ಣಾತೆ ಸಿನಿಮಾದ ಟೈಟಲ್ ಸಾಂಗ್‌ಗೆ ಧ್ವನಿ ಕೊಟ್ಟಿದ್ದು ಎಸ್‌ಪಿಬಿ. ವಿಶೇಷತೆ ಎಂದರೆ ಇದು ಎಸ್‌ಪಿಬಿ(SPB) ಅವರು ಹಾಡಿದ ಕೊನೆಯ ಹಾಡೂ ಹೌದು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?