ಬಾಲಿವುಡ್‌ ನಟಿ ಕಂಗನಾಗೆ ಕೊರೋನಾ ಸೋಂಕು, ಸ್ವಯಂ ಕ್ವಾರಂಟೈನ್ ಆದ ನಟಿ!

Published : May 08, 2021, 12:54 PM ISTUpdated : May 08, 2021, 01:00 PM IST
ಬಾಲಿವುಡ್‌ ನಟಿ ಕಂಗನಾಗೆ ಕೊರೋನಾ ಸೋಂಕು, ಸ್ವಯಂ ಕ್ವಾರಂಟೈನ್ ಆದ ನಟಿ!

ಸಾರಾಂಶ

ಬಾಲಿವುಡ್‌ ನಟಿ ಕಂಗನಾಗೆ ಕೊರೋನಾ| ಹೋಂ ಕ್ವಾರಂಟೈನ್ ಆದ ನಟಿ| ನಾನು ವೈರಸ್ಸನ್ನು ನಾಶ ಮಾಡುತ್ತೇನೆ ಎಂದು ಗೊತ್ತು

ಮುಂಬೈ(ಮೇ.08): ನಟಿ ಕಂಗನಾ ರಣಾವತ್‌ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ. ಮುಂಬೈನ ತಮ್ಮ ಮನೆಯಲ್ಲೇ ಕ್ವಾರಂಟೈನ್‌ ಆಗಿ ಚಿಕಿತ್ಸೆ ಮುಂದುವರಿಸಿದ್ದಾರೆ. ತಾವು ಶೀಘ್ರ ಗುಣಮುಖರಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ನಟಿ ಕಂಗನಾ ಕಳೆದ ಕೆಲ ದಿನಗಳಿಂದ ನನ್ನ ಕಣ್ಣುಗಳಲ್ಲಿ ಸ್ವಲ್ಪ ಉರಿ ಕಾಣಿಸಿಕೊಂಡಿತ್ತು. ಸ್ವಲ್ಪ ಸುಸ್ತು ಹಾಗೂ ನಿಶ್ಯಕ್ತಿ ಉಂಟಾಗಿದೆ, ದುರ್ಬಲವಾಗಿದ್ದೇನೆ. ಹಿಮಾಚಲಕ್ಕೆ ಹೋಗಬೇಕೆಂದು ಬಯಸಿದ್ದೆ. ಅದಕ್ಕೂ ಮೊದಲು ಕೊರೋನಾ ಟೆಸ್ಟ್‌ ಮಾಡಿಸಿಕೊಂಡೆ. ಇಂದು ರಿಪೋರ್ಟ್‌ನಲ್ಲಿ ನನಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ನಾನೀನ ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನು ವೈರಸ್ಸನ್ನು ನಾಶ ಮಾಡುತ್ತೇನೆ ಎಂದು ಗೊತ್ತು. ಜನರೇ ಯಾವುದೇ ಶಕ್ತಿ ನಿಮ್ಮ ಮೇಲೆ ಸವಾರಿ ಮಾಡಲು ಅವಕಾಶ ಕೊಡಬೇಡಿ. ನೀವು ಹೆದರಿದರೆ ಅದು ನಿಮ್ಮನ್ನು ಹೆಚ್ಚು ಹೆದರಿಸುತ್ತದೆ. ಬನ್ನಿ ಈ ಕೋವಿಡ್ -19 ಅನ್ನು ನಾಶಪಡಿಸೋಣ. ಇದು ಅಲ್ಪಕಾಲದ ಜ್ವರ. ಆದರೆ ಹೆಚ್ಚು ಒತ್ತಡ ಹಾಕುತ್ತಿದೆ. ಜನರನ್ನು ಮಾನಸಿಕವಾಗಿ ಆತಂಕಕ್ಕೆ ತಳ್ಳಿದೆ. ಹರ ಹರ ಮಹಾದೇವ್‌ ಎಂದು ಬರೆದುಕೊಂಡಿದ್ದಾರೆ.  

ಮೈಕ್ರೋ-ಬ್ಲಾಗಿಂಗ್ ಸೈಟ್‌ ಟ್ವಿಟರ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ  ಟ್ವೀಟ್‌ ಪೋಸ್ಟ್ ಮಾಡಿದ ಕಾರಣ  ಕಂಗನಾ ಅವರ ಟ್ವಿಟರ್ ಹ್ಯಾಂಡಲ್ ಶಾಶ್ವತವಾಗಿ  ಸ್ಥಗಿತಗೊಳಿಸಲಾಗಿದೆ. ಕಂಗನಾ ಸರಣಿ ಟ್ವೀಟ್‌ಗಳಲ್ಲಿ ಪ.ಬಂಗಾಳದ ಸಿಎಂ  ಮಮತಾ ಬ್ಯಾನರ್ಜಿ ಅವರ ಕುರಿತು  ಆಕ್ಷೇಪಾರ್ಹ ಬರಹ ಪಡೆದಿದ್ದರು.

ಬಾಲಿವುಡ್‌ ನಟ/ ನಟಿಯರಿಗೆ ಕೊರೋನಾ

ಪ್ರಸ್ತುತ ದೇಶದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಜೋರಾಗಿದೆ. ಇದು ಸಿನಿ ಲೋಕದ ಅಕ್ಷಯ್ ಕುಮಾರ್, ಕಾರ್ತಿಕ್ ಆರ್ಯನ್, ಭೂಮಿ ಪೆಡ್ನೇಕರ್, ಕತ್ರಿನಾ ಕೈಫ್, ಸೋನು ಸೂದ್ ಮತ್ತು ಅರ್ಜುನ್ ರಾಂಪಾಲ್ ಹೀಗೆ ಅನೇಕ ಪ್ರಸಿದ್ಧ ವ್ಯಕ್ತಿಗಳಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಆದ್ರೆ ಸಧ್ಯ ಅವರೆಲ್ಲ ಕೊರೋನಾದಿಂದ ಚೇತರಿಸಿಕೊಂಡಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!