Project K: ಪ್ರಭಾಸ್ ಲುಕ್ ಔಟ್: ಫ್ಯಾನ್ಸ್ ರಿಯಾಕ್ಷನ್ ಹೀಗಿದೆ

By Shruthi Krishna  |  First Published Jul 19, 2023, 6:57 PM IST

ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಸಿನಿಮಾದ ಫಸ್ಟ್ ಲುಕ್ ಔಟ್ ಆಗಿದೆ. ಮೊದಲ ನೋಟಕ್ಕೆ ಅಭಿಮಾನಿಗಳಿದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 


ಟಾಲಿವುಡ್ ಸ್ಟಾರ್ ಪ್ರಭಾಸ್ ಆದಿಪುರುಷ್ ಸೋಲಿನ ಬಳಿಕ ಮತ್ತೆ ಸಿನಿಮಾ ಶೂಟಿಂಗ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಲಾರ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತದಲ್ಲಿದೆ, ಜೊತೆಗೆ ಪ್ರಾಜೆಕ್ಟ್ ಕೆ ಶೂಟಿಂಗ್ ಕೂಡ  ನಡೆಯುತ್ತಿದೆ. ಬಾಹುಬಲಿ ಸಿನಿಮಾ ಬಳಿಕ ಪ್ರಭಾಸ್ ನಟನೆಯ ಎಲ್ಲಾ ಸಿನಿಮಾಗಳು ನೆಲಕಚ್ಚಿವೆ. ಹಾಗಾಗಿ ದೊಡ್ಡ ಸಕ್ಸಸ್‌ಗಾಗಿ ಪ್ರಭಾಸ್ ಕಾಯುತ್ತಿದ್ದಾರೆ. ‘ಸಾಹೋ’, ‘ರಾಧೆ ಶ್ಯಾಮ್’ ಹಾಗೂ ‘ಆದಿಪುರುಷ್’ಸಿನಿಮಾಗಳು ಸೋಲು ಕಂಡಿವೆ. ಹಾಗಾಗಿ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಸಿನಿಮಾಗ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

ಸದ್ಯ ಪ್ರಾಜೆಕ್ಟ್ ಕೆ ಸಿನಿಮಾದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ. ಪ್ರಭಾಸ್ ಫಸ್ಟ್ ಲುಕ್ ರಿಲೀಸ್ ಆಗಿದೆ. ಇತ್ತೀಚೆಗಷ್ಟೆ ಪ್ರಾಜೆಕ್ಟ್ ಕೆ ಸಿನಿಮಾದಿಂದ ದೀಪಿಕಾ ಲುಕ್ ರಿವೀಲ್ ಆಗಿತ್ತು. ಇದೀಗ ಪ್ರಭಾಸ್ ಲುಕ್ ಔಟ್ ಆಗಿದೆ. ಉದ್ದ ಕೂದಲಿನಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಹೀರೋ ರಕ್ಷಾಕವಚದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮುಷ್ಟಿಯಿಂದ ನೆಲವನ್ನು ಸ್ಪರ್ಶಿಸಿ ಗಂಭೀರ ನೋಟ ಬೀರಿದ್ದಾರೆ. ಪ್ರಭಾಸ್ ಲುಕ್  ಕೆಲವರಿಗೆ ಇಷ್ಟವಾದರೆ ಇನ್ನೂ ಕೆಲವರಿಗೆ ಇಷ್ಟವಾಗಿಲ್ಲ. ಪ್ರಭಾಸ್ ಅವರನ್ನು ಈ ಲುಕ್ ನಲ್ಲಿ ನೋಡಲು ಸಾಧ್ಯವಾಗುತ್ತಿಲ್ಲ  ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

Tap to resize

Latest Videos

ಶಾರುಖ್​ v/s ಪ್ರಭಾಸ್: ಮೇಲುಗೈ ಯಾರಿಗೆ? 'ಜವಾನ್'​ಗೆ 21 ದಿನಗಳ ಚಾಲೆಂಜ್​!

ಅಂದಹಾಗೆ ಪ್ರಾಜೆಕ್ಟ್ ಕೆ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಪ್ರಾಜೆಕ್ಟ್ ಕೆ ಎಂದರು, ಸಿನಿಮಾದ ಟೈಟಲ್ ಏನು ಎನ್ನುವ ಪ್ರಶ್ನೆಗೆ ಉತ್ತರ ಜುಲೈ 21ಕ್ಕೆ ಸಿಗಲಿದೆ. ‘ಪ್ರಾಜೆಕ್ಟ್​ ಕೆ’ ದೊಡ್ಡ ಬಜೆಟ್​ನಲ್ಲಿ ತಯಾರಾಗುತ್ತಿದೆ. ಈ ಚಿತ್ರಕ್ಕೆ ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ದೀಪಿಕಾ, ಪ್ರಭಾಸ್ ಜೊತೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾಣಿ ಸೇರಿದಂತೆ ಅನೇಕ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್​ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

The Hero rises. From now, the Game changes 🔥

This is Rebel Star from .

First Glimpse on July 20 (USA) & July 21 (INDIA).

To know stay tuned and subscribe: https://t.co/AEDNZ3ni5Qpic.twitter.com/oRxVhWq4Yn

— Vyjayanthi Movies (@VyjayanthiFilms)

ಪ್ರಭಾಸ್ 'ಪ್ರಾಜೆಕ್ಟ್ ಕೆ' ಸಿನಿಮಾದಿಂದ ದೀಪಿಕಾ ಪಡುಕೋಣೆ ಲುಕ್ ಔಟ್: ಹೇಗಿದೆ?

ಪಠಾಣ್ ಸಕ್ಸಸ್‌ನಲ್ಲಿರುವ ದೀಪಿಕಾ ಸದ್ಯ ಶಾರುಖ್ ಜೊತೆ ಜವಾನ್ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ದೀಪಿಕಾ ಲುಕ್ ಕೂಡ ರಿವೀಲ್ ಆಗಿದೆ. ಇದರ ಜೊತೆಗೆ ಪ್ರಾಜೆಕ್ಟ್ ಕೆ ಸಿನಿಮಾ ಕೂಡ ಭಾರಿ ನಿರೀಕ್ಷೆ ಮೂಡಿಸಿದೆ. ಪ್ರಾಜೆಕ್ಟ್ ಕೆ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ದೀಪಿಕಾ. 

click me!