'ಪುಷ್ಪ' ಚಿತ್ರದ ಹೊಸ ಪೋಸ್ಟರ್ ರಿಲೀಸ್: ದಾಕ್ಷಾಯಿಣಿ ಲುಕ್‌ನಲ್ಲಿ ಅನಸೂಯ

By Suvarna News  |  First Published Nov 10, 2021, 6:09 PM IST

ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ ಅನಸೂಯ ಭಾರಧ್ವಾಜ್, ರಂಗಸ್ಥಳಂ ಚಿತ್ರದಲ್ಲಿ ರಂಗಮ್ಮತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಪುಷ್ಪ ಚಿತ್ರದಲ್ಲಿ ದಾಕ್ಷಾಯಿಣಿ ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಸುಕುಮಾರ್ (Sukumar) ಮತ್ತು 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ (Allu Arjun)  ಕಾಂಬಿನೇಷನ್​ನಲ್ಲಿ ಸಿದ್ಧವಾಗಿರುವ 'ಪುಷ್ಪ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ದಿನೆ ದಿನೇ ಚಿತ್ರತಂಡ ಚಿತ್ರದ ತಾರಾಬಳಗವನ್ನು ಪರಿಚಯಿಸುತ್ತಿದೆ. ಇತ್ತೀಚೆಗಷ್ಟೇ  ಸುನೀಲ್ ಅವರ ಮಂಗಲಮ್ ಶ್ರೀನು (MangalamSrinu)ಪಾತ್ರವನ್ನು ರಿವೀಲ್ ಮಾಡಿತ್ತು. ಇದೀಗ ಚಿತ್ರದ ಮತ್ತೊಂದು ಪಾತ್ರದ ಹೊಸ ಲುಕ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಹಿಂದೆಂದೂ ಕಾಣಿಸದ ಲುಕ್‌ನಲ್ಲಿ ಅನಸೂಯ ಭಾರಧ್ವಾಜ್ (Anasuya Bharadwaj) ಕಾಣಿಸಿಕೊಂಡಿದ್ದಾರೆ.

ಹೌದು! ಅನಸೂಯ ಭಾರಧ್ವಾಜ್ ತೆಲುಗು (Telugu) ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ. ರಾಮಚರಣ್ (Ram Charan) ನಟಿಸಿದ ಸೂಪರ್ ಹಿಟ್ ಸಿನಿಮಾ 'ರಂಗಸ್ಥಳಂ' (Rangasthalam) ಚಿತ್ರದ ರಂಗಮ್ಮತ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅನಸೂಯ ಈ ಚಿತ್ರದಲ್ಲಿ ದಾಕ್ಷಾಯಿಣಿ ಎಂಬ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ 'ಪುಷ್ಪ' ಚಿತ್ರತಂಡ ಇನ್‌ಸ್ಟಾಗ್ರಾಮ್‌ನಲ್ಲಿ (Instagram), ಅವಳು ದುರಹಂಕಾರಿ ಮತ್ತು ಹೆಮ್ಮೆಯ ವ್ಯಕ್ತಿತ್ವ. ದಾಕ್ಷಾಯಿಣಿ ಪಾತ್ರದಲ್ಲಿ ಅನಸೂಯ ಭಾರಧ್ವಾಜ್ ಎಂದು ಕ್ಯಾಪ್ಷನ್ ಬರೆದು ಅವರ ಲುಕ್‌ನ ಪೋಸ್ಟರ್‌ನ್ನು ಶೇರ್ ಮಾಡಿಕೊಂಡಿದ್ದಾರೆ. 

Tap to resize

Latest Videos

undefined

ಅನಸೂಯ ತೆಲುಗಿನ ಜಬರ್‌ದಸ್ತ್ (Jabardasth) ಹಾಸ್ಯ ಕಾರ್ಯಕ್ರಮದಿಂದ ಪರಿಚಿತರಾಗಿದ್ದಾರೆ. 2016 ರಲ್ಲಿ ತೆರೆಕಂಡ 'ಸೊಗ್ಗಡೆ ಚಿನ್ನಿ ನಾಯನಾ' (Soggade Chinni Nayana) ಚಿತ್ರದಿಂದ ಪೋಷಕ ನಟಿಯಾಗಿ ಸಿನಿಜೀವನ ಆರಂಭಿಸಿದ ಇವರು ಅದೇ ವರ್ಷ ತೆರೆಕಂಡ 'ಕ್ಷಣಂ' ಚಿತ್ರದ ನಟನೆಗಾಗಿ ಐಫಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. 'ರಂಗಸ್ಥಳಂ' ಚಿತ್ರದ ರಂಗಮ್ಮತ್ತೆ ಪಾತ್ರ ಇವರಗೆ ತುಂಬಾ ಖ್ಯಾತಿಯನ್ನು ತಂದುಕೊಟ್ಟಿದೆ.

'ಸಾಮಿ ಸಾಮಿ' ಹಾಡಿಗೆ ಬೊಂಬಾಟ್ ಸ್ಟೆಪ್ಸ್ ಹಾಕಿದ ಅಲ್ಲು-ರಶ್ಮಿಕಾ

'ಪುಷ್ಪ' ಚಿತ್ರದಲ್ಲಿ ಮಂಗಲಮ್ ಶ್ರೀನು ಹೆಸರಿನ ಪಾತ್ರದಲ್ಲಿ ನಟ ಸುನೀಲ್ (Sunil) ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್ ಕೂಡಾ ರಗಡ್ ಆಗಿದೆ. ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ಜೊತೆಗೆ ಸುನೀಲ್ ಕೂಡಾ ಖಳನಾಯಕನಾಗಿ ಅಬ್ಬರಿಸಿದ್ದಾರೆ.  ಈ ಬಗ್ಗೆ ಸುನೀಲ್, ಈ ಪಾತ್ರದ ನಟನೆಗೆ ಅವಕಾಶ ಕೊಟ್ಟಂತಹ ಸುಕ್ಕು ಡಾರ್ಲಿಂಗ್ ಮತ್ತು ಅಲ್ಲು ಅರ್ಜುನ್ ಗಾರು ಅವರಿಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ಬರೆದು ತಮ್ಮ ಪಾತ್ರದ ಪೋಸ್ಟರ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.

'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕಳ್ಳಸಾಗಾಣಿಕೆ ಮಾಡುವ ಲಾರಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಗ್ಲಾಮರಸ್ ಪಾತ್ರದಲ್ಲಿ ಶ್ರೀವಲ್ಲಿಯಾಗಿ ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ (Rashmika Mandanna) ಅಲ್ಲು ಅರ್ಜುನ್‌ಗೆ ಜೋಡಿಯಾಗಿ ನಟಿಸಿದ್ದಾರೆ. ಡಾಲಿ ಧನಂಜಯ್ (Dolly Dhananjay), ಟಾಲಿವುಡ್ ವಿಲನ್ ಜಗಪತಿ ಬಾಬು (Jagapati Babu), ಪ್ರಕಾಶ್ ರಾಜ್ (Prakash Raj), ಸುನೀಲ್, ವೆನ್ನೆಲ್ಲಾ ಕಿಶೋರ್ ಸೇರಿದಂತೆ ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ (Mythri Movie Makers) ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದು, ಅಲ್ಲು ಅರ್ಜುನ್​ ಗೆಟಪ್​ ಸಂಪೂರ್ಣ ಡಿಫರೆಂಟ್​ ಆಗಿದೆ. 

ರಗಡ್ ಲುಕ್‌ನಲ್ಲಿ ಮಂಗಲಮ್ ಶ್ರೀನು ಆದ ಸುನೀಲ್

ಇನ್ನು ಇತ್ತಿಚೆಗಷ್ಟೇ ಚಿತ್ರದ 'ಸಾಮಿ ಸಾಮಿ' (Saami Saami) ಹಾಡನ್ನು ಬಿಡುಗಡೆಯಾಗಿದ್ದು, ರಶ್ಮಿಕಾ ಮತ್ತು ಅಲ್ಲು ಅರ್ಜುನ್​ ಬೊಂಬಾಟ್ ಸ್ಟೆಪ್ಸ್ ಹಾಕಿದ್ದರು. ಕನ್ನಡ ವರ್ಷನ್​ಗೆ ಅನನ್ಯಾ ಭಟ್​ (Ananya Bhat) ಧ್ವನಿ ನೀಡಿದ್ದು, ದೇವಿಶ್ರೀ ಪ್ರಸಾದ್ (Devi Sri Prasad) ಹಾಡಿಗೆ ಸಂಗೀತ ಸಂಯೋಜಿಸಿದ್ದರು. 'ಪುಷ್ಪ' ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ (Sukumar)​ ಆಕ್ಷನ್ ಕಟ್ ಹೇಳಿದ್ದು, ಎರಡು ಭಾಗಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 'ಪುಷ್ಪ: ದಿ ರೈಸ್' (Pushpa: The Rise) ಎಂಬ ಶೀರ್ಷಿಕೆಯ ಮೊದಲ ಭಾಗವು ಡಿಸೆಂಬರ್ 17ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.
 

click me!