Corona Positive: ಕಳೆದ 24 ಗಂಟೆಯಲ್ಲಿ ಪಾಸಿಟಿವ್ ದೃಢಪಟ್ಟ ಸೆಲೆಬ್ರಿಟಿಗಳಿವರು

By Suvarna NewsFirst Published Jan 12, 2022, 10:32 AM IST
Highlights

ಈ ಬಾರಿ ಕೊರೋನಾ ಪಾಸಿಟಿವ್ ಕೇಸ್‌ಗಳು ಸೆಲೆಬ್ರಿಟಿ ಮಧ್ಯೆ ಹೆಚ್ಚಾಗಿದೆ. ಒಂದನೇ ಹಾಗೂ ಎರಡನೇ ಅಲೆಗೆ ಹೋಲಿಸಿದಲ್ಲಿ ಈ ಬಾರಿ ದೇಶಾದ್ಯಂತ ಸೆಲೆಬ್ರಿಟಿಗಳು ಕೊರೋನಾ ಪಾಸಿಟಿವ್ ದೃಢಪಟ್ಟಿರುವ ಕೇಸ್ ಹೆಚ್ಚಾಗಿದೆ.

ಕರೀನಾ ಕಪೂರ್ ಖಾನ್‌ಗೆ ಕೊರೋನಾ ಪಾಸಿಟಿವ್ ಬಂದು, ಕರಣ್ ಜೋಹರ್ ಪಾರ್ಟಿ ಸುದ್ದಿಯಾಗಿ ನಂತರದಲ್ಲಿ ಸೆಲೆಬ್ರಿಟಿಗಳಿಂದ ಸಿಕ್ಕಿದ್ದು ಬರೀ ಕೊರೋನಾ ಪಾಸಿಟಿವ್ ಎಂಬ ಸುದ್ದಿ ಮಾತ್ರ. ಭಾರತದ ಗಾನ ಕೋಗಿಲೆ ಎಂದೇ ಪ್ರಸಿದ್ಧರಾಗಿರುವ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌(92) ಅವರಿಗೆ ಮಂಗಳವಾರ ಕೋವಿಡ್‌ ಸೋಂಕು ದೃಢಪಟ್ಟಿದೆ. ಅವರನ್ನು ದಕ್ಷಿಣ ಮುಂಬೈನ ಬೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲತಾ ಅವರಿಗೆ ಕಾಣಿಸಿಕೊಂಡಿರುವ ರೋಗ ಲಕ್ಷಣಗಳು ಸೌಮ್ಯವಾಗಿವೆ. ಆದರೆ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದರು. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ನಟ ಹೃತಿಕ್‌ ರೋಶನ್‌ ಅವರ ಮಾಜಿ ಪತ್ನಿ ಸುಸನ್ನೇ ಖಾನ್‌ ಅವರಿಗೂ ಕೋವಿಡ್‌ ಸೋಂಕು ದೃಢಪಟ್ಟಿದೆ.

ಗಾಯಕಿ ಲತಾ ಮಂಗೇಶ್ಕರ್, ಇಂಟೀರಿಯರ್ ಡಿಸೈನರ್ ಸುಸ್ಸಾನೆ ಖಾನ್, ನಟಿ ಕೀರ್ತಿ ಸುರೇಶ್, ಜಿತೇಂದ್ರ ಜೋಶಿ, ಪೂಜಾ ಗೋರ್ ಮತ್ತು ನೆಹ್ಹಾ ಪೆಂಡ್ಸೆ ಸೇರಿದಂತೆ ಬಾಲಿವುಡ್ ಮತ್ತು ಟಿವಿ ಸೆಲೆಬ್ರಿಟಿಗಳಿಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ.

ಲತಾ ಮಂಗೇಶ್ಕರ್: 92 ವರ್ಷದ ಗಾಯಕಿ ರೋಗಲಕ್ಷಣಗಳೊಂದಿಗೆ ಕೊರೊನಾವೈರಸ್‌ಗೆ ಪಾಸಿಟಿವ್ ಬಂದಿದೆ. ಎರಡು ದಿನಗಳ ಹಿಂದೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದರು ಎಂದು ಅವರ ಸೋದರ ಸೊಸೆ ರಚನಾ ಶಾ ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ. ಭಾನುವಾರ ಮುಂಜಾನೆ ಲತಾ ಮಂಗೇಶ್ಕರ್ ಅವರನ್ನು ದಾಖಲಿಸಲಾಯಿತು. ಅವರು ಕೋವಿಡ್ -19 ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಐಸಿಯುನಲ್ಲಿದ್ದಾರೆ. ಅವರು ಪ್ರತಿಕ್ರಿಯಿಸುತ್ತಿದ್ದಾರೆ, ಆದರೆ ನಾವು ಚಿಕಿತ್ಸೆ ಮುಂದುವರಿಸಬೇಕಾಗಿದೆ. ಸುಮಾರು 7-10 ದಿನಗಳ ಕಾಲ ಆಕೆಯನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

ಸುಸೇನ್ ಖಾನ್: ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಅವರು ಕೊರೊನಾವೈರಸ್‌ನ ಓಮಿಕ್ರಾನ್ ರೂಪಾಂತರಕ್ಕೆ ತುತ್ತಾಗಿದ್ದಾರೆ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಚಿತ್ರವನ್ನು ಹಂಚಿಕೊಂಡ ಅವರು, ಎರಡು ವರ್ಷಗಳ ಕಾಲ ಕೋವಿಡ್ -19 ಅನ್ನು ಎದುರಿಸಿದ ನಂತರವೂ 2022 ರ ಮೂರನೇ ವರ್ಷದಲ್ಲಿ ಓಮಿಕ್ರಾನ್ ರೂಪಾಂತರವು ನನ್ನ ಇಮ್ಯುನಿಟಿಯನ್ನು ದಾಟಿ ನನಗೆ ಸೋಂಕಿದೆ. ನನಗೆ ಕೊರೋನಾ ಪಾಸಿಟಿವ್. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಕಾಳಜಿ ವಹಿಸಿ ಎಂದು ಬರೆದಿದ್ದಾರೆ.

ಹಿರಿಯ ಗಾಯಕಿಗೆ ಕೊರೋನಾ ಪಾಸಿಟಿವ್

ಕೀರ್ತಿ ಸುರೇಶ್: ಎಲ್ಲರಿಗೂ ನಮಸ್ಕಾರ, ನನಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೂ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ದಯವಿಟ್ಟು ಎಲ್ಲಾ ಕೋವಿಡ್ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ. ನಾನು ಪ್ರಸ್ತುತ ಪ್ರತ್ಯೇಕವಾಗಿರುತ್ತೇನೆ. ಸುರಕ್ಷಿತ ಆರೈಕೆಯಲ್ಲಿದ್ದೇನೆ. ನನ್ನ ಜೊತೆ ಸಂಪರ್ಕದಲ್ಲಿದ್ದವರು ಟೆಸ್ಟ್ ಮಾಡಿಸಿಕೊಳ್ಳಿ ಎಂದಿದ್ದಾರೆ.

ನೆಹ್ಹಾ ಪೆಂಡ್ಸೆ: ಟಿವಿ ಶೋ ಭಾಬಿಜಿ ಘರ್ ಪರ್ ಹೈನ್‌ ಖ್ಯಾತಿಯ ನಟಿ ತಮಗೆ ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆ. ಎರಡು ವರ್ಷಗಳ ಕಾಲ ವೈರಸ್‌ನಿಂದ ತಪ್ಪಿಸಿಕೊಂಡರೂ ದುರದೃಷ್ಟವಶಾತ್ ಈಗ ವೈರಸ್ ತಗುಲಿದೆ. ಫಲಿತಾಂಶಗಳು ಪಾಸಿಟಿವ್ ಆಗಿದೆ. ನಾನು ಹೋಮ್ ಕ್ವಾರಂಟೈನ್‌ನಲ್ಲಿದ್ದೇನೆ ಎಂದಿದ್ದಾರೆ.

ಪೂಜಾ ಗೋರ್: ಮನ್ ಕೀ ಆವಾಜ್ ಪ್ರತಿಜ್ಞಾ ನಟಿ ಕೂಡ Instagram ನಲ್ಲಿ ಪಾಸಿಟಿವ್ ದೃಢಪಟ್ಟಿದ್ದನ್ನು ಹೇಳಿದ್ದಾರೆ. ತನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾ, ಪೋಸ್ಟ್‌ಗೆ ಪಾಸಿಟಿವ್ ವೈಬ್ಸ್ ಎಂದು ಬರೆದಿದ್ದಾರೆ.

ಜಿತೇಂದ್ರ ಜೋಶಿ: ಸೇಕ್ರೆಡ್ ಗೇಮ್ಸ್ ನಟನಿಗೆ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕೊರೋನಾ ನನ್ನ ದೇಹವನ್ನು ಆಯ್ಕೆ ಮಾಡಿದೆ. ಇದು ತುಂಬಾ ನೋವಿನಿಂದ ಕೂಡಿದೆ. ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷಿಸಿ ಎಂದಿದ್ದಾರೆ.

ವೀರ್ ದಾಸ್: ಸೋಮವಾರ ಸಂಜೆ, ಹಾಸ್ಯನಟ-ನಟ Instagram ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ತಮಗೆ ಪಾಸಿಟಿವ್ ದೃಢಪಟ್ಟಿರುವುದಾಗಿ ಹೇಳಿದ್ದಾರೆ.

ಮಂಗಳವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಭಾರತವು 1,68,063 ಹೊಸ ಕೊರೊನಾವೈರಸ್ ಸೋಂಕುಗಳನ್ನು ದಾಖಲಿಸಿದೆ. ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 3,58,75,790 ಕ್ಕೆ ತಲುಪಿದೆ. ಇದರಲ್ಲಿ ಒಮಿಕ್ರಾನ್ ರೂಪಾಂತರದ 4,461 ಪ್ರಕರಣಗಳು ಸೇರಿವೆ. ಒಮಿಕ್ರಾನ್ ರೂಪಾಂತರದ ಒಟ್ಟು 4,461 ಪ್ರಕರಣಗಳಲ್ಲಿ, 1,711 ಜನರು ಇಲ್ಲಿಯವರೆಗೆ ಚೇತರಿಸಿಕೊಂಡಿದ್ದಾರೆ.

click me!