
ಬಾಲಿವುಡ್ ಟನ ಅರ್ಜುನ್ ಕಪೂರ್ ವ್ಯಾಲೆಂಟೈನ್ಸ್ ಡೇಯನ್ನು ವಿಶೇಷವಾಗಿ ಆಚರಿಸಿದ್ದಾರೆ. ತನ್ನ ಮನಸಿಗೆ ಮೆಚ್ಚುಗೆಯಾಗುವ ಕೆಲಸವನ್ನು ಮಾಡಿ ಇತರರಿಗೂ ಮಾದರಿಯಾಗಿದ್ದಾರೆ.
ಈ ವ್ಯಾಲೆಂಟೈನ್ಸ್ ಡೇ ಸಂದರ್ಭ ನಟ ಅರ್ಜುನ್ ಕಪೂರ್ ಕ್ಯಾನ್ಸರ್‌ನಿಂದ ಬಳಲುತ್ತಿರುವ 100 ಬಡ ಜೋಡಿಗಳಿಗೆ ನೆರವು ನೀಡಿದ್ದಾರೆ. ಪಾನಿಪತ್ ನಟ ಅರ್ಜುನ್ ತಾಯಿ ಮೋನಾ ಶೋರಿ ಕ್ಯಾನ್ಸರ್‌ಗೆ ಬಲಿಯಾದರು. ಆ ನಂತರ ನಟ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತಾ ತಮ್ಮಿಂದಾದ ನೆರವನ್ನು ನೀಡುತ್ತಿದ್ದಾರೆ.
Happy ಕಿಸ್ ಡೇ: ಜನ ಮೆಚ್ಚಿದ ರೊಮ್ಯಾಂಟಿಕ್ ಕಿಸ್ಸಿಂಗ್ ಸೀನ್‌ಗಳಿವು
ಬಡ ಜನರಿಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ನೆರವಾಗುತ್ತಿದ್ದಾರೆ. ಇದಕ್ಕಾಗಿಯೇ ನಟ ಕ್ಯಾನ್ಸರ್ ಪೇಷೆಂಟ್ಸ್ ಏಡ್ ಎಸೊಸಿಯೇಷನ್ ಜೊತೆಗೂ ಕೈ ಜೋಡಿಸಿದ್ದಾರೆ. ಈ ಮೂಲಕ ಬಡ ದಂಪತಿಗೆ ನೆರವಾಗುತ್ತಿದ್ದಾರೆ.
ಕೊರೋನಾ ಇನ್ನೊಬ್ಬರಿಗೆ ನೆರವಾಗುವುದರ ಮಹತ್ವವವನ್ನು ನಮಗೆ ತಿಳಿಸಿಕೊಟ್ಟಿದೆ. ನಮ್ಮಿಂದಾಗುವಾಗ ಪ್ರೀತಿ ಹಂಚಲು ಕಲಿಸಿದೆ. ಪ್ರೇಮಿಗಳ ದಿನ ಆಚರಣೆಗೆ ಎಲ್ಲರೂ ಕಾತುರರಾಗಿದ್ದಾರೆ. ನಾನು ಏನೋ ಡಿಫರೆಂಟ್ ಮಾಡಲಿದ್ದೇನೆ ಎಂದಿದ್ದರು ನಟ.
ಶಿಲ್ಪಾ ಶೆಟ್ಟಿಯ ರೆಡ್ ಸ್ಯಾರಿ ಫೋಟೋ ಸಖತ್ ವೈರಲ್!
100 ಬಡ ದಂಪತಿಯ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತಿದ್ದೇನೆ. ತನ್ನ ಸಂಗಾತಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಾನೆ, ಪ್ರತಿ ಘಳಿಗೆ ಬೆಂಬಲವಾಗಿರುತ್ತಾನೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.