ಆಂಟಿ ಅನ್ನೋ ಪದಕ್ಕೆ ಕೆಟ್ಟ ಅರ್ಥ ಕೊಟ್ಟಿದ್ದಾರೆ..ನಾನೇನು ಬಟ್ಟೆ ಬಿಚ್ಚಿ ಓಡಾಡುತ್ತಿದ್ದೀನಾ?: ಅನಸೂಯ ಭಾರದ್ವಾಜ್

Published : Feb 05, 2025, 10:50 AM IST
ಆಂಟಿ ಅನ್ನೋ ಪದಕ್ಕೆ ಕೆಟ್ಟ ಅರ್ಥ ಕೊಟ್ಟಿದ್ದಾರೆ..ನಾನೇನು ಬಟ್ಟೆ ಬಿಚ್ಚಿ ಓಡಾಡುತ್ತಿದ್ದೀನಾ?: ಅನಸೂಯ ಭಾರದ್ವಾಜ್

ಸಾರಾಂಶ

ವಿಜಯ್ ದೇವರಕೊಂಡ ಅಭಿಮಾನಿಗಳಿಂದ ನಿರಂತರ ಟ್ರೋಲ್‌ಗೆ ಒಳಗಾಗಿರುವ ನಿರೂಪಕಿ-ನಟಿ ಅನಸೂಯ ಭಾರದ್ವಾಜ್, "ಆಂಟಿ" ಎಂಬ ಅವಹೇಳನಕಾರಿ ಕರೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಸಂದರ್ಶನವೊಂದರಲ್ಲಿ, ತಮ್ಮ ಬಟ್ಟೆ ಮತ್ತು ವೈಯಕ್ತಿಕ ಆಯ್ಕೆಗಳನ್ನು ಪ್ರಶ್ನಿಸುವವರ ವಿರುದ್ಧ ಕಿಡಿಕಾರಿದ ಅವರು, ಕರ್ಮದಲ್ಲಿ ನಂಬಿಕೆ ಇದೆ ಎಂದಿದ್ದಾರೆ. ಲೈಂಗಿಕತೆಯ ಬಗ್ಗೆಯೂ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತೆಲುಗು ಕಿರುತೆರೆಯ ನಿರೂಪಕಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಅನಸೂಯ ಭಾರದ್ವಾಜ್ ಸಿಕ್ಕಾಪಟ್ಟೆ ಟ್ರೋಲ್‌ ಎದುರಿಸುತ್ತಾರೆ. ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಬಗ್ಗೆ ಅನಸೂಯ ಕಾಮೆಂಟ್ ಮಾಡಿದ್ದಕ್ಕೆ ಸಖತ್ ಟ್ರೋಲ್ ಎದುರಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ವಿಜಯ್ ಅಭಿಮಾನಿಗಳು ಪದೇ ಪದೇ ಅನಸೂಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ ಅನಸೂಯ ನಟನೆಯ ರಜಾಕರ್ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಕಂಡು ಈಗ ಓಟಿಟಿಗೆ ಕಾಲಿಡುತ್ತಿದೆ. ಚಿತ್ರದ ಬಗ್ಗೆ ಅನಸೂಯ ಯಾವುದೇ ಪೋಸ್ಟ್ ಹಾಕಿದ್ದರೂ ಆಂಟಿ ಆಂಟಿ ಎಂದು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಎಷ್ಟು ದಿನ ಸುಮ್ಮನಿರುವುದು? ಹೀಗಾಗಿ ಅನಸೂಯ ತಿರುಗೇಟು ಕೊಟ್ಟಿದ್ದಾರೆ. 

'ನನ್ನನ್ನು ಆಂಟಿ ಎನ್ನುವವರು ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದಾರೆ ಎನ್ನುವುದು ನನಗೆ ಬೇಸರ ಆಗುತ್ತಿದೆ. ನನ್ನನ್ನು ನನ್ನಂತೆಯೇ ಅರ್ಥ ಮಾಡಿಕೊಳ್ಳುವವರು ನನ್ನ ಸುತ್ತಾಮುತ್ತಾ ಸಾಕಷ್ಟು ಜನರು ಇದ್ದಾರೆ. ಹೀಗಾಗಿ ನಾನು ತುಂಬಾ ಆರಾಮ್‌ ಆಗಿದ್ದೀನಿ. ನನಗೆ ಸಪೋರ್ಟಿವ್ ಜನರು ಇಲ್ಲದೆ ಇದ್ದರೆ ಖಂಡಿತಾ ಕಥೆ ಬೇರೆನೇ ಆಗಿರುತ್ತಿತ್ತು. ಸ್ಟಾರ್ ನಟರು ಕೂಡ ನನ್ನ ಬಗ್ಗೆ ಏನ್ ಏನೋ ಮಾತನಾಡುತ್ತಿದ್ದಾರೆ. ವಿಚಾರ ಗೊತ್ತಾಗಿದ್ದರೂ ಕೂಡ ನಾನು ಸಹಿಸಿಕೊಂಡು ಇದ್ದೀನಿ' ಎಂದು ಖಾಸಗಿ ಸಂದರ್ಶನದಲ್ಲಿ ಅನಸೂಯ ಭಾರದ್ವಾಜ್ ಮಾತನಾಡಿದ್ದಾರೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಅನಸೂಯ ಮಾತನಾಡಿದ್ದಾರೆ. 

ನನಗೆ ಆರೋಗ್ಯ ಸರಿಯಾಗಿಲ್ಲ ಅಷ್ಟರಲ್ಲಿ ಶೋ ಶೂಟಿಂಗ್ ಆರಂಭಿಸಿ ಬಿಟ್ಟರು; ಸತ್ಯ ರಿವೀಲ್ ಮಾಡಿದ ಭವ್ಯಾ ಗೌಡ

'ಸುಮಾರು ಜನರು ನನ್ನನ್ನು ಆಂಟಿ ಎಂದು ಕರೆಯುತ್ತಾರೆ. ಒಂದು ಅರ್ಥ ಮಾಡಿಕೊಳ್ಳಬೇಕು...ನಾನು ನನ್ನ ಗಂಡನಿಗೆ ಸ್ವಂತ, ನಾನು ಬಿಕಿನಿ ಹಾಕ್ಕೋಂಡಿದ್ದೀನಾ ಬಟ್ಟೆ ಬಿಟ್ಟಿ ಓಡಾಡುತ್ತಿದ್ದೀನಾ? ಅದೆಲ್ಲಾ ನನ್ನ ಇಷ್ಟ. ನನಗೆ ಒಂದು ಪ್ರಶ್ನೆ ಇದೆ...ನೀವು ನಿಮ್ಮ ಮಕ್ಕಳನ್ನು ಬೆಳೆಸಿರುವ ರೀತಿ ಹೀಗೆನಾ? ಒಂದು ಅರ್ಥ ಮಾಡಿಕೊಳ್ಳಿ ನಮ್ಮ ನಮ್ಮ ಮಡದಿ ನನ್ನ ಪ್ರೇಯಸಿ ನನಗೆ ಮಾತ್ರ ಬೇರೆಯವರಿಗೆ ಅಲ್ಲ. ನೀವು ಮನುಷ್ಯರೇ ಅಲ್ಲವೇ? ಆಂಟಿ ಎನ್ನುವ ಪದಕ್ಕೆ ತಪ್ಪಾಗಿ ಅರ್ಥ ಕೊಡುವುದಕ್ಕೆ ನನಗೆ ಬೇಸರವಾಗುತ್ತದೆ. ಆಂಟಿ ಅನ್ನೋದು ಕೆಟ್ಟ ಪದ ಅಲ್ಲ ಆದರೆ ಆಂಟಿ ಅನ್ನೋ ಪದವನ್ನು ಕೆಟ್ಟದಾಗಿ ಬಳಸಲು ಶುರು ಮಾಡಿದ್ದಾರೆ. ನನಗೆ ಇಷ್ಟ ಬಂದಂತೆ ನಾನು ಬಟ್ಟೆ ಹಾಕುತ್ತೀನಿ ಅದರಿಂದ ನಿಮಗೆ ಸಮಸ್ಯೆ ಏನು? ನೀವು ಹೇಳುವ ಮಾತು ನಿಜಕ್ಕೂ ನನಗೆ ಬೇಸರ ತರುತ್ತದೆ' ಎಂದು ಅನಸೂಯ ಹೇಳಿದ್ದಾರೆ.

ಪ್ರೀತಿ ಎಲ್ಲರೂ ಮಾಡ್ತಾರೆ ನನಗೆ ಗೌರವ ಕೊಡುವವರು ಬೇಕು; ಮದುವೆ ಬಗ್ಗೆ ಧನ್ಯಾ ರಾಮ್‌ಕುಮಾರ್

'ನಾನು ಕರ್ಮ ಅನ್ನೋದನ್ನು ತುಂಬಾ ನಂಬುತ್ತೀನಿ. ನಮ್ಮ ಬಗ್ಗೆ ಮಾತನಾಡುವ ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯರು ಇರುತ್ತಾರೆ. ಹಾಗಾಗಿ ಎಲ್ಲದ್ದಕ್ಕೂ ಸಿದ್ಧರಾಗಿರಿ' ಎಂದಿದ್ದಾರೆ ಅನಸೂಯ. ರಂಗಸ್ಥಳಂ ಮತ್ತು ಪುಷ್ಪ ಸಿನಿಮಾದಲ್ಲಿ ನಟಿಸಿದ ಮೇಲೆ ಅನಸೂಯ ಆಕ್ಟಿಂಗ್ ಕರಿಯರ್‌ನಲ್ಲಿ ಬಿಗ್ ಹಿಟ್‌ ಪಡೆದರು. ಈ ಸಂದರ್ಶನದಲ್ಲಿ ಸ* ಬಗ್ಗೆ ಕೂಡ ಮಾತನಾಡಿದ್ದಾರೆ. 'ಸ* ಅನ್ನೋದು ಕೆಟ್ಟದಲ್ಲ ಅದನ್ನು ಅಷ್ಟು ಕೆಟ್ಟದು ಎಂದು ನೋಡುವುದು ಬೇಕಿಲ್ಲ. ಅದು ಅವಶ್ಯಕತೆ ಅಷ್ಟೇ. ಹಾಗಂತ ಎಲ್ಲೆಂದರಲ್ಲಿ ಮಾಡಿ ಮಾತನಾಡಿ ಎಂದು ನಾನು ಹೇಳಲ್ಲ ಎಂದಿದ್ದಾರೆ.

ಬಾಡಿ ನೇಚರ್, ಹಾರ್ಮೋನ್‌ ಇಂಬ್ಯಾಲೆನ್ಸ್‌.... ಮುಂದೆ ಏನೂ ಗೊತ್ತಿಲ್ಲ ಅವಳಿಗೆ ಒತ್ತಡ ಹಾಕಲ್ಲ: ಮಹಿತಾ ತಾಯಿ ಹೇಳಿಕೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?