ಕಳೆದ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ಅತ್ಯುತ್ತಮ ಚಿತ್ರಗಳ ಲಿಸ್ಟ್‌ನಲ್ಲಿ ಜನಪ್ರಿಯತೆಯಲ್ಲಿ ಡಾಲಿ ಧನಂಜಯ್ ಅವರ ರತ್ನನ್ ಪ್ರಪಂಚ(Ratnan Prapancha) ಮೊದಲ ಸ್ಥಾನದಲ್ಲಿದೆ.
ಕಳೆದ ವರ್ಷ ಒಟಿಟಿ (OTT) ವೇದಿಕೆಗಳಲ್ಲಿ ಬಿಡುಗಡೆಯಾದ ಫಿಲಂಗಳಲ್ಲಿ ಜನಪ್ರಿಯತೆಯಲ್ಲಿ ಮೊದಲ ಸ್ಥಾನದಲ್ಲಿ ಇರೋದು ಯಾವುದು ಗೊತ್ತ? ಡಾಲಿ ಧನಂಜಯ್ (Dolly Dhananjay) ನಟನೆಯ ರತ್ನನ್ ಪ್ರಪಂಚ (Ratnan Prapancha). ಇದು ನಾವು ಹೇಳ್ತಿರೋ ಮಾತಲ್ಲ. ಜನ ಹೇಳ್ತಿರೋದು. ಹೇಗೆ ಅಂತೀರಾ? ಸ್ಯಾಂಡಲ್‌ವುಡ್ (Sandalwood) ಚಿತ್ರೋತ್ಸವ ಆನ್‌ಲೈನ್ (Online) ಪೋಲ್ ನಡೀತಿದೆ. 2021ರ ಜನವರಿ 1ರಿಂದ ನವೆಂಬರ್ 30ರವರೆಗೆ ಒಟಿಟಿಯಲ್ಲಿ ಬಿಡುಗಡೆ ಆದ ಫಿಲಂಗಳಲ್ಲಿ ನಿಮ್ಮ ಮೆಚ್ಚಿನದು ಯಾವುದು ಅಂತ ವೋಟ್ ಮಾಡೋ ಸಮೀಕ್ಷೆ ಇದು. ಇದರಲ್ಲಿ ರತ್ನನ್ ಪ್ರಪಂಚವನ್ನು ಮೆಚ್ಚಿ ಲಕ್ಷಾಂತರ ಮಂದಿ ವೋಟ್ ಮಾಡಿದ್ದಾರೆ. ಡಾಲಿ ಧನಂಜಯ, ಉಮಾಶ್ರೀ, ಪ್ರಮೋದ್ ನಟನೆಯ ಈ ಫಿಲಂ ಜನರ ಭಾರಿ ಮೆಚ್ಚುಗೆ ಪಡೆದಿತ್ತು.
ಬಹಳ ದಿನಗಳ ನಂತರ ರತ್ನನ್ ಪ್ರಪಂಚ ಧನಂಜಯ್ ಅವರಿಗೆ ಒಂದು ಬ್ಲಾಕ್ ಬಸ್ಟರ್ (Block buster) ಓಪನಿಂಗ್ ತಂದುಕೊಟ್ಟಿತ್ತು. ಅವರ ಈ ಅಭಿಯಾನ ನಂತರ ಥಿಯೇಟರ್‌ಗಳಲ್ಲಿ ಬಂದ ಅವರ 'ಬಡವ ರಾಸ್ಕಲ್' (Badava Rascal) ಚಿತ್ರದ ಯಶಸ್ಸಿಗೂ ಕಾರಣವಾಗಿದೆ. ಹಲವಾರು ವರ್ಷಗಳಿಂದ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಸೈಕಲ್ ತುಳಿದಿದ್ದಾರೆ. ಟಗರು ಚಿತ್ರದ ಡಾಲಿ ಪಾತ್ರದ ಮೂಲಕ ಅವರನ್ನು ಜನ ಗುರುತಿಸಿದ್ದರು. ಡಾಲಿ ಪಾತ್ರ ವಿಲನ್‌ನದು. ನಂತರ ಪಾಪ್‌ಕಾರ್ನ್ ಮಂಕಿ ಟೈಗರ್ (Popcorn Monkey Tiger) ಫಿಲಂನಲ್ಲಿ ಮಂಕಿ ಸೀನ ಪಾತ್ರ ಮಾಡಿದ್ದರು. ನೆಗೆಟಿವ್ ಶೇಡ್ ಇರುವ ಈ ಪಾತ್ರವೂ ಜನರನ್ನು ಸೆಳೆದಿತ್ತು. ಹೀಗೆ ಹಂತ ಹಂತವಾಗಿ ಮೆಟ್ಟಿಲು ಹತ್ತುತ್ತಾ ಹೋಗಿರುವ ಧನಂಜಯ, ಬಡವ ರ್ಯಾಸ್ಕಲ್ ಮೂಲದ ಮಾಸ್ ಹೀರೋ ಆಗಿದ್ದಾರೆ.
Sunny Leone In Maldives: ದ್ವೀಪರಾಷ್ಟ್ರದಲ್ಲಿ ಬಾಲಿವುಡ್ ಸುಂದರಿ..!
ರತ್ನನ್ ಪ್ರಪಂಚ ಚಿತ್ರದಲ್ಲಿ ಬಹುದಿನಗಳ ಬಳಿಕ ಉಮಾಶ್ರೀ ಅವರ ನೈಜ ಅಭಿನಯವನ್ನು ಕಾಣುವ ಯೋಗವೂ ಕನ್ನಡ ಚಿತ್ರರಸಿಕರಿಗೆ ಬಂದಿತ್ತು. ರತ್ನನ್ ಪ್ರಪಂಚದ ಮೂಲಕ ಅವರು ಫ್ಯಾಮಿಲಿ ಎಂಟರ್‌ಟೇನರ್ ಅನ್ನಿಸಿಕೊಂಡಿದ್ದರು. ಇನ್‌ಫೋಸಿಸ್‌ನಲ್ಲಿ ಎಂಜಿನಿಯರ್ ಆಗಿದ್ದ ಧನಂಜಯ, ನಟಿಸುವುದಕ್ಕಾಗಿ ಆ ಕೆಲಸ ತೊರೆದು ಕನ್ನಡ ಚಿತ್ರರಂಗಕ್ಕೆ ಬಂದದ್ದೇ ದೊಡ್ಡ ಕತೆ. ಅವರ ಲೈಫ್‌ಸ್ಟೋರಿಯೇ ಸಿನಿಮಾ ಮಾಡುವ ಹಾಗಿದೆ.
ಮೊದಲ ಸಿನಿಮಾ ಗುರು ಪ್ರಸಾದ್ ನಿರ್ದೇಶನದ 'ಅಲ್ಲಮ'. ಇದಕ್ಕಾಗಿ ಧನಂಜಯ ಪಟ್ಟ ಪಾಡು ಸಣ್ಣದಲ್ಲ. ಅದೆಲ್ಲ ಹಳೇ ಕಥೆ ಆದರೆ ಧನಂಜಯ ತನ್ನ ಅಷ್ಟೂ ನೋವು, ಫ್ರರ್ಸ್ಟೇಶನ್‌ಗಳನ್ನು ಹೊರಹಾಕಿದ್ದು ಟಗರು ಚಿತ್ರದ ಡಾಲಿ ಪಾತ್ರದ ಮೂಲಕ. ಅದು ಸೂಪರ್ ಡೂಪರ್ ಹಿಟ್ ಆದಮೇಲೆ ಧನಂಜಯ ಆಕ್ಟಿಂಗ್ ಜರ್ನಿ ಹೊಸ ಟರ್ನ್ ತಗೊಂಡು ಬಿಟ್ಟಿತು. ನಟನೆಯ ಸ್ಕಿಲ್ ಜೊತೆಗೆ ಇಷ್ಟೂ ವರ್ಷಗಳ ಅನುಭವ ಅವರನ್ನು ಒಬ್ಬ ಪರ್ಫೆಕ್ಟ್ ಹೀರೋವಾಗಿ ಮಾಡುತ್ತಿದೆ.
Rashmika Mandanna Look: ಮನೀಷ್ ವಿನ್ಯಾಸದ ಗೌನ್‌ನಲ್ಲಿ ಮಿಂಚಿದ ಕಿರಿಕ್ ಚೆಲುವೆ
ವಿಶೇಷ ಅಂದರೆ ಮೇಲೆ ಹೇಳಿದ ಆನ್‌ಲೈನ್ ಪೋಲ್‌ನಲ್ಲಿ ಧನಂಜಯ, ತಮಿಳಿನ ಸ್ಟಾರ್ ನಟ ಸೂರ್ಯ ಅವರನ್ನೂ ಹಿಂದೆ ಇಕ್ಕಿರುವುದು. ಈ ಸ್ಪರ್ಧೆಯಲ್ಲಿ ರತ್ನನ್ ಪರಪಂಚ ಚಿತ್ರದ ಜೊತೆಗೆ ಸೂರ್ಯ ನಟನೆಯ ಜೈ ಭೀಮ್ ಕೂಡಾ ಇತ್ತು. ಜೊತೆಗೆ ಇಕ್ಕಟ್, 1980 ಮತ್ತು ಟಕ್ ಜಗದೀಶ್ ಕೂಡಾ ಇದ್ದವು. ಇಲ್ಲಿಯವರೆಗೆ ನಡೆದಿರುವ ವೋಟಿಂಗ್‌ನಲ್ಲಿ ರತ್ನನ್ ಪ್ರಪಂಚ ಚಿತ್ರಕ್ಕೆ 78% ವೋಟ್ ಬಿದ್ದಿವೆ. ಜೈ ಭೀಮ್ ಚಿತ್ರಕ್ಕೆ 18% ಹಾಗೂ ಇಕ್ಕಟ್ ಸಿನಿಮಾಗೆ 2%, 1980ಗೆ 1% ಮತ್ತು ಟಕ್ ಜಗದೀಶ್‌ಗೆ 1% ಮತಗಳು ಬಂದಿವೆ.
Salman Khans New Girlfriend: ಸಲ್ಲು ಜೊತೆ ಸಮಂತಾ ಲಿಂಕಪ್..! ಸಲ್ಮಾನ್ ಹೊಸ ಗರ್ಲ್‌ಫ್ರೆಂಡ್ ?
ಅಂದರೆ ಜೈ ಭೀಮ್ ಚಿತ್ರ ರತ್ನನ್ ಪ್ರಪಂಚಕ್ಕಿಂತ ತುಂಬಾ ಹಿಂದಿದೆ. ಆದರೆ ಜೈ ಭೀಮ್ ಚಿತ್ರದ ಪರವಾಗಿಯೂ ಅತ್ಯುತ್ತಮ ವಿಮರ್ಶೆ ಹಾಗೂ ಜನಾಭಿಪ್ರಾಯ ಕೇಳಿಬಂದಿತ್ತು. ಇದರಲ್ಲಿ ಸೂರ್ಯ, ದಲಿತರ ಪರ ಹೋರಾಡುವ ವಕೀಲರ ಪಾತ್ರ ನಿರ್ವಹಿಸಿದ್ದರು. ಇದು ನಿಜಕತೆ ಆಧರಿಸಿದ ಸಿನಿಮಾ. ತಮಿಳುನಾಡಿನ ಇರುಳಿಗರ ಜೀವನ ಮತ್ತು ಸಂಕಷ್ಟ ಆಧರಿಸಿ ಈ ಸಿನಿಮಾದ ಕತೆ ಸಿದ್ಧಪಡಿಸಲಾಗಿದೆ.