ಅನುಷ್ಕಾ ಶೆಟ್ಟಿಗೆ ವಿಲನ್ ಆದ್ರಾ ಮಾಜಿ ವಿಶ್ವ ಸುಂದರಿ?

Published : Apr 22, 2019, 12:23 PM IST
ಅನುಷ್ಕಾ ಶೆಟ್ಟಿಗೆ ವಿಲನ್ ಆದ್ರಾ ಮಾಜಿ ವಿಶ್ವ ಸುಂದರಿ?

ಸಾರಾಂಶ

ಅನುಷ್ಕಾ ಶೆಟ್ಟಿ- ಐಶ್ವರ್ಯಾ ರೈ ಒಂದಾಗುತ್ತಿದ್ದಾರೆ | ಮಣಿರತ್ನಂ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ-ಐಶ್ವರ್ಯಾ ರೈ ಒಟ್ಟಿಗೆ ನಟಿಸುತ್ತಿದ್ದಾರೆ | ’ಪೊನ್ನಿಯಿನ್ ಸೆಲ್ವನ್’  ಚಿತ್ರದಲ್ಲಿ ಇಬ್ಬರನ್ನೂ ಒಟ್ಟಿಗೆ ನೋಡಬಹುದು 

ಬಾಹುಬಲಿ ಖ್ಯಾತಿಯ ಸೌತ್ ಇಂಡಸ್ಟ್ರಿ ಸುಂದರಿ ಅನುಷ್ಕಾ ಶೆಟ್ಟಿ ಭಾಗಮತಿ ಚಿತ್ರದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. 

ಶ್ರೀನಿಧಿ ಶೆಟ್ಟಿ ಕೈಗೆ ಪೆಟ್ಟು; ಕೆಜಿಎಫ್ 2 ನಲ್ಲಿ ನಟಿಸ್ತಾರಾ?

ಅನುಷ್ಕಾ ಶೆಟ್ಟಿ ಹಾಗೂ ಐಶ್ವರ್ಯ ರೈ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಇಬ್ಬರು ನಟಿಯರನ್ನು ಒಟ್ಟಾಗಿ ತೆರೆ ಮೇಲೆ ತರಲಿದ್ದಾರೆ ಖ್ಯಾತ ನಿರ್ದೇಶಕ ಮಣಿರತ್ನಂ. ಮಣಿರತ್ನಂ ನಿರ್ದೇಶನದ ’ಪೊನ್ನಿಯಿನ್ ಸೆಲ್ವನ್’ ಚಿತ್ರದಲ್ಲಿ ಇಬ್ಬರೂ ನಟಿಸಲಿದ್ದಾರೆ. 

ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಐಶ್ವರ್ಯಾ ರೈ ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅನುಷ್ಕಾ ಶೆಟ್ಟಿಗೆ ಐಶ್ವರ್ಯಾ ರೈ ವಿಲನ್ ಆಗಲಿದ್ದಾರೆ. 

ಫಾರಿನ್‌ನಲ್ಲಿ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋ ವೈರಲ್

ಅನುಷ್ಕಾ ಶೆಟ್ಟಿ ನಟಿಸಬೇಕಿದ್ದ ಪಾತ್ರಕ್ಕೆ ಮೊದಲು ನಯನತಾರಾ ಆಯ್ಕೆಯಾಗಿದ್ದರು. ಆದರೆ ಕಾರಣಾಂತರದಿಂದ ನಯನತಾರಾ ಚಿತ್ರದಿಂದ ಹೊರ ನಡೆದಿದ್ದಾರೆ. ಈಗ ನಯನತಾರಾ ಪಾತ್ರಕ್ಕೆ ಅನುಷ್ಕಾ ಎಂಟ್ರಿ ಕೊಟ್ಟಿದ್ದಾರೆ. 

ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ಚಿಯಾನ್ ವಿಕ್ರಮ್, ಕಾರ್ತಿಕ್, ಅಮಿತಾಬಚ್ಚನ್ ನಟಿಸಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?