ಅಣ್ಣನ ಎದುರೇ ಶ್ರೀದೇವಿ ಬಗ್ಗೆ ಅಷ್ಟೆಲ್ಲಾ ಹೇಳಿದ್ರು ಅನಿಲ್ ಕಪೂರ್; ಪ್ರತಿಬಾರಿ ಸಿಕ್ಕಾಗ ಅತ್ತಿಗೆ ಕಾಲಿಗೆ ನಮಸ್ಕಾರ ಮಾಡಿದ್ದು ಏಕೆ?

Published : Feb 11, 2026, 06:42 PM IST
anil kapoor sridevi

ಸಾರಾಂಶ

ಶ್ರೀದೇವಿ ನಿಧನದ ಬಳಿಕ ಬಾಲಿವುಡ್ ಲೋಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆಗಾಗಿ ಒಂದು ದೊಡ್ಡದಾದ ಸಮಾರಂಭ ಏರ್ಪಡಿಸಿತ್ತು. ಅದರಲ್ಲಿ, ಶ್ರೀದೇವಿ ಮೈದುನ, ಬೋನಿ ಕಪೂರ್ ತಮ್ಮ ಅನಿಲ್ ಕಪೂರ್ ಅವರು ಅತ್ತಿಗೆ ಶ್ರೀದೇವಿಗೆ ಬಗ್ಗೆ ಬಹಳಷ್ಟು ಮಾತು ಹೇಳಿದ್ದಾರೆ. ಅದೊಂಥರ ಶಾಕಿಂಗ್ ಆಗಿದೆ. ನೋಡಿ ಈ ಸ್ಟೋರಿ..

ಶ್ರೀದೇವಿ ಬಗ್ಗೆ ಅನಿಲ್ ಕಪೂರ್ ಮಾತು!

ದಕ್ಷಿಣ ಭಾರತದಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಮರೆದು ಬಳಿಕ ಬಾಲಿವುಡ್ ಸಿನಿರಂಗವನ್ನೂ ಆಳಿದ್ದ ನಟಿ ಶ್ರೀದೇವಿ (Sridevi) ಯಾರಿಗೆ ಗೊತ್ತಿಲ್ಲ? ಭಾರತವನ್ನೂ ಮೀರಿದ ಜನಪ್ರಿಯತೆ ಅವರದು. ಅತಿಲೋಕ ಸಂದರಿ ಎಂದೇ ಖ್ಯಾತಿ ಗಳಿಸಿದ್ದ ನಟಿ ಶ್ರೀದೇವಿ ಅವರು 2018ರಲ್ಲಿ ತಮ್ಮ 54ನೇ ವಯಸ್ಸಿನಲ್ಲೇ ನಿಧನರಾದರು. ಶ್ರೀದೇವಿ ನಿಧನದ ಬಳಿಕ ಬಾಲಿವುಡ್ ಲೋಕ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆಗಾಗಿ ಒಂದು ದೊಡ್ಡದಾದ ಸಮಾರಂಭ ಏರ್ಪಡಿಸಿತ್ತು. ಅದರಲ್ಲಿ, ಶ್ರೀದೇವಿ ಮೈದುನ, ಬೋನಿ ಕಪೂರ್ ತಮ್ಮ ಅನಿಲ್ ಕಪೂರ್ ಅವರು ಅತ್ತಿಗೆ ಶ್ರೀದೇವಿಗೆ ಬಗ್ಗೆ ಬಹಳಷ್ಟು ಮಾತು ಹೇಳಿದ್ದಾರೆ. ಅದೊಂಥರ ಶಾಕಿಂಗ್ ಆಗಿದೆ. ನೋಡಿ ಈ ಸ್ಟೋರಿ..

'ನನ್ನ ಅತ್ತಿಗೆ ಈ ಜನರೇಶನ್ ಕಂಡಿರುವ ಅತ್ಯಂತ ದೊಡ್ಡ ಸ್ಟಾರ್. ಅವರಿಗಿಂತ ದೊಡ್ಡ ಲೇಡಿ ಸೂಪರ್ ಸ್ಟಾರ್‌ ಈ ಜನರೇಶನ್‌ನಲ್ಲಿ ಯಾರೂ ಇಲ್ಲ. ಅವರು ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ನಂಬರ್ ಒನ್ ಆಗಿದ್ದರು, ತೆಲುಗು, ಕನ್ನಡ ಹಾಗೂ ಮಲಯಾಳಂ ಸಿನಿಮಾರಂಗದಲ್ಲಿ ನಂಬರ್ ಒನ್ ಅಗಿದ್ದರು. ಈ ಮೂಲಕ ಅವರು ಭಾರತದ 'ನಂಬರ್ ಒನ್' ಸೂಪರ್ ಸ್ಟಾರ್ ಆಗಿದ್ದರು.

ಶ್ರೀದೇವಿ ಕಾಲಿಗೆ ಬೀಳುತ್ತಿದ್ದ ಅನಿಲ್ ಕಪೂರ್

ನಾನು ಯವತ್ತೇ ಅವರನ್ನು ಭೇಟಿ ಆದಾಗೂ ಅವರ ಪಾದಕ್ಕೆ ನಮಸ್ಕರಿಸುತ್ತಿದ್ದೆ. ಅದಕ್ಕೆ ಶ್ರೀದೇವಿಜಿ ಅವರು 'ಯಾಕೆ ಅನಿಲ್‌ಜೀ, ಹೀಗೆ ಮಾಡ್ತೀರಿ ನೀವು' ಎಂದು ಕೇಳ್ತಾ ಇದ್ರು. ಅದಕ್ಕೆ ನಾನು ಏನೂ ಉತ್ತರ ಹೇಳುತ್ತಿರಲಿಲ್ಲವಾದರೂ, 'ನಾನು ಕೆಳಕ್ಕೆ ಬಾಗಿ ನಮಸ್ಕರಿಸಿದಾಗ ಅವರಲ್ಲಿರುವ ಟ್ಯಾಲೆಂಟ್‌ನ ಸ್ವಲ್ಪ ಭಾಗವಾದರೂ ನನಗೆ ಬರುತ್ತೆ' ಅಂತ ಅಂದ್ಕೊತಿದ್ದೆ.

ನಿಮ್ಮ ಅಗಲುವಿಕೆಯಿಂದ ಜಗತ್ತು ನಿಮ್ಮನ್ನು ಮಿಸ್ ಮಾಡಿಕೊಂಡಿದೆ, ಈ ದೇಶ ನಿಮ್ಮನ್ನು ಮಿಸ್ ಮಾಡಿಕೊಂಡಿದೆ, ನಾನು ಒಬ್ಬ ಕುಟುಂಬದ ಸದಸ್ಯನಾಗಿ ನಿಮ್ಮನ್ನು ಮಿಸ್ ಮಾಡಿಕೊಂಡಿದ್ದೇನೆ' ಎಂದಿದ್ದಾರೆ ಅನಿಲ್ ಕಪೂರ್. ಜೊತೆಗೆ, 'ಶ್ರೀದೇವಿ ಅತ್ತಿಗೆಯನ್ನು ನಿಜವಾಗಿಯೂ ತುಂಬಾ ಪ್ರೀತಿಸಿದ್ದ

ನಮ್ಮ ಅಣ್ಣ ಅವರನ್ನು ಈಗ ವೇದಿಕೆಗೆ ಕರೆಯುತ್ತಿದ್ದೇನೆ' ಎಂದು ಅವರಿಗೆ ಶ್ರದ್ಧಾಂಜಲಿ ಹೇಳುವ ಅಂದಿನ ಸಮಾರಂಭದಲ್ಲಿ, ಶ್ರೀದೇವಿಯ ಪತಿ ಬೋನಿ ಕಪೂರ್ ಅವರನ್ನು ವೇದಿಕೆಗೆ ಕರೆದಿದ್ದಾರೆ.

ಹಲವರು ಕಣ್ಣಾಲಿಗಳು ತುಂಬಿದ್ದವು

ಅನಿಲ್ ಕಪೂರ್ ಅವರು ತಮ್ಮ ಅತ್ತಿಗೆ ಬಗ್ಗೆ ಹೇಳಿದ್ದ ಹೊಗಳಿಕೆ ಮಾತುಗಳನ್ನು ಕೇಳಿ ಅಲ್ಲಿದ್ದ ಎಲ್ಲರ ಮನಸ್ಸು ಭಾರವಾಗಿ ಹೃದಯ ತುಂಬಿ ಬಂದಿದೆ. ಪ್ರತಿಯೊಬ್ಬರ ಮುಖ ದುಃಖವನ್ನು ಪ್ರತಿಬಿಂಬಿಸುತ್ತಿತ್ತು, ಹಲವರು ಕಣ್ಣಾಲಿಗಳು ತುಂಬಿದ್ದವು. ಸ್ವತಃ ಅನಿಲ್ ಕಪೂರ್ ಹಾಗೂ ಬೋನಿ ಕಪೂರ್ ಅವರಿಬ್ಬರೂ ಗದ್ಗದಿತರಾಗಿದ್ದು ಕಂಡುಬಂತು. ಒಟ್ಟಿನಲ್ಲಿ, ನಟಿ ಶ್ರೀದೇವಿ ಅವರ ಆಕಸ್ಮಿಕ ಸಾವು ಬೋನಿ ಕಪೂರ್ ಕುಟುಂಬ ಸೇರಿದಂತೆ ಇಡೀ ಭಾರತವನ್ನು ಮೀರಿ ಜಾಗತಿಕ ದುರ್ಘಟನೆ ಎಂಬಂತೆ ಮಾರ್ಪಟ್ಟಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Photos: ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ದಕ್ಷಿಣ ಭಾರತದ ನಟಿಯರು!
ತಿಹಾರ್ ಜೈಲು ಸೇರಿದ ರಾಜ್‌ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್‌ಗೆ ದೊಡ್ಡ ಸಹಾಯ ಮಾಡಿದ 6 ಮಂದಿ!