ದಾದಾ ಸಾಹೇಬ್ ಪ್ರಶಸ್ತಿ ಸ್ವೀಕರಿಸಲಾಗುತ್ತಿಲ್ಲ; ವಿಷಾದಿಸಿದ ಅಮಿತಾಭ್ ಬಚ್ಚನ್

By Suvarna News  |  First Published Dec 23, 2019, 1:04 PM IST

ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಬಾಲಿವುಡ್ ಬಿಗ್ ಬಿ ಆಯ್ಕೆಯಾಗಿದ್ದಾರೆ. ಆದರೆ ಅನಾರೋಗ್ಯದ ನಿಮಿತ್ತ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಭಾಗಿಯಾಗುತ್ತಿಲ್ಲ. ಇದಕ್ಕೆ ವಿಷಾದಿಸುತ್ತಾರೆ. 


ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜರಾಗಿದ್ದು ಅನಾರೋಗ್ಯದ ನಿಮಿತ್ತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುತ್ತಿಲ್ಲ.  

ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾ, ' ಜ್ವರದಿಂದ ಬಳಲುತ್ತಿದ್ದೇನೆ.  ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ. ದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ವಿಷಾದಿಸುತ್ತೇನೆ' ಎಂಡು ಟ್ವೀಟ್ ಮಾಡಿದ್ದಾರೆ. 

Tap to resize

Latest Videos

undefined

 

T 3584/5/6 -
Down with fever .. ! Not allowed to travel .. will not be able to attend National Award tomorrow in Delhi .. so unfortunate .. my regrets ..

— Amitabh Bachchan (@SrBachchan)

ದೆಹಲಿಯ ವಿಜ್ಞಾನ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಉಪಸ್ಥಿತರಿದ್ದಾರೆ. 

ಸಿಹಿ-ಕಹಿ ಚಂದ್ರು ಕಿರಿಯ ಪುತ್ರಿ 'ಖುಷಿ' ಹೀಗಿದ್ದಾರೆ ನೋಡಿ!

ಹಿಂದಿ ಚಲನಚಿತ್ರ ರಂಗಕ್ಕೆ ಅಮಿತಾಬ್ ಅಪಾರ ಕೊಡುಗೆಯನ್ನು ಪರಿಗಣಿಸಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಅಗ್ನಿಪಥ್, ಬ್ಲಾಕ್, ಪಾ ಹಾಗೂ ಪೀಕೂ ಸಿನಿಮಾಗಳಿಗೆ ನ್ಯಾಷನಲ್ ಫಿಲ್ಮ್ ಅವಾರ್ಡನ್ನು ಪಡೆದುಕೊಂಡಿದ್ದಾರೆ. 1984 ರಲ್ಲಿ ಪದ್ಮಶ್ರೀ ಪ್ರಶಸ್ತಿ, 2001 ರಲ್ಲಿ ಪದ್ಮಭೂಷಣ ಹಾಗೂ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದರು. 

ವಯಸ್ಸು ಫಾರ್ಟಿ ಪ್ಲಸ್; ಈ ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ!

ಸದ್ಯ ಆಯುಷ್ಮಾನ್ ಖುರಾನಾ ಜೊತೆ 'ಗುಲಾಬೋ ಸಿತಾವೋ' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 

ಡಿಸೆಂಬರ್ 23ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!