Aryan Drugs Case: ಸೀಕ್ರೆಟ್ ಪೋಸ್ಟ್ ಶೇರ್ ಮಾಡಿದ ನಟಿ ರಿಯಾ..!

By Suvarna News  |  First Published Oct 14, 2021, 6:13 PM IST

ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಜೈಲು ಸೇರಿದ್ದು ಈ ಮಧ್ಯೆ ನಟಿ ರಿಯಾ ಚಕ್ರವರ್ತಿ ಸೀಕ್ರೆಟ್ ಪೋಸ್ಟ್ ಶೇರ್ ಮಾಡಿದ್ದಾರೆ. ಸುಶಾಂತ್ ಸಾವಿನ ನಂತರ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ರಿಯಾ ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ಈಗ ಅವರ ಪೋಸ್ಟ್ ಸಾಕಷ್ಟು ಕುತೂಹಲ ಮೂಡಿಸಿದೆ.


ನವದೆಹಲಿ (ಅ.14): ಮುಂಬೈ ಕರಾವಳಿ ತೀರದಲ್ಲಿ ಐಷರಾಮಿ ಹಡಗಿನಲ್ಲಿ ರೇವ್ ಪಾರ್ಟಿ (Rave Party) ಮಾಡಿ ಸಿಕ್ಕಿ ಬಿದ್ದಿರುವ ಬಾಲಿವುಡ್  ಸೂಪರ್ ಸ್ಟಾರ್ ಶಾರೂಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ (Aryan Khan) ಜಾಮೀನು (Bail) ವಿಚಾರಣೆ ಇಂದು ಮುಂಬೈನ ವಿಶೇಷ ಸೆಶನ್ಸ್  ಕೋರ್ಟ್‌ನಲ್ಲಿ ಮುಂದುವರೆಯಲಿದೆ.  ಕ್ರೂಸ್ ಪಾರ್ಟಿ ಡ್ರಗ್ (Drugs) ಪ್ರಕರಣದ ಇತರೆ ಆರೋಪಿಗಳೊಂದಿಗೆ ಸ್ಟಾರ್ ಕಿಡ್‌ನ  ಭವಿಷ್ಯ ಇಂದು ಹೊರ ಬೀಳಲಿದೆ.

ಈ ನಡುವೆ ಬಾಲಿವುಡ್ ನಟಿ ರಿಯಾ ಚಕ್ರವರ್ತಿ (Rhea Chakraborty) ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ರಹಸ್ಯ ಪೋಸ್ಟ್‌ ಹಂಚಿಕೊಂಡಿದ್ದಾರೆ. ಒಂದು ಕೋಟ್ ಶೇರ್ ಮಾಡಿದ ನಟಿ ಇದರಲ್ಲಿ ಯಾರ ಹೆಸರನ್ನೂ ಮೆನ್ಶನ್ ಮಾಡಿಲ್ಲ, ಹಾಗೆಯೇ ಯಾರಿಗೂ ತಮ್ಮ ಪೋಸ್ಟ್ ಟ್ಯಾಗ್ ಮಾಡಿಲ್ಲ. ಗ್ರೋ ಥ್ರೂ ವಾಟ್ ಯು ಗೋ ಥ್ರೂ (ನಿಮ್ಮ ಜೊತೆ ಏನೇನಾಗುತ್ತದೆಯೇ ಅದರಿಂದ ಬೆಳೆಯಿರಿ) ಎನ್ನುವ ಅರ್ಥಪೂರ್ಣ ಕೋಟ್ ಶೇರ್ ಮಾಡಿದ್ದಾರೆ.

Tap to resize

Latest Videos

ARYAN ARREST: ಜೈಲಿನ ಆಹಾರ ಬೇಡ: ಬಿಸ್ಕತ್ ತಿಂದು ಬದುಕ್ತಿದ್ದಾರಾ ಆರ್ಯನ್ ?

ಕಳೆದ ವರ್ಷ ಬಾಯ್‌ಫ್ರೆಂಡ್, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajaput) ಆತ್ಮಹತ್ಯೆ ಹಾಗೂ ನಟನ ಸುತ್ತ ಸುದ್ದಿಯಾಗಿದ್ದ ಡ್ರಗ್ಸ್ (Drugs) ಪ್ರಕರಣದಲ್ಲಿ ರಿಯಾ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯನ್ನು (Showik Chakraborty) ಎನ್‌ಸಿಬಿ ಬಂಧಿಸಿತ್ತು.  ಅಲ್ಲದೇ ನಟಿ ರಿಯಾ ಒಂದು ತಿಂಗಳಿಗಿಂತ ಹೆಚ್ಚು ಕಾಲ ಮುಂಬೈನ ಬೈಕುಲ್ಲಾ ಜೈಲಿನಲ್ಲಿ (Byculla Jail) ಕಳೆದಿದ್ದರು.

ಅಂದು ರಿಯಾ ಚಕ್ರವರ್ತಿಗೆ ಲಾಯರ್ ಆಗಿದ್ದ ಸತೀಶ್ ಮಾನ್‌ಶಿಂಧೆ ಅವರೇ ಈಗ ಆರ್ಯನ್ ಖಾನ್ ಕೇಸ್ ಕೂಡಾ ನೋಡಿಕೊಳ್ಳುತ್ತಿದ್ದಾರೆ ಎಂಬುದು ಗಮನಾರ್ಹ. ಪ್ರಸ್ತುತ  ರಿಯಾ ಅವರನ್ನು ಸಂಕಷ್ಟದಿಂದ ಪಾರು ಮಾಡಿದ್ದ ವಕೀಲ ಸತೀಶ್ ಮಾನೆಶಿಂಧೆ (Satish Maneshinde) ಅವರೇ ರೇವ್ ಪಾರ್ಟಿಯ ಡ್ರಗ್ ಪ್ರಕರಣದಲ್ಲಿ ಸಿಲುಕಿ ಕೊಂಡಿರುವ ಆರ್ಯನ್ ಅವರ ಪರ ವಕಾಲತ್ತು ವಹಿಸಿದ್ದಾರೆ.

Drugs Case: ಮಗನ ಚಿಂತೆಯಲ್ಲಿ ಶಾರುಖ್‌ಗೆ ಡಿಪ್ರೆಶನ್‌: ಊಟ ನಿದ್ದೆ ಬಿಟ್ಟ ನಟ!

ಇನ್ನು ರಿಯಾ ಚಕ್ರವರ್ತಿ ಕೊನೆಯದಾಗಿ ರೂಮಿ ಜಾಫ್ರಿ (Rumy Jaffery) ನಿರ್ದೇಶನದ 'ಚೆಹ್ರೆ' (Chehre) ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಮತ್ತು ಇಮ್ರಾನ್ ಹಶ್ಮಿ (Emraan Hashmi) ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ವ್ಯಾಪಾರಿ ಪಾತ್ರದಲ್ಲಿ ಇಮ್ರಾನ್ ಹಶ್ಮಿ ಅಭಿನಯಿಸಿದ್ದಾರೆ.

ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ (ASG) ಅನಿಲ್ ಸಿ ಸಿಂಗ್ ಅವರು ಆರ್ಯನ್ ಜಾಮೀನು (bail) ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದೆ. ಅಕ್ಟೋಬರ್ 2, 2021 ರಂದು ಸಂಜೆ ಮುಂಬೈಯಿಂದ (Mumbai) ಗೋವಾಕ್ಕೆ (Goa) ಹೋಗುತ್ತಿದ್ದ ಕ್ರೂಸ್ (cruise ship) ಮೇಲೆ ಎನ್‌ಸಿಬಿ (NCB) ದಾಳಿ ಮಾಡಿ ಆರ್ಯನ್ ಖಾನ್ ಜೊತೆಗೆ ಇತರೆ ಏಳು ಮಂದಿಯನ್ನು ಬಂಧಿಸಿದೆ.

NCB ಆಫೀಸರ್ ಮೇಲೆಯೇ ಪತ್ತೆದಾರಿಕೆ: ಹಿಂಬಾಲಿಸ್ತಿರೋದ್ಯಾರು?

ಬಂಧಿತರಲ್ಲಿ ಉದ್ಯಮಿ ಪುತ್ರ ಅರ್ಬಾಜ್ ಸೇಠ್ ಮರ್ಚೆಂಟ್, ಮುನ್ಮುನ್ ಧಮೆಚಾ, ವಿಕ್ರಾಂತ್ ಚೋಕರ್, ಇಸ್ಮೀತ್ ಸಿಂಗ್, ನೂಪುರ್ ಸಾರಿಕಾ, ಗೋಮಿತ್ ಚೋಪ್ರಾ ಮತ್ತು ಮೋಹಕ್ ಜಸ್ವಾಲ್ ಅವರು ಸೇರಿದ್ದಾರೆ. ಬಂಧಿತರಿಂದ 13 ಗ್ರಾಂ ಕೊಕೇನ್ (Cocaine), 5 ಗ್ರಾಂ ಎಂಡಿ (MD), 21 ಗ್ರಾಂ ಚರಸ್ (Charas) ಮತ್ತು 22 ಎಂಡಿಎಂಎ (MDMA) ಮಾತ್ರೆಗಳು ಸೇರಿದಂತೆ 1.33 ಲಕ್ಷ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

click me!