
ತಮಿಳು ಸಿನಿಮಾ ನೋಡುವವರಿಗೆ ರಾಹುಲ್ ರಾಮಕೃಷ್ಣ (Rahul Ramakrishna) ಯಾರೆಂದು ಪದಗಳಲ್ಲಿ ಹೇಳುವುದೇ ಬೇಡ. ಆತನ ಮುಖ ನೋಡಿದರೆ ಅಬ್ಬಾ! ಇವನೇ ಕಣ್ಣಪ್ಪ ಎಲ್ಲಾ ಸ್ಟಾರ್ ನಟ, ನಟಿಯರಿಗೂ ಆನ್‌ಸ್ಕ್ರೀನ್‌ನಲ್ಲಿರುವ ಏಕೈಕ ಸ್ನೇಹಿತ ಎಂದು ಹೇಳುತ್ತಾರೆ. ತೆರೆ ಮೇಲೆ ರಾಹುಲ್ ಗಂಭೀರವಾಗಿದ್ದರೂ, ನೋಡುತ್ತಿರುವ ವೀಕ್ಷಕರು ನಗುತ್ತಲೇ ಇರುತ್ತಾರೆ. ಅದು ಈ ಅದ್ಭುತ ನಟನಿಗಿರುವ ಶಕ್ತಿ.
2014ರಲ್ಲಿ 'ಜಯಮ್ಮು ನಿಶ್ಚಯಮ್ಮು ರಾ' ಸಿನಿಮಾ ಮೂಲಕ ನಟ ಮತ್ತು ಸಂಭಾಷಣೆ ಬರಹಗಾರನಾಗಿ ವೃತ್ತಿ ಆರಂಭಿಸಿದ ರಾಹುಲ್ ರಾಮಕೃಷ್ಣ ಇದೀಗ ಸ್ನೇಹಿತನಾಗಿ ಮತ್ತು ಹಾಸ್ಯ ಕಲಾವಿನದಾಗಿ 27 ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ಸಿನಿಮಾ ಮಾಡಿದ ನಂತರ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ (Vijay Deverakonda) ಸ್ನೇಹಿತನಾಗಿ ಜೋಡಿಯಾದ ನಂತರ ರಾಹುಲ್ ಎಲ್ಲೇ ಹೋದರೂ ಅಭಿಮಾನಿಗಳು, ನೀನು ನನ್ನ ಸ್ನೇಹಿತ ಆಗಿರಬೇಕಿತ್ತು, ಎಂದು ಹೇಳುತ್ತಾರೆ. ಇಷ್ಟು ಜನಪ್ರಿಯತೆ ಪಡೆದಿರುವ ನಟ ಏನು ಟ್ಟೀಟ್ ಮಾಡಿದ್ದಾರೆ?
ರಾಹುಲ್ ಟ್ಟೀಟ್:
'2022 ನನ್ನ ಕೊನೆ ಜರ್ನಿ. ನಾನು ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ. ನಾನು ಕೇರ್ ಮಾಡುವುದಿಲ್ಲ, ನೀವು ಯಾರೂ ನನ್ನ ಬಗ್ಗೆ ಕೇರ್ ಮಾಡಬೇಡಿ,' ಎಂದು ಟ್ಟೀಟ್ ಮಾಡಿದ್ದರು.
ರಾಹುಲ್ ಟ್ಟೀಟ್ ನೋಡಿ ಅವರ ಕುಟುಂಬದವರೇ ಶಾಕ್ ಆಗಿತ್ತಂತೆ. ಎಸ್.ಎಸ್ ರಾಜಮೌಳಿ (SS Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್ (RRR) ಸಿನಿಮಾದಲ್ಲಿ ಹಾಗೂ ವಿರಾಠ ಪರ್ವ (Virata Parva) ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಎರಡೂ ಬಿಗ್ ಬಜೆಟ್ ಸಿನಿಮಾ ಆಗಿದ್ದು ರಾಹುಲ್ ವೃತ್ತಿ ಜೀವನವನೇ ಬದಲಾಯಿಸಲಿದೆ. ಆದರೆ ಈ ನಿರ್ಧಾರ ತೆಗೆದುಕೊಂಡಿರುವುದು ತಪ್ಪು ಎಂದು ಹಲವರು ಕರೆ ಮಾಡಿ, ಬುದ್ಧಿ ಹೇಳಿದ್ದಾರೆ ಇನ್ನೂ ಕೆಲವರು ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಶುಭ ಹಾರೈಸಿದ್ದಾರಂತೆ. ನಾನ್ ಸ್ಟಾಪ್ ಮೆಸೇಜ್ ಮತ್ತು ಕರೆ ಬರುತ್ತಿದ್ದ ಕಾರಣ ರಾಹುಲ್ ಮತ್ತೊಂದು ಟ್ಟೀಟ್ ಮಾಡಿದ್ದಾರೆ.
'ಅಯ್ಯೋ ದೇವರೆ. ಇದು ತಮಾಷೆ ಕಣ್ರೋ Fools. ಹೆಚ್ಚಿನ ಸಂಭಾವನೆ, ಜೀವನಕ್ಕೆ ಬೇಡ ಬೇಡ ಅಂದರೂ ಬರುತ್ತಿರುವ Luxuryನ ಬೇಡ ಎಂದು ಹೇಳಿ ಕೆಲಸ ಬಿಟ್ಟು ಹೇಗೆ ಕಳಿತುಕೊಳ್ಳಲಿ?ನನಗೆ ನಂಬಲು ಆಗದ ವಿಚಾರ ಏನೆಂದರೆ ನನ್ನ ಸ್ನೇಹಿತರು ಕರೆ ಮಾಡಿ ಶುಭ ಹಾರೈಸುತ್ತಿದ್ದಾರೆ. ನನ್ನ ನಿವೃತ್ತಿ ಏನ್ ಮಜಾನೋ ನಿಮ್ಗೆ?' ಎಂದು ಮತ್ತೆ ಟ್ಟೀಟ್ ಮಾಡಿದ್ದಾರೆ. ಇದು ಏಪ್ರಿಲ್ ತಿಂಗಳಲ್ಲ ಆದರೂ ರಾಹುಲ್ ಯಾಕೆ ಇಷ್ಟು ಗಂಭೀರವಾದ ವಿಚಾರಕ್ಕೆ ಈ ರೀತಿ ಜೋಕ್ ಮಾಡಿದ್ದಾರೆಂದು ಯಾರಿಗೂ ಆರ್ಥವಾಗಿಲ್ಲ.
ರಾಹುಲ್ ವೃತ್ತಿಯಲ್ಲಿ ಪತ್ರಕರ್ತ (Journalist). ಹೀಗೆ ಕೆಲಸದ ಮೇಲೆ ಹೈದರಾಬಾದ್‌ಗೆ (Hyderabad) ಒಂದು ದಿನ ಪ್ರಯಾಣ ಮಾಡಿದ್ದರು. ಆಗ ಸಣ್ಣ ಪಾತ್ರವೊಂದು ಅನಿರೀಕ್ಷಿತವಾಗಿ ಅವರ ಕೈ ಸೇರಿತ್ತು ರಂಗಭೂಮಿಯಲ್ಲಿ ಕೆಲಸ ಮಾಡಿರುವ ಅನುಭವವಿದ್ದ ಕಾರಣ ಒಂದು ಪ್ರಯತ್ನ ಕೊಟ್ಟು, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಮೆಕ್ಯಾನಿಕಲ್ ಇಂಜಿನಿಯರಿಂಗ್ (Mechanical Engineering) ಓದುತ್ತಿದ್ದವರು ಇದು ನನಗಲ್ಲ ಎಂದು ಎರಡನೇ ವರ್ಷಕ್ಕೆ ವಿದ್ಯಾಭ್ಯಾಸ ನಿಲ್ಲಿಸಿಬಿಟ್ಟರು. ತಂದೆ ಯೋಗ ಹೇಳಿಕೊಡುತ್ತಾರೆ. ತಾಯಿ ಬ್ಯುಸಿನೆಸ್ ಮ್ಯಾಗಜಿನ್‌ಲ್ಲಿ (Bussiness Magazine) ಅಸಿಸ್ಟೆಂಟ್ ಎಡಿಟರ್ ಆಗಿರುವ ಕಾರಣ ರಾಹುಲ್ ಪತ್ರಕರ್ತನ ದಾರಿ ಹಿಡಿದರು. ಸೈಮಾ ಬೆಸ್ಟ್ ಹಾಸ್ಯ ನಟ, ಫಿಲ್ಮಫೇರ್ ಸೌತ್ ಹಾಸ್ಯ ನಟ, ಜೀ ತೆಲುಗು ಹಾಸ್ಯ ನಟ ಹಾಗೂ ಇತ್ತೀಚಿಗೆ ನಡೆದ ಸೈಮಾ ...ಇಷ್ಟು ಪ್ರಶಸ್ತಿಗಳನ್ನು ಈ ಹಾಸ್ಯ ಕಲಾವಿದ ಗಿಟ್ಟಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.