ಬರ್ತ್​​ಡೇ ಸಂಭ್ರಮದಲ್ಲಿ ಸ್ವೀಟಿ ಅನುಷ್ಕಾ ಶೆಟ್ಟಿ; ಘಾಟಿ ಅವತಾರದಲ್ಲಿ ಮಾಸ್ ಎಂಟ್ರಿ!

Published : Nov 08, 2024, 11:59 AM IST
ಬರ್ತ್​​ಡೇ ಸಂಭ್ರಮದಲ್ಲಿ ಸ್ವೀಟಿ ಅನುಷ್ಕಾ ಶೆಟ್ಟಿ; ಘಾಟಿ ಅವತಾರದಲ್ಲಿ ಮಾಸ್ ಎಂಟ್ರಿ!

ಸಾರಾಂಶ

ಘಾಟಿ ಚಿತ್ರದ ಲುಕ್ ವೈರಲ್. ಅನುಷ್ಕಾ ಶೆಟ್ಟಿ ಮುಂದಿನ ಸಿನಿಮಾಗಳು ಪ್ಯಾನ್ ಇಂಡಿಯಾ ಆಗುವುದರಲ್ಲಿ ಅನುಮಾನವಿಲ್ಲ....  

ಸ್ವೀಟಿ ಅನುಷ್ಕಾ ಶೆಟ್ಟಿ ಬರ್ತ್​ಡೇ ಸಂಭ್ರಮದಲ್ಲಿದ್ದಾರೆ. ಬರ್ತ್​​ಡೇಗೆ ಸ್ವೀಟಿಯ ಘಾಟಿ ಅವತಾರ ಕೂಡ ರಿವೀಲ್ ಆಗಿದೆ. ಘಾಟಿ ಮೂವಿಯ ಫಸ್ಟ್ ಲುಕ್ ನೋಡಿದವರು ಕ್ವೀನ್ ಈಸ್ ಬ್ಯಾಕ್ ಅಂತಿದ್ದಾರೆ. ಅನುಷ್ಕಾ ನಟನೆಯ ಈ ನ್ಯೂ ಸಿನಿಮಾದ ಅಪ್​ಡೇಟ್ ಜೊತೆಗೆ ಸ್ವೀಟಿ ಕೊಡ್ತಿರೋ ಸ್ವೀಟ್ ಸಮಾಚಾರ ಏನು ಅನ್ನೋದನ್ನ ನೋಡ್ಕೊಂಡ್ ಬರೋಣ ಬನ್ನಿ.

ಯೆಸ್! ಸ್ವೀಟಿ ಅನುಷ್ಕಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಹುಬಲಿ-2 ನಂತರ ಅನುಷ್ಕಾ ಸಿನಿಮಾಗಳಲ್ಲಿ ನಟಿಸೋದು ಸಿಕ್ಕಾಪಟ್ಟೆ ಕಡಿಮೆ ಮಾಡಿದ್ದಾರೆ. 2017ರಲ್ಲಿ ಬಂದ ಬಾಹುಬಲಿ-2 ನಂತರ ಅನುಷ್ಕಾ ಆಕ್ಟ್ ಮಾಡಿದ್ದು ಜಸ್ಟ್ 3 ಸಿನಿಮಾಗಳಲ್ಲಿ. ಸೋ ಸ್ವೀಟಿನ ಫ್ಯಾನ್ಸ್​ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಾ ಇದ್ರು. ಹೀಗೆ ಮಿಸ್ ಮಾಡಿಕೊಳ್ತಿದ್ದ ಫ್ಯಾನ್ಸ್​ಗೆ ಈ ಬರ್ತ್​ಡೇ ಸಮಯದಲ್ಲಿ ಸ್ವೀಟಿ ಸ್ವೀಟ್ ಖಬರ್ ಕೊಟ್ಟಿದ್ದಾರೆ. ಅನುಷ್ಕಾ ಮತ್ತೆ ಸಿನಿಮಾಗಳಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು ಒಂದೇ ಬಾರಿಗೆ ಮೂರು ಸಿನಿಮಾಗಳಿಗೆ ಸೈನ್ ಮಾಡಿದ್ದಾರೆ. 

ಹ್ಯಾಪಿ ಬರ್ತಡೇ ಗೊಲ್ಲು; ಸಹೋದರನ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್!

ಸದ್ಯ ಅನುಷ್ಕಾ ಬರ್ತ್​ಡೇಯ ವಿಶೇಷವಾಗಿ ಘಾಟಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಂದಿದ್ದು, ಸಖತ್ ಸ್ಪೆಷಲ್ ಆಗಿದೆ. ರಕ್ತ ಮೆತ್ತಿದ ಕೈಗಳಲ್ಲಿ ಭಂಗಿ ಎಳೀತಾ ಇರೋ ಅನುಷ್ಕಾ ಲುಕ್ ಕಂಡು ಫ್ಯಾನ್ಸ್ ವಾರೇವ್ಹಾ ಅಂತಿದ್ದಾರೆ. ಕ್ವೀನ್ ಈಸ್ ಬ್ಯಾಕ್ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ.ಘಾಟಿ ಸಿನಿಮಾಗೆ ಕ್ರಿಶ್ ನಿರ್ದೇಶನವಿದ್ದು, ಇದೊಂದು ಮಹಿಳಾ ಪ್ರಧಾನ   ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಅರುಂದತಿ, ಭಾಗಮತಿ, ರುದ್ರಮದೇವಿನಂತಹಾ ಪವರ್ ಫುಲ್ ರೋಲ್​​ಗಳಲ್ಲಿ ನಟಿಸಿ, ತನ್ನದೇ ಖದರ್​ನಿಂದ ಸಿನಿಮಾ ಗೆಲ್ಲಿಸಿದ್ದ ಅನುಷ್ಕಾ ಮತ್ತೊಮ್ಮೆ ಘಾಟಿ ಮೂಲಕ ಮೋಡಿ ಮಾಡೋ ಸೂಚನೆ ಸಿಕ್ತಾ ಇದೆ.

ಡಾಲಿ ಧನಂಜಯ್ ಲವ್ ಮ್ಯಾಟ್ರು ಸೀಕ್ರೆಟ್‌ ಆಗಿಟ್ಟಿದ್ರಾ?; ಗೆಳೆಯ ನವೀನ್ ಶಂಕರ್ ಹೇಳಿಕೆ ವೈರಲ್

ಇದಲ್ಲದೇ ಮಲ್ಟಿ ಸ್ಟಾರರ್ ಮೂವಿ ಖತನಾರ್ ಮತ್ತು ಇನ್ನೊಂದು ಹಾಸ್ಯ ಪ್ರಧಾನ ಸಿನಿಮಾದಲ್ಲಿ ಅನುಷ್ಕಾ ನಟಿಸ್ತಾ ಇದ್ದಾರೆ. ಸೋ ಇನ್ನು ಮುಂದೆ ಮತ್ತೆ ಬ್ಯಾಕ್ ಟು ಬ್ಯಾಕ್ ಅನುಷ್ಕಾನ ತೆರೆ ಮೇಲೆ ನೋಡಬಹುದು ಅಂತ ಫ್ಯಾನ್ಸ್ ಖುಷ್ ಆಗಿದ್ದಾರೆ.ಇನ್ನೂ ಅನುಷ್ಕಾದು ಇದು 43ನೇ ಹುಟ್ಟುಹಬ್ಬ. ಸೋ ಸ್ವೀಟಿ ಮದುವೆ ಯಾವಾಗ ಅಂತಾನೂ ಫ್ಯಾನ್ಸ್ ಪ್ರಶ್ನೆ  ಮಾಡ್ತಿದ್ದಾರೆ. ಸದ್ಯ ಸಿನಿಮಾಗೆ ಮರಳಿ ಸ್ವೀಟ್ ನ್ಯೂಸ್ ಕೊಟ್ಟಿರೋ ಅನುಷ್ಕಾ ಸದ್ಯದಲ್ಲೇ ಮದುವೆ ವಿಷಯದಲ್ಲೂ ಸ್ವೀಟ್ ಸಮಾಚಾರ ಕೊಡಬಹುದು ಅಂತ ಕಾಯ್ತಾ ಇದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?