Oscars 2023ಗೆ ಅಧಿಕೃತ ಪ್ರವೇಶವಾಗದ RRR ಚಿತ್ರ: ಅಭಿಮಾನಿಗಳ ಆಕ್ರೋಶ

By BK Ashwin  |  First Published Sep 21, 2022, 4:12 PM IST

ಆಸ್ಕರ್ 2023 ಗೆ ಭಾರತದಿಂದ ಚೆಲ್ಲೋ  ಶೋ ಅಧಿಕೃತವಾಗಿ ನಾಮನಿರ್ದೇಶನಗೊಂಡಿದೆ. ಈ ಹಿನ್ನೆಲೆ RRR ಚಿತ್ರದ ಅಭಿಮಾನಿಗಳು ಆಕ್ರೋಶಗೊಂಡು ಟ್ವೀಟ್‌ ಮಾಡಿದ್ದಾರೆ.   


RRR ಚಿತ್ರ ಪ್ಯಾನ್‌ ಇಂಡಿಯಾ ಚಿತ್ರವಾಗಿ ದೇಶದೆಲ್ಲೆಡೆ ಅಪಾರ ಮೆಚ್ಚುಗೆ ಗಳಿಸಿತು. ಬ್ಲಾಕ್‌ಬಸ್ಟರ್‌ನಲ್ಲೂ ಚಿತ್ರ ಧೂಳೀಪಟ ಆಡಿದ್ದು, 1000 ಕೋಟಿ ರೂ. ಗೂ ಹೆಚ್ಚು ಹಣ ಕಲೆಕ್ಷನ್‌ ಮಾಡಿದೆ.  ಅಲ್ಲದೆ, ಐತಿಹಾಸಿಕ ಕತೆಯನ್ನೂ ಹೊಂದಿರುವುದರಿಂದ ಈ ಚಿತ್ರ ಆಸ್ಕರ್ 2023 ಗೆ ಅಧಿಕೃತ ಪ್ರವೇಶ ಪಡೆಯಬಹುದು ಎಂದು ಹಲವು ಅಭಿಮಾನಿಗಳು ಊಹೆ ಮಾಡಿದ್ದರು. ಆದರೆ, ಗುಜರಾತಿ ಚಲನಚಿತ್ರ 'ಚೆಲ್ಲೋ ಶೋ' (Chhello Show) ಅನ್ನು ಭಾರತದ ಅಧಿಕೃತ ಆಸ್ಕರ್ ಪ್ರವೇಶವಾಗಿ ನಾಮನಿರ್ದೇಶನ ಮಾಡಿದ ನಂತರ RRR ಅಭಿಮಾನಿಗಳು ತೀವ್ರ ನಿರಾಶೆಗೊಂಡಿದ್ದಾರೆ.SS ರಾಜಮೌಳಿ ನಿರ್ದೇಶನದ RRR ಮಾರ್ಚ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ಮತ್ತು ತಕ್ಷಣವೇ ಭಾರೀ ಹಿಟ್ ಆಯಿತು. RRR ವಿಮರ್ಶಕರಿಂದ ಸಿಕ್ಕಾಪಟ್ಟೆ ಪ್ರಶಂಸೆಯನ್ನು ಗಳಿಸಿತು, ಅವರು ಚಿತ್ರದ ತಾಂತ್ರಿಕ ಪಾಂಡಿತ್ಯ ಮತ್ತು ಕುತೂಹಲಕಾರಿ ಚಿತ್ರಕಥೆಯನ್ನು ಶ್ಲಾಘಿಸಿದರು. ಹಾಗೂ, ಭಾರತದ ಅಧಿಕೃತ ಆಸ್ಕರ್ 2023 ಪ್ರವೇಶವಾಗಿ ಇದನ್ನು ಆಯ್ಕೆ ಮಾಡಬೇಕೆಂದು ಹಲವರು ಒತ್ತಾಯಿಸಿದರು.

ಆದರೆ, ದೇಶದ ತೀರ್ಪುಗಾರರು ಚೆಲ್ಲೋ ಶೋ ಅನ್ನು ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆ ಮಾಡಿದರು. ಈ ಹಿನ್ನೆಲೆ ರಾಜಮೌಳಿ ಅಭಿಮಾನಿಗಳು ಈ ಬಗ್ಗೆ ನಿರಾಶೆಗೊಂಡಿದ್ದು, ಹಲವರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ. ಎಸ್. ಎಸ್ ರಾಜಮೌಳಿ ಅವರ ಪ್ರೀತಿಯ ಶ್ರಮವನ್ನು ಹೊಗಳಿದವರಿಗೆ ಈ ಸುದ್ದಿ ನಿರಾಸೆ ಮೂಡಿಸಿದೆ. 

India not putting RRR up for the Oscar is a shame

— Georgia Davis (@georgiadee35)

RRR is the only chance for India to compete in Oscars and our film federation has successfully ruined it. 💔

— Nikhil Molugu (@molugu_nikhil)

Tap to resize

Latest Videos

RRR ಗೆ ಆಸ್ಕರ್‌ಗೆ ಪ್ರವೇಶ ಪಡೆಯಲು ಇನ್ನೂ ಅರ್ಹತೆಯಿದೆಯೇ..?
RRR ಚಲನಚಿತ್ರದ U.S. ವಿತರಕರು ಈ ಆಕ್ಷನ್‌ ಡ್ರಾಮಾ ಚಿತ್ರಕ್ಕಾಗಿ ಪ್ರಶಸ್ತಿ ಪ್ರಚಾರವನ್ನು ನಡೆಸಲು ಆಯ್ಕೆ ಮಾಡಿದ್ದಾರೆ ಮತ್ತು 10,000 ಅಕಾಡೆಮಿ ಸದಸ್ಯರನ್ನು ಪ್ರತಿ ವಿಭಾಗದಲ್ಲೂ ಚಿತ್ರಕ್ಕೆ ಮತ ಹಾಕಲು ಪರಿಗಣಿಸುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು, ವೆರೈಟಿಯಲ್ಲಿನ ವರದಿಯ ಪ್ರಕಾರ, "RRR" ಅತ್ಯುತ್ತಮ ಚಿತ್ರ, ನಿರ್ದೇಶಕ (ಎಸ್‌.ಎಸ್‌. ರಾಜಮೌಳಿ), ಮೂಲ ಚಿತ್ರಕಥೆ (ರಾಜಮೌಳಿ ಮತ್ತು ವಿ. ವಿಜಯೇಂದ್ರ ಪ್ರಸಾದ್), ನಾಯಕ ನಟ (ಎನ್‌. ಟಿ. ರಾಮರಾವ್ ಜೂನಿಯರ್ ಮತ್ತು ರಾಮ್ ಚರಣ್ ಇಬ್ಬರಿಗೂ), ಪೋಷಕ ನಟನಾಗಿ (ಅಜಯ್ ದೇವಗನ್), ಪೋಷಕ ನಟಿ (ಆಲಿಯಾ ಭಟ್), ಮೂಲ ಹಾಡು ("ನಾಟು ನಾಟು"), ಮೂಲ ಸಂಗೀತ (ಎಂ.ಎಂ. ಕೀರವಾಣಿ), ಛಾಯಾಗ್ರಹಣ, ನಿರ್ಮಾಣ ವಿನ್ಯಾಸ, ಚಲನಚಿತ್ರ ಸಂಕಲನ, ವಸ್ತ್ರ ವಿನ್ಯಾಸ, ಮೇಕಪ್ ಮತ್ತು ಕೇಶವಿನ್ಯಾಸ, ಧ್ವನಿ ಮತ್ತು ದೃಶ್ಯ ಪರಿಣಾಮಗಳು ವಿಭಾಗಗಳಿಗೆ ಸಲ್ಲಿಕೆ ಮಾಡಲಾಗುವುದು ಎಂದೂ ಹೇಳಲಾಗಿದೆ. 

Shame on FFI for choosing an inspired film and not an original film like . How the fuck did they really think that an inspired film will bag the academy award! This is insane. People are gonna laugh at us. Well done FFI for snubbing original films like Jai Bhim and

— Sujith Voona (@sujith_voona)

ಅಂತಾರಾಷ್ಟ್ರೀಯ ಚಲನಚಿತ್ರ ಹೊರತುಪಡಿಸಿ ಇತರೆ ವಿಭಾಗದಲ್ಲಿ ಆಯ್ಕೆಗಿದೆ ಚಾನ್ಸ್‌..!
ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ನಾಮನಿರ್ದೇಶನಗೊಳ್ಳದಿದ್ದರೂ, ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರವು ಮಾತ್ರ ಅಮೆರಿಕನ್‌ ಅಲ್ಲದ ಚಲನಚಿತ್ರಗಳನ್ನು ನಾಮನಿರ್ದೇಶನ ಮಾಡಬಹುದಾದ ಏಕೈಕ ವರ್ಗವಲ್ಲ. ವರ್ಷಗಳಲ್ಲಿ, ಹಲವಾರು ವಿದೇಶಿ ಚಲನಚಿತ್ರಗಳು ಇತರ ಪ್ರಮುಖ ವಿಭಾಗಗಳಲ್ಲಿಯೂ ಆಸ್ಕರ್‌ನಲ್ಲಿ ನಾಮನಿರ್ದೇಶನಗೊಂಡಿವೆ. ಅನೇಕ ಚಿತ್ರಗಳು ಪ್ರಮುಖ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ. RRR ಗೆ ಸಹ ಇದು ಈಗಲೂ ಸಾಧ್ಯವಿದೆ ಎಂದು ಹೇಳಬಹುದು. ಚಲನಚಿತ್ರ ಟ್ರೇಡ್‌ ಅನಾಲಿಸ್ಟ್‌ ರಮೇಶ್ ಬಾಲಾ ಅವರು ಹೇಳುವ ಪ್ರಕಾರ, “ಒಂದು ದೇಶದ ಅಧಿಕೃತ ಪ್ರವೇಶವು ಅತ್ಯುತ್ತಮ ಅಂತಾರಾಷ್ಟ್ರೀಯ ಅತ್ಯುತ್ತಮ ವಿದೇಶಿ ಚಲನಚಿತ್ರ ವರ್ಗಕ್ಕೆ ಮಾತ್ರ ಅಗತ್ಯವಿದೆ. ‘ಕ್ರೌಚಿಂಗ್ ಟೈಗರ್ ಹಿಡನ್ ಡ್ರ್ಯಾಗನ್’, ‘ಲೈಫ್ ಈಸ್ ಬ್ಯೂಟಿಫುಲ್’ ಅಥವಾ ‘ಪ್ಯಾರಾಸೈಟ್‌’ ನಂತೆ RRR ಸಹ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರವನ್ನು ಹೊರತುಪಡಿಸಿ ಇತರ ಮುಖ್ಯವಾಹಿನಿಯ ವಿಭಾಗಗಳಿಗೆ ನಾಮನಿರ್ದೇಶನ ಮಾಡಬಹುದು’’ ಎಂದು ಹೇಳಿದ್ದಾರೆ.

This scene is enough 🔥, to get into . The 'Epitome' of acting shows peace, angry, bravery, smile in just one shot 🔥. He deserves oscar award. pic.twitter.com/olj4cqAxke

— CrazyStuff 💥 (@nlyCrazy)

ಈ ಹಿನ್ನೆಲೆ RRR ಚತ್ರದ ಹಾಗೂ ರಾಜಮೌಳಿ ಅಭಿಮಾನಿಗಳು ಈಗಲೂ ಸಹ ಆಸ್ಕರ್‌ ಕನಸು ಕಾಣಬಹುದು.  

click me!