
ವಿರಾಟ್ ಕೊಹ್ಲಿಯೊಂದಿಗೆ ನಟಿ ಅನುಷ್ಕಾ ಶರ್ಮಾ ಮತ್ತು ನಾಲ್ಕು ತಿಂಗಳ ಮಗಳು ವಮಿಕಾ ಹೊರಗಡೆ ಕಾಣಿಸಿಕೊಂಡಿದ್ದಾರೆ. ಜೂನ್ 2 ರಂದು ತಡರಾತ್ರಿ ಮುಂಬೈನಿಂದ ಇಂಗ್ಲೆಂಡ್ ತೆರಳಿದ್ದಾರೆ ಜೋಡಿ.
ನಾಲ್ಕು ತಿಂಗಳ ಕಾಲ ನಡೆಯುವ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಪ್ರವಾಸಕ್ಕಾಗಿ ಕ್ರಿಕೆಟಿಗರು ತಮ್ಮ ಸಂಗಾತಿ, ಕುಟುಂಬಗಳೊಂದಿಗೆ ಇರಲು ಯುಕೆ ಸರ್ಕಾರ ಒಪ್ಪಿಗೆ ನೀಡಿದ ನಂತರ ಕೊಹ್ಲಿ ಇಂಗ್ಲೆಂಡ್‌ಗೆ ತೆರಳಿದ್ದಾರೆ.
ಮಗಳು ವಮಿಕಾ ವಿಚಾರದಲ್ಲಿ ವಿರುಷ್ಕಾ ಮಹತ್ವದ ನಿರ್ಧಾರ..!.
ಇಡೀ ತಂಡವು ಅವರ ಸಂಗಾತಿಗಳು ಮತ್ತು ಮಕ್ಕಳು ತಮ್ಮ ವೈಯಕ್ತಿಕ ಕಾರುಗಳಲ್ಲಿ ಬರುವ ಬದಲು ವಿಮಾನ ನಿಲ್ದಾಣದಲ್ಲಿ ಬಸ್‌ನಿಂದ ಕೆಳಗಿಳಿಯುತ್ತಿರುವುದು ಕಂಡುಬಂದರೆ, ಅಭಿಮಾನಿಗಳ ಗಮನ ಸೆಳೆದದ್ದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಪುಟ್ಟ ಮಗಳು ವಮಿಕಾ. ತಿಳಿ ಬೂದು ಬಣ್ಣದ ಬೇಬಿ ಕ್ಯಾರಿಯರ್‌ನಲ್ಲಿ ಅಮ್ಮನೆದೆಯಲ್ಲಿ ಚೆನ್ನಾಗಿ ನಿದ್ದೆ ಮಾಡುತ್ತಿದ್ದರು ವಮಿಕಾ. ವಮಿಕಾ ಬೇಬಿ ಗುಲಾಬಿ ಬಣ್ಣದ ಬಟ್ಟೆ ಧರಿಸಿರುವುದು ಕಂಡುಬಂತು.
ಇದು ವಮಿಕಾ ಹೆತ್ತವರೊಂದಿಗೆ ಸಾಗರ ದಾಟಿ ಹೋಗುತ್ತಿರುವ ಮೊದಲ ಪ್ರವಾಸ. ವಿರಾಟ್‌ಗೆ ಇದು ಮಗಳ ಜೊತೆ ಹೋಗೋ ಮೊದಲ ಟೂರ್ ಕೂಡಾ ಹೌದು. ದಿನಗಳ ಹಿಂದೆ, ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ‘ಆಸ್ಕ್ ಮಿ’ ಸೆಷನ್ ನಡೆಸಿದಾಗ, ಮಗಳು ವಮಿಕಾ ಅವರ ಫೊಟೋ ಹಂಚಿಕೊಳ್ಳಲು ಅಭಿಮಾನಿಯೊಬ್ಬರು ಕೇಳಿಕೊಂಡರು, ಅದನ್ನು ಅವರು ತಕ್ಷಣ ತಿರಸ್ಕರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.