ನಿರ್ಮಾಪಕರ ಮಾತು ಕೇಳಿ ಸೈಫ್​ಗೆ ನಿದ್ದೆ ಮಾತ್ರೆ ಕೊಡ್ತಿದ್ದ ಸೈಫ್​ ಪತ್ನಿ ಅಮೃತಾ ಸಿಂಗ್! ಕಾರಣ ರಿವೀಲ್​...

Published : Jan 17, 2025, 06:51 PM ISTUpdated : Jan 17, 2025, 07:03 PM IST
ನಿರ್ಮಾಪಕರ ಮಾತು ಕೇಳಿ ಸೈಫ್​ಗೆ ನಿದ್ದೆ ಮಾತ್ರೆ ಕೊಡ್ತಿದ್ದ ಸೈಫ್​ ಪತ್ನಿ ಅಮೃತಾ ಸಿಂಗ್!  ಕಾರಣ ರಿವೀಲ್​...

ಸಾರಾಂಶ

ಸೈಫ್​ಗೆ ಎರಡನೇ ಪತ್ನಿ ಕರೀನಾ. ಮೊದಲ ಪತ್ನಿ ಅಮೃತಾ ಸಿಂಗ್​. 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣದ ವೇಳೆ ಸೈಫ್ ನಿದ್ರಾಹೀನತೆಯಿಂದ ಬಳಲುತ್ತಿದ್ದರು. ನಿರ್ದೇಶಕ ಸೂರಜ್ ಬರ್ಜಾತ್ಯ, ಅಮೃತಾ ಸಿಂಗ್​ಗೆ ಸೈಫ್​ಗೆ ನಿದ್ರೆ ಮಾತ್ರೆ ನೀಡುವಂತೆ ಸೂಚಿಸಿದರು. ಇದರಿಂದ ಚಿತ್ರೀಕರಣ ಸುಗಮವಾಯಿತು. ಸೈಫ್ ಮತ್ತು ಅಮೃತಾ 2004ರಲ್ಲಿ ವಿಚ್ಛೇದನ ಪಡೆದರು.

ಕೆಲವು ಬಾಲಿವುಡ್​ ನಟರಂತೆ ಸೈಫ್​ ಅಲಿ ಖಾನ್​ಗೂ ಕರೀನಾ ಕಪೂರ್​ ಎರಡನೆಯ ಪತ್ನಿ. ಕುತೂಹಲದ ಸಂಗತಿ ಎಂದರೆ, ಇವರ ಮೊದಲ ಪತ್ನಿ ಅಮೃತಾ ಸಿಂಗ್​ ಕೂಡ ಹಿಂದೂವೇ ಆಗಿದ್ದರು. ಸೈಫ್​ ಮತ್ತು  ಅಮೃತಾ ಸಿಂಗ್  13 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಆದರೆ ಬಳಿಕ ಬೇರೆಯಾಗಲು ನಿರ್ಧರಿಸಿದರು. ಸೈಫ್ ಮತ್ತು ಅಮೃತಾ ಅಂತಿಮವಾಗಿ 2004 ರಲ್ಲಿ ವಿಚ್ಛೇದನ ಪಡೆದರು. ಆದಾಗ್ಯೂ, ಒಮ್ಮೆ ಅಮೃತಾ ಸಿಂಗ್ ತಮ್ಮ ಪತಿಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದರು ಎನ್ನುವ ವಿಷಯವನ್ನು  ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜತ್ಯ ಅವರೇ ಬಹಿರಂಗಪಡಿಸಿದ್ದರು. ಅದಕ್ಕೆ ಕಾರಣವನ್ನೂ ಅವರು ನೀಡಿದ್ದರು.
 
ಹಮ್ ಸಾಥ್ ಸಾಥ್ ಹೈ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಸೈಫ್ ಜೊತೆಗೆ ಕರಿಷ್ಮಾ ಕಪೂರ್, ಸಲ್ಮಾನ್ ಖಾನ್, ಸೋನಾಲಿ ಬೇಂದ್ರೆ, ಮೋಹ್ನಿಶ್ ಬಹ್ಲ್ ಮತ್ತು ಟಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರದ ನಿರ್ಮಾಪಕರು  ಸೂರಜ್ ಬರ್ಜತ್ಯ. ಆದರೆ ಎಷ್ಟೇ ಶಾಟ್​ ಪಡೆದರೂ, ರೀಟೇಕ್​ ಮಾಡಿದರೂ ಸೈಫ್​ ಅಲಿ ಅವರು ಅಗತ್ಯ ಇದ್ದ ರೀತಿಯಲ್ಲಿ ನಟನೆಯೇ ಮಾಡಿರಲಿಲ್ಲ. ರೀಟೇಕ್​ ಪಡೆದು ಪಡೆದು ಸಾಕಾಗಿ ಹೋಯಿತು. ಕೊನೆಗೆ ಇದಕ್ಕೆ ಕಾರಣ ಬಹಿರಂಗಗೊಂಡಿತ್ತು. ಸೈಫ್​ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ ಎನ್ನುವ ವಿಷಯ ತಿಳಿಯಿತು. ಅದಕ್ಕಾಗಿ ನಿದ್ದೆ ಮಾತ್ರೆಯನ್ನು ಕೊಡುವಂತೆ ನಿರ್ಮಾಪಕರು ಪತ್ನಿ ಅಮೃತಾಗೆ ಹೇಳಿದ್ದರಂತೆ!

ಸೈಫ್​ಗೆ ಇರಿತ- ಪಾರ್ಟಿ ಮೂಡ್​ನಲ್ಲಿ ಪತ್ನಿ ಕರೀನಾ! ಒಂದು ಗಂಟೆ- ಒಂದು ಕೋಟಿ ರೂ. ಬೇಡಿಕೆ? ನಡೆದಿದ್ದೇನು?

"'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣದ ಸಮಯದಲ್ಲಿ ಸೈಫ್ ಅಲಿ ಖಾನ್ ಅವರ ವೈಯಕ್ತಿಕ ಜೀವನವು ಬಹಳಷ್ಟು ಏರಿಳಿತಗಳನ್ನು ಹೊಂದಿತ್ತು. ಆದ್ದರಿಂದ ಅವರು ಯಾವಾಗಲೂ ಉದ್ವಿಗ್ನರಾಗಿದ್ದರು. ಚಿತ್ರದಲ್ಲಿನ 'ಸುನೋ ಜಿ ದುಲ್ಹನ್' ಹಾಡಿನ ಶೂಟಿಂಗ್​ ವೇಳೆ  ಸೈಫ್ ಅಲಿ ಖಾನ್ ಅನೇಕ ರೀಟೇಕ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರು ರಾತ್ರಿಯಿಡೀ ನಿದ್ದೆ ಮಾಡುತ್ತಿರಲಿಲ್ಲ, ಪಾತ್ರವನ್ನು ಉತ್ತಮ ರೀತಿಯಲ್ಲಿ ಹೇಗೆ ಚಿತ್ರಿಸಬೇಕೆಂದು ಯೋಚಿಸುತ್ತಿದ್ದರು. ನಾನು ಅವರ ಮೊದಲ ಪತ್ನಿಯೊಂದಿಗೆ ಮಾತನಾಡಿದಾಗ ನನಗೆ ಇದು ತಿಳಿಯಿತು. ಅದಕ್ಕಾಗಿ ನಿದ್ರೆ ಮಾತ್ರೆಗಳನ್ನು ನೀಡುವಂತೆ ಅಮೃತಾಗೆ ಹೇಳಿದ್ದೆ.  ಅದನ್ನು ಆಕೆ ಪಾಲನೆ ಮಾಡಿದರು.  ಸೈಫ್​ಗೆ ತಿಳಿಯದೆಯೇ  ನಿದ್ರೆ ಮಾತ್ರೆಗಳನ್ನು ನೀಡಿದರು. ಆ ಬಳಿಕ ಆ ಶೂಟಿಂಗ್​ ದೃಶ್ಯ ಚೆನ್ನಾಗಿ ಬಂತು.  ಹಾಡು ಒಂದೇ ಟೇಕ್‌ನಲ್ಲಿ ಉತ್ತಮ ಶಾಟ್ ನೀಡಿತು ಎಂದು ಕಾರಣ ಹೇಳಿದ್ದಾರೆ. 

ಹಮ್ ಸಾಥ್ ಸಾಥ್ ಹೈ ಬಗ್ಗೆ ಹೇಳುವುದಾದರೆ, ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ವಾಣಿಜ್ಯ ಯಶಸ್ಸನ್ನು ಕಂಡಿತು ಮತ್ತು ಭಾರತೀಯ ಚಿತ್ರರಂಗದಲ್ಲಿನ ಐಕಾನಿಕ್ ಚಿತ್ರಗಳಲ್ಲಿ ಒಂದಾಯಿತು. ಚಲನಚಿತ್ರಗಳ ಹೊರತಾಗಿ, ಸೈಫ್ ಅಲಿ ಖಾನ್ 2004 ರಲ್ಲಿ ಅಮೃತಾ ಸಿಂಗ್ ಅವರಿಂದ ವಿಚ್ಛೇದನ ಪಡೆದ ನಂತರ, 2012 ರಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರನ್ನು ವಿವಾಹವಾದರು. ದಂಪತಿಗಳು ತೈಮೂರ್ ಮತ್ತು ಜಹಾಂಗೀರ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. 

ಸೈಫ್‌ ಅಲಿ ಖಾನ್‌ ಕುಟುಂಬದಿಂದ ಪ್ರಧಾನಿ ಭೇಟಿ: ಮಕ್ಕಳಿಗಾಗಿ ಆಟೋಗ್ರಾಫ್‌, ಅಸಲಿ ಉದ್ದೇಶ ಇಲ್ಲಿದೆ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?