
ಮುಂಬೈ(ಸೆ. 05) ಕಾಮಿಡಿಯನ್ ಜಾಕೀರ್ ಖಾನ್ ಇಸ್ಟಾಗ್ರ್ಯಾಮ್ ಪೋಸ್ಟ್ ನ್ನು ರಿ ಪೋಸ್ಟ್ ಮಾಡಿರುವ ನಟಿ ಅನುಷ್ಕಾ ಶರ್ಮಾ ಒಂದಷ್ಟು ವಿಚಾರಗಳನ್ನು ಬರೆದಿದ್ದಾರೆ. ಸೆಲೆಬ್ರಿಟಿಯೊಬ್ಬರ ಸಾವು ಯಾವ ರೀತಿ ಕಾಮಿಡಿ ಶೋ ಆಗಿದೆ ಎಂದು ಹೇಳಿದ್ದಾರೆ. ಮಾಧ್ಯಮಗಳು ಸೆಲೆಬ್ರಿಟಿ ಸಿದ್ಧಾರ್ಥ್ ಶುಕ್ಲಾ ಸಾವಿನ ನಂತರ ನಡೆದುಕೊಂಡ ರೀತಿಯನ್ನು ಉಲ್ಲೇಖ ಮಾಡಿದ್ದಾರೆ.
ಗಲಭೆಯೊಂದರಲ್ಲಿ ಸುಡುತ್ತಿರುವ ಮನೆಯಿಂದ ವಸ್ತುಗಳನ್ನು ಕಳ್ಳತನ ಮಾಡಿದಂತೆ ಪರಿಸ್ಥಿತಿ ಆಗಿದೆ ಎಂಬ ಅರ್ಥ ಬರುವ ಹಿಂದಿಯ ಕವನದ ಸಾಲುಗಳನ್ನು ಬರೆದುಕೊಂಡಿದ್ದಾರೆ. ನಾವೆಲ್ಲರೂ ಅದೇ ರೀತಿ ನಡೆದುಕೊಂಡಿದ್ದೇವೆ. ಹತ್ತು ಪೋಟೋಗಳು, ಐದು ಸುದ್ದಿಗಳು, ಮೂರು ವಿಡಿಯೋಗಳು, ಎರಡು ಕರೆಗಳನ್ನು ಇಟ್ಟುಕೊಂಡು ಹೇಳಿದ್ದನ್ನೇ ಹೇಳುತ್ತಿದ್ದಾರೆ ಎಂಬ ಅರ್ಥದಲ್ಲಿ ಉಲ್ಲೇಖ ಮಾಡಿದ್ದಾರೆ.
ಪಾಕ್ ಪ್ರಧಾನಿಗೆ ಸರಿಯಾದ ಉತ್ತರ ನೀಡಿದ್ದ ಶುಕ್ಲಾ
ಸಿದ್ಧಾರ್ಥ ಶುಕ್ಲಾ ಉಲ್ಲೇಖಿಸಿ ಬರೆದಿರುವ ಪೋಸ್ಟ್ ನಲ್ಲಿ ಇದೇ ಕಾರಣಕ್ಕೆ ನಿಮ್ಮ ಸಾವು ಸುದ್ದಿಯಾದಕ್ಕಿಂತ ನಿಮ್ಮ ಅಳುವ ಅಮ್ಮನ ಚಿತ್ರವನ್ನು ತೋರಿಸಲಾಯಿತು. ಅವರ ನೋವನ್ನು ಮೇಲಿಂದ ಮೇಲೆ ಹೈಲೈಟ್ ಮಾಡಲಾಯಿತು. ಶಕ್ತಿ ಕಳೆದುಕೊಂಡಿರುವ ನಿಮ್ಮ ಸಹೋದರಿ, ಖಿನ್ನತೆಯಲ್ಲಿರುವ ನಿಮ್ಮ ಸಹೋದರ ಇವರನ್ನೇ ಹೈಲೈಟ್ ಮಾಡಲಾಯಿತು. ಏನೇ ಆಗಲಿ ನೀವು ನಿಮ್ಮಂತೆ ಬದುಕಿದ್ದೀರಿ ಮುಂದಿನ ಕಾಲವೂ ನೀವಾಗಿಯೇ ಇರುತ್ತೀರಿ ... ಎಂದು ಸಾವು ಕಂಡಿರುವ ಸಿದ್ಧಾರ್ಥ್ ಉಲ್ಲೇಖಿಸಿಯೇ ಹೇಳಿದ್ದಾರೆ!
ಸಿದ್ಧಾರ್ಥ್ ಸಾವಿಗೆ ಕಂಬನಿ ಮಿಡಿದಿರುವ ಅನುಷ್ಕಾ ನಿಮ್ಮ ಕುಟುಂಬದ ಜತೆ ನಾವಿದ್ದೇವೆ ಎಂದು ಹೇಳಿದ್ದಾರೆ. ಸಿದ್ಧಾರ್ಥ ಅಂತ್ಯ ಸಂಸ್ಕಾರವನ್ನು ಮಾಧ್ಯಮಗಳು ಪ್ರಸಾರ ಮಾಡಿದ ರೀತಿಯ ಬಗ್ಗೆಯೇ ಎಲ್ಲರೂ ಮಾತನಾಡಿದ್ದಾರೆ. ವಿಶಾಲ್ ದದ್ಲಾನಿ ಮತ್ತು ಗೌಹಾರ್ ಖಾನ್ ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.