
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Bollywood Big B Amitabh Bachchan) ಸಿನಿಮಾ ಮಾತ್ರವಲ್ಲ ವೈಯಕ್ತಿಕ ವಿಷ್ಯ ಕೂಡ ಸದಾ ಸುದ್ದಿಯಲ್ಲಿರುತ್ತೆ. ಅಮಿತಾಭ್ ಬಚ್ಚನ್, ನಟಿ ಜಯಾ ಬಚ್ಚನ್ (Actress Jaya Bachchan) ಕೈ ಹಿಡಿದು ಅದೆಷ್ಟೋ ವರ್ಷ ಕಳೆದಿದೆ. ಆದ್ರೆ ಅಮಿತಾಭ್ ಬಚ್ಚನ್ ಅಫೇರ್ ಬಗ್ಗೆ ಈಗ್ಲೂ ಚರ್ಚೆಯಾಗ್ತಾನೆ ಇರುತ್ತೆ. ಅಮಿತಾಭ್ ಬಚ್ಚನ್, ಜಯಾ ಮದುವೆ ಆದ್ಮೇಲೆ, ನಟಿ ರೇಖಾ (Actress Rekha) ಪ್ರೀತಿಯಲ್ಲಿ ಬಿದ್ದಿದ್ರು, ಜಯಾ ಮಧ್ಯ ಪ್ರವೇಶದ ನಂತ್ರ ಇಬ್ಬರು ಬೇರೆಯಾದ್ರೂ ಎನ್ನುವ ಸುದ್ದಿ ಈಗ್ಲೂ ಆಸಕ್ತಿಕರವಾಗಿದೆ. ಈ ವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆ ಹಾಗೇ ಉಳಿದಿದ್ದು, ಅದನ್ನು ತಿಳಿಯಲು ಫ್ಯಾನ್ಸ್ ಈಗಲೂ ಉತ್ಸುಕರಾಗಿದ್ದಾರೆ. ಆದ್ರೆ ನಾವು ಈಗ ಹೇಳೋಕೆ ಹೊರಟಿರೋದು ಜಯಾ ಬಚ್ಚನ್ ಆಗ್ಲಿ ರೇಖಾ ಬಗ್ಗೆಯಾಗ್ಲಿ ಅಲ್ವೇ ಅಲ್ಲ. ಅಮಿತಾಭ್ ಬಚ್ಚನ್, ನಟಿಯೊಬ್ಬರಿಗೆ ಒಂದು ಲಾರಿ ಗುಲಾಬಿ ಹೂ ಕಳುಹಿಸಿದ್ರು. ಅವರು ಕಳುಹಿಸಿದ ಹೂ ನೋಡಿಯೂ ಬಗ್ಗದ ನಟಿ, ಷರತ್ತಿನ ಮೇಲೆ ಸಿನಿಮಾ ಒಪ್ಪಿಕೊಂಡಿದ್ದರು. ಅಷ್ಟಕ್ಕೂ ಅಮಿತಾಭ್ ಬಚ್ಚನ್ ಒಂದು ಲಾರಿ ಗುಲಾಬಿ ಹೂ ಕಳುಹಿಸಿದ ನಟಿ ಯಾರು? ಯಾಕೆ ಇಷ್ಟೆಲ್ಲ ಕಸರತ್ತು ಮಾಡಿದ್ರು ಎಂಬ ಮಾಹಿತಿ ಇಲ್ಲಿದೆ.
ಅಮಿತಾಭ್ ಬಚ್ಚನ್ ಜೊತೆ ನಟಿಸೋಕೆ ಅದೆಷ್ಟೋ ಹೀರೋಯಿನ್ಸ್ ತುದಿಗಾಲಿನಲ್ಲಿ ನಿಂತಿದ್ದ ಕಾಲವಿದು. ಆಗ ಮಾತ್ರವಲ್ಲ ಈಗ್ಲೂ ಅಮಿತಾಭ್ ಬಚ್ಚನ್ ಜೊತೆ ನಟಿಸೋಕೆ ಅವಕಾಶ ಸಿಕ್ಕಿದ್ರೆ ಯಾವುದೇ ನಟಿ ಒಲ್ಲೆ ಎನ್ನಲ್ಲ. ಆದ್ರೆ ಬಾಲಿವುಡ್ ದಿವಂಗತ ನಟಿ, ಮೋಹಕ ತಾರೆ ಶ್ರೀದೇವಿ (Sridevi) ಆಫರ್ ತಿರಸ್ಕರಿಸಿದ್ದರು. ಹೌದು, ಅಮಿತಾಭ್ ಜೊತೆ ಈಗಾಗಲೇ ಎರಡು ಸಿನಿಮಾ ಮಾಡಿದ್ದ ಶ್ರೀದೇವಿ ಮೂರನೇ ಸಿನಿಮಾದಲ್ಲಿ ನಟಿಸಲು ಒಪ್ಪರಲಿಲ್ಲ. ಅವರನ್ನು ಒಪ್ಪಿಸಲು ಅಮಿತಾಭ್, ಗುಲಾಬಿ ಹೂ ನೀಡಬೇಕಾಯ್ತು. ಒಂದೋ ಎರಡೋ ಅಲ್ಲ, ಅಮಿತಾಭ್ ಲಾರಿ ಪೂರ್ತಿ ಗುಲಾಬಿ ಹೂವನ್ನು ಕಳುಹಿಸಿದ್ದರು.
ಈ ಕಥೆ ಶುರುವಾಗೋದು 1992 ರಲ್ಲಿ. ಖುದಾ ಗವಃ (Khuda Gawah) ಚಿತ್ರಕ್ಕೆ ಹೀರೋ ಅಮಿತಾಭ್ ಆಯ್ಕೆ ನಡೆದಿತ್ತು. ಹೀರೋಯಿನ್ ಆಗಿ ಶ್ರೀದೇವಿಯವರನ್ನು ಆಯ್ಕೆ ಮಾಡಿಕೊಳ್ಳಲು ನಿರ್ದೇಶಕ ಮುಕುಲ್ ಎಸ್ ಆನಂದ್ ಮುಂದಾಗಿದ್ದರು. ಇದನ್ನು ಅಮಿತಾಭ್ ಬಚ್ಚನ್ ಬಳಿ ಹೇಳಿದ್ರು. ಈಗಾಗಲೇ ಎರಡು ಚಿತ್ರವನ್ನು ನನ್ನ ಜೊತೆ ಮಾಡಿರುವ ಶ್ರೀದೇವಿ ಮೂರನೇ ಸಿನಿಮಾ ಒಪ್ಪಿಕೊಳ್ಳೋದು ಅನುಮಾನ ಎಂದಿದ್ದರು ಬಚ್ಚನ್. ಅವರ ಮಾತು ಸತ್ಯವಾಗಿತ್ತು. ಶ್ರೀದೇವಿ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ರು. ಈ ಸಮಯದಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ಲಾರಿ ಪೂರ್ತಿ ಗುಲಾಬಿ ಹೂ ಕಳುಹಿಸಿದ್ದರು. ಇಷ್ಟಾದ್ರೂ ಒಂದು ಷರತ್ತಿನ ಮೇಲೆ ಶ್ರೀದೇವಿ ನಟನೆಗೆ ಒಪ್ಪಿಕೊಂಡಿದ್ದರು. ತಾಯಿ ಹಾಗೂ ಮಗಳ ಪಾತ್ರ ಎರಡನ್ನೂ ನನಗೆ ನೀಡಿದ್ರೆ ಮಾತ್ರ ಸಿನಿಮಾದಲ್ಲಿ ನಟಿಸಲು ಸಿದ್ಧ ಎಂದು ಶ್ರೀದೇವಿ ಹೇಳಿದ್ದರು. ಅವರ ಷರತ್ತಿಗೆ ನಿರ್ದೇಶಕ ಮುಕುಲ್ ಎಸ್ ಆನಂದ್ ಒಪ್ಪಿದ್ದರು.
ಅಮಿತಾಭ್ ಬಚ್ಚನ್ ಹಾಗೂ ಶ್ರೀದೇವಿ ನಟಿಸಿದ ಖುದಾ ಗವಃ, ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಚಿತ್ರವನ್ನು 5.7 ಕೋಟಿ ರೂಪಾಯಿಗಳ ಬಜೆಟ್ನಲ್ಲಿ ನಿರ್ಮಿಸಲಾಗಿತ್ತು. 1992ರ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಯ್ತು ಖುದಾ ಗವಃ ಈ ಸಿನಿಮಾದಲ್ಲಿ ದಕ್ಷಿಣದ ಸೂಪರ್ಸ್ಟಾರ್ ನಾಗಾರ್ಜುನ ಕೂಡ ನಟಿಸಿದ್ದರು. ಶ್ರೀದೇವಿ ಮತ್ತು ಅಮಿತಾಭ್ ಬಚ್ಚನ್ 1984 ರಲ್ಲಿ ಇಂಕ್ವಿಲಾಬ್ ಮತ್ತು 1986ರಲ್ಲಿ ಆಖ್ರಿ ರಾಸ್ತಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.