ಬಿಕಿನಿಯಲ್ಲಿ ಅನನ್ಯಾ ಪಾಂಡೆ ಫೋಟೋ ವೈರಲ್​: ಎದುರಿಗಿರೋರು ನೈಟ್​ ಮ್ಯಾನೇಜರಾ ಎಂದ ಫ್ಯಾನ್ಸ್!

By Suvarna NewsFirst Published Jul 23, 2023, 1:24 PM IST
Highlights

ನಟಿ ಅನನ್ಯಾ ಪಾಂಡೆ ಬಿಕಿನಿ ಫೋಟೋಶೂಟ್​ ಮಾಡಿಸಿಕೊಂಡಿದ್ದು, ಎದುರಿಗೆ ಇರುವವರು ನೈಟ್​ ಮ್ಯಾನೇಜರಾ ಅಂತ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 
 

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಸಿನಿಮಾಗಳಿಂದ ಹೆಚ್ಚಾಗಿ ಹಾಟ್ ಫೋಟೋಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಅನನ್ಯಾ ಆಗಾಗ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ.  ಅನನ್ಯಾ ಪಾಂಡೆ (Ananya Panday) ಮತ್ತು ಆದಿತ್ಯ ರಾಯ್ ಕಪೂರ್  ತಮ್ಮ ವೈಯಕ್ತಿಕ ಜೀವನದಿಂದ ಇತ್ತೀಚಿಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಈಚೆಗಷ್ಟೇ ಇವರಿಬ್ಬರೂ ಸ್ಪೇನ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರಿಬ್ಬರು  ಪೋರ್ಚುಗಲ್‌ನ ಲಿಸ್ಬನ್ ನಗರದಲ್ಲಿ ಒಟ್ಟಿಗೆ ಸಮಯ ಕಳೆಯುತ್ತಿರುವುದು ಕಂಡುಬಂದಿದೆ.  ಇಬ್ಬರೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಈಗ ಈ ಫೋಟೋಗಳಿಂದ ಸ್ಪಷ್ಟವಾಗಿದೆ. ಇಬ್ಬರೂ ಪರಸ್ಪರ  ತಬ್ಬಿಕೊಂಡಿರುವುದು ಕಂಡುಬಂದಿತ್ತು.  ಈ ಫೋಟೋಗಳಲ್ಲಿ ಆದಿತ್ಯ ಮತ್ತು ಅನನ್ಯಾ ಇಬ್ಬರೂ  ಒಂದೇ ಬಣ್ಣದ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆದಿತ್ಯ ಕಪ್ಪು ಶಾರ್ಟ್ಸ್ ಮತ್ತು ಟೀ ಶರ್ಟ್‌ನಲ್ಲಿ ಇದ್ದರೆ, ಅನನ್ಯ ಪಾಂಡೆ ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇವೆಲ್ಲ ನೋಡಿದರೆ ಇಬ್ಬರೂ ಡೇಟಿಂಗ್​ ಮಾಡುತ್ತಿರುವುದು ಸ್ಪಷ್ಟವಾಗಿತ್ತು.

ಅಂದಹಾಗೆ ಅನನ್ಯಾ ಪಾಂಡೆ ಅವರು ಬಾಲಿವುಡ್​ನ ಫೇಮಸ್​ ನಟ ಚಂಕಿ ಪಾಂಡೆ (Chanki Pandey) ಅವರ ಪುತ್ರಿ. ಇದೇ  ಕಾರಣಕ್ಕೆ ಸಹಜವಾಗಿ ಅನನ್ಯಾಗೆ  ಸಿನಿಮಾದ ಅವಕಾಶಗಳು ಸಿಕ್ಕವು ಎನ್ನಲಾಗುತ್ತಿವೆ. ಸ್ಟಾರ್​ ಕಿಡ್​, ನೆಪೋಟಿಸಂ ನಟಿ ಎಂದೆಲ್ಲಾ ಖ್ಯಾತರಾಗಿರೋ ಅನನ್ಯಾ ಅವರ ಸಿನಿಮಾಗಳು ಸಕ್ಸಸ್​ ಆದದ್ದು ಕಡಿಮೆಯೇ. ಆದರೆ ಬಿಕಿನಿ ಬಟ್ಟೆ ಧರಿಸಿ ಫೋಟೋ ಶೂಟ್​ ಮಾಡಿಸಿಕೊಳ್ಳುವುದು, ಬಾಯ್​ಫ್ರೆಂಡ್​ ಜೊತೆ ಸುತ್ತಾಡಿ ಸುದ್ದಿಯಾಗುವ ಮೂಲಕ ಈಕೆ ಫೇಮಸ್​ ಆಗುತ್ತಿದ್ದಾರೆ. ಎಷ್ಟೇ ಟ್ರೋಲ್​ಗೆ ಒಳಗಾದರೂ  ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.  ವಿಜಯ್​ ದೇವರಕೊಂಡ ನಾಯಕತ್ವದ ‘ಲೈಗರ್​’ ಸಿನಿಮಾದಲ್ಲಿ ಅನನ್ಯಾ ನಟಿಸಿದ್ದರು. ಆದರೆ ಆ ಸಿನಿಮಾ ಹೀನಾಯವಾಗಿ ಸೋತಿತು. ಅದಕ್ಕೆ ಈಗ ಗೆಳೆಯನ ಜೊತೆ ಸುತ್ತಾಟದಲ್ಲಿ ತೊಡಗಿದ್ದು, ವಿದೇಶ ಪ್ರವಾಸದ ಮೋಜಿನಲ್ಲಿದ್ದಾರೆ. ಅದೇ ಇನ್ನೊಂದೆಡೆ, ಆದಿತ್ಯ ರಾಯ್ ಕಪೂರ್  (Aditya Roy Kapur) 'ದಿ ನೈಟ್ ಮ್ಯಾನೇಜರ್ 2' ವೆಬ್​ ಸೀರಿಸ್​ನ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿಯೇ ಅವರೂ ಗೆಳತಿ ಜೊತೆ ಸಕತ್​ ಟೂರ್​ ಮಾಡುತ್ತಿದ್ದಾರೆ. 

Latest Videos

Ileana D'Cruz ಬಾಯ್‌ಫ್ರೆಂಡ್‌ ಫೋಟೋ ರಿವೀಲ್​? ಕತ್ರಿನಾಳ ಅಣ್ಣನಾ ಅಂದೋರಿಗೆ ಸಿಕ್ತು ಉತ್ತರ!

ಇದೀಗ ಮತ್ತೊಂದು  ಬಿಕಿನಿ (Bikini) ಫೋಟೋವನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋಗಳು ವೈರಲ್​ ಆಗಿವೆ. ಈ ಫೋಟೋದಲ್ಲಿ ನೀಲಿ ಬಣ್ಣದ ಬಿಕಿನಿ ಧರಿಸಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದಾಗಲೇ ಈಕೆ ಆದಿತ್ಯ ಅವರ ಜೊತೆ ಫಾರಿನ್​ ಟೂರ್​ನಲ್ಲಿ ಇರುವುದನ್ನು ತಿಳಿದಿರೋ ಫ್ಯಾನ್ಸ್​ ಈ ಫೋಟೋ ಖಂಡಿತವಾಗಿಯೂ ಅವರೇ ತೆಗೆದದ್ದು ಎಂಬ ಲೆಕ್ಕಾಚಾರದಲ್ಲಿ ಇದ್ದಾರೆ. ವೈರಲ್​ ಫೋಟೋಗೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ. ಹಲವರು ನಿಮ್ಮ ಮುಂದೆ ಇರುವವರು ಅರ್ಥಾತ್​ ಫೋಟೋ ಕ್ಲಿಕ್ಕಿಸಿರುವವರು ಯಾರು ಎಂದು ನಮಗೆ ಗೊತ್ತು ಎಂದಿದ್ದು, ಅವರು ನೈಟ್​ ಮ್ಯಾನೇಜರ್​ ತಾನೆ ಎಂದು ಪ್ರಶ್ನಿಸಿದ್ದಾರೆ. 'ದಿ ನೈಟ್ ಮ್ಯಾನೇಜರ್ 2' ಚಿತ್ರವನ್ನು ಆದಿತ್ಯ ಅವರ ಫ್ಯಾನ್ಸ್​ ತುಂಬಾ ಮೆಚ್ಚಿಕೊಂಡಿದ್ದು, ಅವರನ್ನು 'ದಿ ನೈಟ್ ಮ್ಯಾನೇಜರ್' ಎಂದೇ ಸಂಬೋಧಿಸುತ್ತಿದ್ದಾರೆ. ಆದ್ದರಿಂದ ಮುಂದೆ ಇರುವವರು ಅವರೇ ಎಂಬುದು ನಮಗೆ ಗೊತ್ತು ಎನ್ನುತ್ತಿದ್ದಾರೆ. 
 
ಅಂದಹಾಗೆ ದಿ ನೈಟ್ ಮ್ಯಾನೇಜರ್ (The Night Manager) ಹಿಂದಿ ಭಾಷೆಯ ಕ್ರೈಮ್ ಥ್ರಿಲ್ಲರ್ ಟಿ.ವಿ ಸರಣಿಯಾಗಿದೆ. ಸಂದೀಪ್ ಮೋದಿ ಅವರು ಇದನ್ನು ನಿರ್ದೇಸಿಸಿದ್ದಾರೆ.  ಇದು ಬ್ರಿಟಿಷ್ ಟಿ.ವಿಯಲ್ಲಿ 2016ರಲ್ಲಿ ಇದೇ ಹೆಸರಿನಲ್ಲಿ ಬಿಡುಗಡೆಯಾಗಿತ್ತು.  ದಿ ನೈಟ್ ಮ್ಯಾನೇಜರ್‌ನಲ್ಲಿ ಆದಿತ್ಯ ರಾಯ್ ಕಪೂರ್ ಜೊತೆಗೆ ಅನಿಲ್ ಕಪೂರ್  ಮತ್ತು ಶೋಭಿತಾ ಧೂಳಿಪಾಲ ನಟಿಸಿದ್ದಾರೆ. ಜೊತೆಗೆ  ತಿಲೋತ್ತಮಾ ಶೋಮ್ , ರವಿ ಬೆಹ್ಲ್ , ಶಾಶ್ವತ ಚಟರ್ಜಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ .
ಆಂಧ್ರದ ರಾಜಕೀಯದಲ್ಲಿ ಕೋಲಾಹಲ: ಪವನ್​ ಕಲ್ಯಾಣ್-ರೋಜಾ ಮಧ್ಯೆ ಬಂದ ಸನ್ನಿ ಲಿಯೋನ್​!
 

click me!