
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ 11 ದಿನಗಳು ಕಳೆದಿವೆ. ಪುನೀತ್ ಅಂತ್ಯಸಂಸ್ಕಾರ ನಡೆದ ದಿನದಿಂದಲೂ ಪರ ಭಾಷೆ ನಟ-ನಟಿಯರು ಅವರ ನಿವಾಸಕ್ಕೆ ಮತ್ತು ಸಮಾಧಿಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳುತ್ತಿದ್ದಾರೆ. ಈ ವೇಳೆ ತಮಿಳು ಖ್ಯಾತ ನಟ ವಿಜಯ್ ಸೇತುಪತಿ ಕೂಡ ಆಗಮಿಸಿದ್ದರು.
ಕೆಲವು ದಿನಗಳ ಹಿಂದೆ ವಿಜಯ್ ಸೇತುಪತಿ ಬೆಂಗಳೂರಿಗೆ ಆಗಮಿಸಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಆನಂತರ ಅವರ ನಿವಾಸಕ್ಕೆ ತೆರಳಿ ರಾಜ್ ಕುಟುಂಬಸ್ಥರ ಜೊತೆಯೂ ಸಮಯ ಕಳೆದು ಆನಂತರ ಹೊರಟಿದ್ದರು. ಚೆನ್ನೈಗೆ ವಿಮಾನ ತೆಗೆದುಕೊಳ್ಳಲು ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ಹಿಂದಿನಿಂದ ಆಗಮಿಸಿದ ಯುವಕನೊಬ್ಬ ನಟನಿಗೆ ಥಳಿಸಿದ್ದಾನೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಘಟನೆ ನಡೆದ ಎರಡು ಮೂರು ಗಂಟೆಗಳಲ್ಲಿ ಆ ಯುವಕನನ್ನು ಬಂಧಿಸಲಾಗಿದೆ.
ಬಹುಮಾನ ಫೋಷಣೆ:
ಹಿಂದು ಮಕ್ಕಳ ಕಚ್ಚಿ ಹೆಸರಿನ ಹಿಂದುಪರ ಸಂಘಟನೆ ಮುಖಂಡ ಅರ್ಜುನ್ ಅವರು ಈ ಬಹುಮಾನ ಫೋಷಣೆ ಮಾಡಿದ್ದಾರೆ. ನಟ ಸೇತುಪತಿ ಮೇಲಿನ ಪ್ರತಿಯೊಂದೂ ಹೊಡೆತಕ್ಕೂ ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. 'ಬೆಂಗಳೂರಿನಲ್ಲಿ ವಿಜಯ್ ಮೇಲೆ ಹಲ್ಲೆ ನಡೆದಾಗ ಅವರೊಂದಿಗೆ ಇದ್ದ ವ್ಯಕ್ತಿಯನ್ನು ನಾನು ಮಾತನಾಡಿಸಿ, ಅಂದು ವಿಮಾನದಲ್ಲಿ ಏನಾಯಿತು ಎಂಬುದನ್ನು ಕೇಳಿ ತಿಳಿದುಕೊಂಡೆ. ನಂತರ ಈ ಆಫರ್ ಘೋಷಿಸಿದೆ, ಎಂದು ಅರ್ಜುನ್ ಅವರು ಹೇಳಿದ್ದಾರೆ ಎನ್ನಲಾಗಿದೆ.
'ವಿಜಯ್ ರಾಷ್ಟ್ರ ಪ್ರಶಸ್ತಿ ಪಡೆದದ್ದಕ್ಕೆ ಮಾಹಾ ಗಾಂಧಿ ಅವರು ಶುಭಾಶಯಗಳನ್ನು ತಿಳಿಸಲು ಇಚ್ಛಿಸಿದ್ದರು. ಆದರೆ ವಿಜಯ್ ವ್ಯಂಗ್ಯವಾಗಿ ಇದು ರಾಷ್ಟ್ರವೇ ಅಲ್ಲ ಎಂದರು. ಆದರೂ ಮಹಾ ಗಾಂಧಿ ಅವರು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡು, ನೀವು ದಕ್ಷಿಣ ಚಿತ್ರರಂಗಕ್ಕೆ ಸೇರಿದವರು. ಬರಲೇ ಬೇಕು ಎಂದು ಮನವಿ ಮಾಡಿಕೊಂಡರೂ, ವಿಜಯ್ ಕೊಂಕು ಮಾತನಾಡಿದ್ದಾರೆ. ಭೂಮಿ ಮೇಲೆ ಇರುವುದು ಒಂದೇ ದೇವರು. ಅದು Jesus ಎಂದಿದ್ದಾರೆ. ನಮ್ಮ ಸಂಸ್ಕ್ರೃತಿ ನಾಡು ಬಗ್ಗೆ ಗೌರವವೇ ಇಲ್ಲ. ಹೀಗಾಗಿ ಸೇತುಪತಿ ಜೊತೆ ಈ ಹಿಂದೆಯೂ ಗಾಂಧಿ ಜಗಳವಾಡಿದ್ದರು,' ಎಂದು ಅರ್ಜುನ್ ಸಂಪತ್ ಖಾಸಗಿ ಮಾಧ್ಯಮಕ್ಕೆ ಹೇಳಿದ್ದಾರೆ.
'ವಿಜಯ್ ಅವರು ಪಸುಂಪೋನ್ ಮುತುರಮಾಲಿಂಗಮ್ ಅವರನ್ನು ಹಾಗೂ ಭಾರತವನ್ನು ಅವಮಾನ ಮಾಡಿದ್ದಾರೆ. ಹೀಗಾಗಿ ಅವರು ಕ್ಷಮೆ ಕೇಳುವವರೆಗೂ ಅವರಿಗೆ ಯಾರು ಹೊಡೆಯುತ್ತಾರೋ, ಅವರಿಗೆಲ್ಲಾ ನಾನು ಒಂದು ಹೊಡೆತಕ್ಕೆ ಒಂದು ಸಾವಿರ ನೀಡುತ್ತೇನೆ,' ಎಂದಿದ್ದಾರೆ.
ವಿಜಯ್ ಸೇತುಪತಿ ಸ್ಪಷ್ಟನೆ:
ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಬಗ್ಗೆ ವಿಜಯ್ ಪ್ರತಿಕ್ರಿಯೆ ನೀಡಿದ್ದಾರೆ. 'ಅದೊಂದು ಬಹಳ ಸಣ್ಣ ಘಟನೆ. ಆದರೆ ಅಲ್ಲಿದ್ದ ಯಾರೋ ವ್ಯಕ್ತಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಅದಕ್ಕೆ ಈ ಘಟನೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಮೊಬೈಲ್ ಇದ್ದವರೆಲ್ಲ ಈಗ ಕ್ಯಾಮೆರಾಮನ್‌ಗಳಾಗಿದ್ದಾರೆ. ಇಂಥ ಸಣ್ಣ ಘಟನೆಗಳಿಗೂ ಪ್ರಾಮುಖ್ಯತೆ ಸಿಗುತ್ತಿದೆ. ಆ ಯುವಕ ಕುಡಿದಿದ್ದ. ವ್ಯಕ್ತಿಯೊಬ್ಬ ತನ್ನ ನಿಯಂತ್ರಣದಲ್ಲಿ ಇಲ್ಲದೇ ಇದ್ದಾಗ ನಡೆದ ಅಚಾತುರ್ಯವಿದು. ಮಾಸ್ಕ್ ಹಾಕಿರುವ ಕಾರಣ ಇತ್ತೀಚಿನ ದಿನಗಳಲ್ಲಿ ಯಾರು ಕುಡಿದಿದ್ದಾರೆ, ಯಾರು ಕುಡಿದಿಲ್ಲ ಎಂಬುವುದು ಹೇಳುವುದೂ ಕಷ್ಟ. ನನ್ನ ಮೇಲೆ ಹಲೆ ಮಾಡಿದ ಯುವಕನೂ ಅದೇ ವಿಮಾನದಲ್ಲಿ ಪ್ರಯಾಣಿಸಲು ಬಂದಿದ್ದ. ವಿಮಾನದಲ್ಲಿ ನಮ್ಮೊಂದಿಗೆ ಜಗಳ ಆರಂಭಿಸಿದ್ದ. ವಿಮಾನದಿಂದ ಇಳಿದ ಮೇಲೂ ಜಗಳ ಮುಂದುವರೆಸಿದ್ದ,' ಎಂದು ವಿಜಯ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.