ನನ್ನ ಫಸ್ಟ್ ಲವ್‌ಗೆ  22 ತುಂಬಿತು..  ಸುಷ್ಮಿತಾ ಸೇನ್ ವಿಶೇಷ ಶುಭಾಶಯ!

Published : Sep 04, 2021, 06:18 PM IST
ನನ್ನ ಫಸ್ಟ್ ಲವ್‌ಗೆ  22 ತುಂಬಿತು..  ಸುಷ್ಮಿತಾ ಸೇನ್ ವಿಶೇಷ ಶುಭಾಶಯ!

ಸಾರಾಂಶ

* ಹಿರಿಯ ಪುತ್ರಿಗೆ ಜನ್ಮದಿನದ ಶುಭಾಶಯ ಕೋರಿದ ಸುಷ್ಮಿತಾ ಸೇನ್ * ನೀನು ನನ್ನ ಮಡಿಲೆ ಸೇರಿ ಎರಡು ದಶಕ ಕಳೆದಿದ್ದು ಗೊತ್ತೇ ಆಗಲಿಲ್ಲ * ಮಗಳು ರಿನೇ ಸೇನ್ ಗೆ ಸುಷ್ಮಿತಾ ಶುಭಾಶಯ *  2000  ನೇ ಇಸವಿಯಲ್ಲಿ ದತ್ತು ತೆಗೆದುಕೊಂಡಿದ್ದರು

ಮುಂಬೈ(ಸೆ. 04)  ಬಾಲಿವುಡ್ ನಟಿ ಸುಷ್ಮಿತಾ ಸೇನ್ ತಮ್ಮ ಹಿರಿಯ ಮಗಳು ರಿನೇ ಸೇನ್ ಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ. ಇದರಲ್ಲಿ ಅಂಥ ವಿಶೇಷ ಏನಿದೆ ಅಂದ್ರಾ?  
ಇಸ್ಟಾಗ್ರ್ಯಾಮ್ ಮೂಲಕ ಮಗಳಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.  ನನ್ನ ಮೊದಲನೇ ಪುತ್ರಿಗೆ ಹ್ಯಾಪಿ ಬರ್ತಡೆ ಎಂದು ತಿಳಿಸಿದ್ದಾರೆ.

ಎರಡು ದಶಕಗಳು ಕಳೆದಿದ್ದೆ ಗೊತ್ತಾಗಿಲ್ಲ. ನಿನ್ನ ಅಮ್ಮನಾಗಿ ಇಪ್ಪತ್ತು ವರ್ಷಗಳು ಕಳೆದಿವೆ. ಹಾರೈಕೆಗಳು ಸದಾ ನಿನ್ನೊಂದಿಗೆ ಇರುತ್ತದೆ ಎಂದು ಸುಷ್ಮಿತಾ ಬರೆದುಕೊಂಡಿದ್ದಾರೆ. ಮಗಳ ಎರಡು ಪೋಟೋ ಶೇರ್ ಮಾಡಿಕೊಂಡಿದ್ದಾರೆ.

ಥೈಲವಿ ಚಿತ್ರ ಬಿಡುಗಡೆಗೂ ಮುನ್ನ ಜಯಾ ಸಮಾಧಿಗೆ ಭೇಟಿ ಕೊಟ್ಟ ಕಂಗನಾ ರಣಾವತ್

ಸುಷ್ಮಿತಾ ಸೇನ್  ರಿನೇ ಸೇನ್ ಮತ್ತು ಅಲಿಷಾ ಸೇನ್ ಇನಬ್ಬರು ಹೆಣ್ಣುಮಕ್ಕಳ ತಾಯಿ. ರಿನೇ ಅವರನ್ನು 2000  ನೇ ಇಸವಿಯಲ್ಲಿ ದತ್ತು ತೆಗೆದುಕೊಂಡಿದ್ದರು. ಅಲಿಷಾ ಅವರನ್ನು 2010 ರಲ್ಲಿ ದತ್ತು ಪಡೆದುಕೊಂಡರು. ಡಿಸ್ನೇ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾದ ಕಿರುಚಿತ್ರ ಸುಟ್ಟಾಬಾಜಿಯಲ್ಲಿ ರಿನೇ ಪಾತ್ರ ನಿರ್ವಹಿಸಿದ್ದು ಚಿತ್ರರಂಗಕ್ಕೆ ಈ ವರ್ಷದ ಆರಂಭದಲ್ಲಿ ಪದಾರ್ಪಣೆ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸುಷ್ಮಿತಾ, ಮಗಳು ರಿನೇಗೆ ಹದಿನಾರು ವರ್ಷ ತುಂಬಿದಾಗ ಆಕೆ ತನ್ನ ಹೆತ್ತವರ ಜತೆ ಹೋಗುತ್ತೇನೆ ಎಂದು ಹೇಳಿದ್ದ ಮಾತು ಇತ್ತು. ಈ ಬಗ್ಗೆ ನ್ಯಾಯಾಲಯ ಏನು ಹೇಳುತ್ತದೆ..ಆಕೆಯ ಹೆತ್ತವರ ಹೆಸರು ಬಹಿರಂಗ ಮಾಡಬಹುದೆ ಎಂಬ ವಿಚಾರವೂ ಚರ್ಚೆಯಾಗಿತ್ತು. ಆಕೆಗೆ ಹದಿನೆಂಟು ತುಂಬಿದ ಮೇಲೆ ಮಾಹಿತಿ ನೀಡಬೇಕು ಎನ್ನುವ ಮಾತು ಬಂದಿತ್ತು. ನಿನ್ನನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗಲು ಸಿದ್ಧ ಎಂದು ತಿಳಿಸಿದ್ದೆ ಎಂಬುದನ್ನು ಸೇನ್ ಹೇಳಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!