ಚಿಕ್ಕಪ್ಪ ಎಂದು ಕರೆದ ಸ್ಟಾರ್‌ ನಟನೊಂದಿಗೆ ರೊಮ್ಯಾನ್ಸ್ ಮಾಡಿದ್ರು ಸೂಪರ್‌ಸ್ಟಾರ್‌ ನಟಿ!

Published : May 02, 2025, 04:58 PM ISTUpdated : May 02, 2025, 05:51 PM IST
ಚಿಕ್ಕಪ್ಪ ಎಂದು ಕರೆದ ಸ್ಟಾರ್‌ ನಟನೊಂದಿಗೆ ರೊಮ್ಯಾನ್ಸ್ ಮಾಡಿದ್ರು ಸೂಪರ್‌ಸ್ಟಾರ್‌ ನಟಿ!

ಸಾರಾಂಶ

೭೦-೮೦ರ ದಶಕದ ಖ್ಯಾತ ನಟಿ ಮೌಶುಮಿ ಚಟರ್ಜಿ, ಜೀತೇಂದ್ರ ಜೊತೆಗಿನ ಜೋಡಿಗೆ ಹೆಸರುವಾಸಿ. "ಪ್ರೇಮ್ ಬಂಧನ್", "ಸೌತನ್ ಕಿ ಬೇಟಿ" ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿ, ಶಶಿ ಕಪೂರ್‌ರಂತಹ ಹಿರಿಯ ನಟರೊಂದಿಗೆ ರೋಮ್ಯಾಂಟಿಕ್‌ ಪಾತ್ರಗಳಲ್ಲಿ ನಟಿಸಿದ್ದಾರೆ. ಮದುವೆಯ ನಂತರವೂ ಚಿತ್ರರಂಗದಲ್ಲಿ ಮುಂದುವರೆದರು.

ಬಾಲಿವುಡ್‌ ನಟಿ ಮೌಶುಮಿ ಚಟರ್ಜಿ ಯಾರಿಗೆ ಗೊತ್ತಿಲ್ಲ. ಜೀತೇಂದ್ರ ಹಾಗೂ ಮೌಶುಮಿ ಚಟರ್ಜಿ ಜೋಡಿ ಬಾಲಿವುಡ್‌ನ ಸೂಪರ್‌ಹಿಟ್‌ಜೋಡಿಗಳಲ್ಲಿ ಒಂದು. ಬಾಲಿವುಡ್‌ನ ಸುಪ್ರಸಿದ್ಧ ಸಿನಿಮಾಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದರು. ಮೌಶುಮಿ ಚಟರ್ಜಿ 70-80ರ ದಶಕದ ಸೂಪರ್‌ ಹಿಟ್‌ ನಟಿ. ಅವರ ಕೆಲಸ ಮಾಡುವ ರೀತಿಯೇ ಭಿನ್ನವಾಗಿತ್ತು. ಅವರ ವೃತ್ತಿಜೀವನದಲ್ಲಿ ಬಹುತೇಕ ಎಲ್ಲಾ ನಟರೊಂದಿಗೆ ಕೆಲಸ ಮಾಡಿದ ಶ್ರೇಯ ಹೊಂದಿದ್ದಾರೆ. 

1970 ಮತ್ತು 80 ರ ದಶಕಗಳಲ್ಲಿ ಮೌಶುಮಿ ಚಟರ್ಜಿ ಅನ್ನೋ ಹೆಸರೇ ಒಂದು ಸಂಚಲನ. ಆ ಕಾಲದ ಎಲ್ಲಾ ಸ್ಟಾರ್‌ ನಟಿಯರಿಗೆ ಸಖತ್‌ ಪೈಪೋಟಿ ನೀಡಿದ್ದ ನಟಿ ಈಕೆ. ಆದರೆ, ಈಕೆಯ ಆರಂಭಿಕ ಸಿನಿಮಾ ಜೀವನ ಕಷ್ಟದಿಂದಲೇ ಕೂಡಿತ್ತು. ಆದರೆ, ತಮ್ಮ ಪ್ರತಿಭೆ ಹಾಗೂ ನಟನಾ ಕೌಶಲದಿಂದ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅದರಲ್ಲೂ ಜೀತೇಂದ್ರ ಜೊತೆಗಿನ ಇವರ ಒಂದೊಂದು ಚಿತ್ರವೂ ಅಮೋಘ. ಅವರೊಂದಿಗಿನ  'ಪ್ರೇಮ್ ಬಂಧನ್', 'ಸೌತನ್ ಕಿ ಬೇಟಿ', 'ಹಮ್ಶಕಲ್', 'ಪ್ಯಾರ್ ಕಾ ರಿಶ್ತಾ' ಮುಂತಾದ ಹಲವು ಚಿತ್ರಗಳು ಸೂಪರ್‌ ಹಿಟ್‌ ಆಗಿದ್ದವು. ಇವರ ಸೌಮ್ಯ ನಗುವನ್ನು ನೋಟುವ ಕಾರಣಕ್ಕಾಗಿಯೇ ಥಿಯೇಟರ್‌ಗೆ ಜನರು ಬರುವಷ್ಟು ಹುಚ್ಚರಾಗಿದ್ದರು. ಆದರೆ, ಈಕೆ ಮಾತ್ರ ವಿನೋದ್‌ ಖನ್ನಾ ಅವರ ಲುಕ್‌ಗೆ ಫಿದಾ ಆಗಿದ್ದರು.



ಹೀಗಿದ್ದ ಮೌಶುಮಿ ಚಟರ್ಜಿ, ಸೂಪರ್‌ಸ್ಟಾರ್‌ ಶಶಿ ಕಪೂರ್‌ ಅವರನ್ನು ಚಿಕ್ಕಪ್ಪ (ಕಾಕಾ) ಎಂದೇ ಸಿನಿಮಾ ಸೆಟ್‌ನಲ್ಲಿ ಕರೆಯುತ್ತಿದ್ದರು. ಹೀಗೆ ಚಿಕ್ಕಪ್ಪ ಎಂದು ಕರೆದ ವ್ಯಕ್ತಿಯೊಂದಿಗೆ ಇವರು ರೋಮ್ಯಾಂಟಿಕ್‌ ಸೀನ್‌ಗಳಲ್ಲಿ ಭಾಗಿಯಾಗಿದ್ದರು.

ಬಾಲಿಕಾ ವಧು ಸಿನಿಮಾದಲ್ಲಿ ನಟಿಸುವಾಗ ಮೌಶುಮಿ ಚಟರ್ಜಿ ಅಕ್ಷರಶಃ ಬಾಲಕಿಯೇ ಆಗಿದ್ದರು. ಈ ಸಿನಿಮಾದ ಬೆನ್ನಲ್ಲಿಯೇ ಅವರ ಮದುವೆಯೂ ಆಗಿ ಹೋಯಿತು. ಆದರೆ, ಸಿನಿಮಾವನ್ನು ಪ್ರೀತಿ ಮಾಡುತ್ತಿದ್ದ ಕುಟುಂಬಕ್ಕೆ ಈಕೆ ಮದುವೆಯಾಗಿದ್ದ ಕಾರಣ, ಮದುವೆಯ ನಂತರವೂ ಮೌಶುಮಿ ಚಟರ್ಜಿ ನಟನೆ ಮಾಡೋದನ್ನು ಮುಂದುವರಿಸಿದ್ದರು. ಇಷ್ಟು ಮಾತ್ರವಲ್ಲ, ಮದುವೆಯಾದ ಬಳಿಕ ಆಕೆ ಸಿನಿಮಾಗಳಿಗೆ ಹೀರೋಯಿನ್‌ ಆಗಿ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾ ನೀಡಿದ್ದರು.

ಅವರು ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಾಗ, ಆ ಸಮಯದಲ್ಲಿ ಅವರು ತುಂಬಾ ಚಿಕ್ಕವರಾಗಿದ್ದರು; ಆ ಹೊತ್ತಿಗೆ, ಅನೇಕ ತಾರೆಯರು ಅವರಿಗಿಂತ ಮೊದಲೇ ಉದ್ಯಮದಲ್ಲಿ ತಮ್ಮ ಹಿಡಿತ ಸಾಧಿಸಿದ್ದರು.

ಈ ಹಂತದಲ್ಲಿ ದಿ ಕಪಿಲ್‌ ಶರ್ಮ ಶೋನಲ್ಲಿ ಮೌಶುಮಿ ಒಂದು ತಮಾಷೆಯ ವಿಚಾರ ಹಂಚಿಕೊಂಡಿದ್ದಾರೆ. 'ನಾನು ಚಿತ್ರರಂಗಕ್ಕೆ ಬಂದಾಗ ಬಹುತೇಕ ಎಲ್ಲಾ ನಾಯಕರು ಅದಾಗಲೇ ದೊಡ್ ಸ್ಟಾರ್‌ಗಳಾಗಿದ್ದರು. ಅವರನ್ನು ಗೌರವದಿಂದ ನೋಡುತ್ತಿದ್ದೆ. ಅವರಲ್ಲಿ ಶಶಿ ಕಪೂರ್ ಕೂಡ ಒಬ್ಬರು. ನಾನು ಶಶಿ ಕಪೂರ್ ಅವರನ್ನು ಚಿಕ್ಕಪ್ಪ ಎಂದೇ ಸೆಟ್‌ನಲ್ಲಿ ಕರೆಯುತ್ತಿದೆ. ಈ ನಡುವೆ, 'ನೈನಾ' ಚಿತ್ರದಲ್ಲಿ ನಾವಿಬ್ಬರು  ಒಟ್ಟಿಗೆ ನಟಿಸಬೇಕಿತ್ತು. ಅದೂ ಕೂಡ ರೊಮ್ಯಾಂಟಿಕ್‌ ಸೀನ್‌ನಲ್ಲಿ. ಈ ಹಂತದಲ್ಲಿ ಶಶಿ ಕಪೂರ್‌ ಒಮ್ಮೆ ನನಗೆ ಕರೆ ಮಾಡಿ, ಹಾಡು ತುಂಬಾ ರೋಮ್ಯಾಂಟಿಕ್ ಆಗಿದೆ, ಸೆಟ್‌ನಲ್ಲಿ ನನ್ನನ್ನು 'ಕಾಕಾ' ಎಂದು ಕರೆಯಬೇಡಿ ಶಶಿಜಿ ಎಂದು ಕರೆಯಿರಿ ಎಂದಿದ್ದರು. ಅದಕ್ಕೆ ನಾನು ನಕ್ಕು ಹು ಎಂದು ತಲೆಯಾಡಿಸಿದೆʼ ಎಂದು ನಟಿ ಮೌಶುಮಿ ಹೇಳಿಕೊಂಡಿದ್ದಾರೆ.  ಅದಾದ ಬಿಕ ಹಲವು ಸಿನಿಮಾಗಳಲ್ಲಿ ನಾವು ರೋಮ್ಯಾಂಟಿಕ್‌ ಸೀನ್‌ಳಲ್ಲಿ ಭಾಗಿಯಾಗಿದ್ದೆವು ಎಂದು ತಿಳಿಸಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?