
ಸಿನಿ ವೀಕ್ಷಕರು ಮಾತ್ರವಲ್ಲದೇ ಇಡೀ ಬಾಲಿವುಡ್ ಸ್ಟಾರ್ ನಟ, ನಟಿಯರು ಕಾಯುವುದು ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಸಿನಿಮಾ ನೋಡಲು. ಎರಡು ಮೂರು ಬಾರಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ (Ranveer Singh) ಜೊತೆ ಸಿನಿಮಾ ಮಾಡಿ, ವೀಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿರುವ ನಟ ಇದೀಗ ತಮ್ಮ ತಂಡಕ್ಕೆ ಆಲಿಯಾ ಭಟ್ ಅವರನ್ನು (Alia Bhat) ಸೇರಿಸಿಕೊಂಡು ಮಹಿಳಾ ಡಾನ್ ಪಾತ್ರ ಮಾಡಿಸಿದ್ದಾರೆ. ಆಲಿಯಾ ಭಟ್‌ಗೆ ಇಷ್ಟೊಂದು ಟ್ಯಾಲೆಂಟ್ ಇದೆ ಅಂತ ಯಾರಿಗೂ ಗೊತ್ತಿರಲಿಲ್ಲ ನೋಡಿ...
ಹೌದು! ಆಲಿಯಾ ಭಟ್ ಕಾಮಟಿಪುರದ ಡಾನ್ (Kamathipura Don) ಆಗಿ ಗಂಗೂಬಾಯಿ ಕಾಠಿವಾಡಿ (Gangubai Kathiawadi ) ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು, ನಟಿಯ ಖಡಕ್ attitudeಗೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಈ ಚಿತ್ರದಲ್ಲಿ ಆಲಿಯಾ ಜೊತೆ ಅಜಯ್ ದೇವಗನ್ (Ajay Devgan) ಮತ್ತು ವಿಜಯ್ ರಾಜ್ (Vijay Raj) ನಟಿಸಿದ್ದಾರೆ. ಫೆಬ್ರವರಿ 25ರಂದು ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಇಡೀ ತಂಡ ಪ್ರಚಾರದಲ್ಲಿ ಸಖತ್ ಬ್ಯುಸಿಯಾಗಿದೆ.
ಚಿತ್ರದ ಟ್ರೈಲರ್ ನೋಡಿ ಎಲ್ಲಾ ಸ್ಟಾರ್‌ಗಳು ಟ್ಟೀಟ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆಲಿಯಾ ನಸೀಬ್ ಬದಲಾಯಿಸಿಬಿಟ್ಟರು ಸಂಜಯ್ ಎನ್ನುತ್ತಿದ್ದಾರೆ. 'ಶಕ್ತಿ, ಸಂಪತ್ತು, ಸದ್ಬುದ್ಧಿ ಈ ಮೂವರೂ ಹೆಣ್ಣಾಗಿರುವಾಗ ಈ ಪುರುಷರಿಗೆ ಯಾಕಾಗಿ ಇಷ್ಟೊಂದು ದುರಹಂಕಾರ? ಈ ಸಿನಿಮಾ ಚೆನ್ನಾಗಿರಲಿದೆ ಎಂದು ಭಾವಿಸಿರುವೆ. ಇದು ಸಂಜಯ್ ಸಿನಿಮಾ ಜೊತೆಗೆ ಆಲಿಯಾ ಬೇರೆ ಲುಕ್' ಎಂದು ಸಮೀನಾ ಶೇಖ್ (Sameena Shekh) ಟ್ಟೀಟ್ ಮಾಡಿದ್ದಾರೆ. ಡಯಾನ ಪೆಂಟಿ (Diana Penty), ರಕುಲ್ ಸಿಂಗ್ (Rakul singh), ಕರಣ್ ಜೋಹಾರ್ (Karan Johar), ಅನಿಲ್ ಕಪೂರ್ (Anil Kapoor) ಸೇರಿ ನೂರಾರೂ ಸೆಲೆಬ್ರಿಟಿಗಳು ಟ್ಟೀಟ್ ಮಾಡಿದ್ದಾರೆ.
ಹಲವು ವರ್ಷಗಳಿಂದ ಆಲಿಯಾ ಭಟ್‌ನ ಇಮೇಜ್ ಬರೀ ಲವರ್ ಗರ್ಲ್ (Lover Girl) ಆಗಿತ್ತು. ಆದರೀಗ ಖಡಕ್ ಮಹಿಳೆ ಪಾತ್ರವಾಗಿದೆ. ಕ್ಯಾಮೆರಾ ನೋಡಿದರೆ ಓಡಿ ಹೋಗುತ್ತಿದ್ದ ಆಲಿಯಾ ಇದೀಗ ಗಂಗೂಬಾಯ್ ರೀತಿ ನಮಸ್ಕರಿಸಿ (Namaste) ಫೋಸ್ ಕೊಟ್ಟು ಮಾತನಾಡುತ್ತಾರೆ. ಎಲ್ಲಾ ಸಂಜಯ್ ಲೀಲಾ ಪ್ರಭಾವ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಆಲಿಯಾ ಮಾತ್ರವಲ್ಲ ಬಾಯ್ ಫ್ರೆಂಡ್ ರಣಬೀರ್ ಕಪೂರ್ (Ranbir Kapoor) ಕೂಡ ಪ್ಯಾಪರಾಜಿಗಳ ಮುಂದೆ ಬಂದು ಆಲಿಯಾ ರೀತಿ ನಮಸ್ಕಾರ ಮಾಡುವಂತೆ, ಪೋಸ್ ಕೊಟ್ಟಿದ್ದಾರೆ.
ಈ ಸಿನಿಮಾದ ಬಜೆಟ್ 55 ಕೋಟಿ ರೂಪಾಯಿ ಎನ್ನಲಾಗಿದೆ. ದೊಡ್ಡ ದೊಡ್ಡ ಸ್ಟಾರ್‌ಗಳಿರುವ ಈ ಸಿನಿಮಾದಲ್ಲಿ ಸೆಟ್ ಎಲ್ಲರ ಗಮನ ಸೆಳೆದಿದೆ. ಹಾಗೆಯೇ ದೇಶದ ಜನಪ್ರಿಯ ಡಿಸೈನರ್‌ಗಳನ್ನು ಕರೆಸಿ VFX ಮಾಡಿಸಲಾಗಿದೆ. ಪ್ರಿಂಟಿಂಗ್ ಮತ್ತು ಜಾಹೀರಾತು ಸೇರಿಸಿ ಬಜೆಟ್ ಇಷ್ಟಾಗಿದೆ ಎನ್ನಲಾಗಿದೆ. ಈ ಕ್ರೈಮ್ ಡ್ರಾಮಾ ಸಿನಿಮಾವನ್ನು ಜಯಂತಿ ಲಾಲ್ ಗಡ್ಡ ನಿರ್ಮಾಣ ಮಾಡಿದ್ದಾರೆ ಹಾಗೂ ಮುಂಬೈನ ಹುಸೇನ್ ಜೈದಿ ಮಾಫಿಯಾ ಕ್ವೀನ್ಸ್ ಅವರ ಪುಸ್ತಕದಿಂದ ಕಥೆ ತೆಗೆದುಕೊಳ್ಳಲಾಗಿದೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.