ಬಾಂಬ್ ಬೆದರಿಕೆ ನಡುವೆ ಬುಲೆಟ್‌ಪ್ರೂಫ್ ಗ್ಲಾಸ್ ಹಿಂದೆ ನಿಂತು ಅಭಿಮಾನಿಗಳಿಗೆ ದರ್ಶನ ನೀಡಿದ ಬಿಗ್ ಬಿ!

Published : Nov 02, 2026, 04:28 PM IST
Amitabh Bachchan

ಸಾರಾಂಶ

Amitabh Bachchan: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಇತ್ತೀಚೆಗೆ ಬಂದ ಬಾಂಬ್ ಬೆದರಿಕೆಗೂ ಜಗ್ಗದೆ ಭಾನುವಾರ ತಮ್ಮ ನಿವಾಸ ‘ಜಲ್ಸಾ’ದಿಂದ ಹೊರಬಂದು ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಈ ಬಾರಿ ಬಿಗಿ ಭದ್ರತೆಯ ನಡುವೆ ಬುಲೆಟ್‌ಪ್ರೂಫ್ ಗಾಜಿನ ಹಿಂದಿನಿಂದಲೇ ಅಭಿಮಾನಿಗಳಿಗೆ ಕೈಬೀಸಿ ಅಭಿನಂದನೆ ಸಲ್ಲಿಸಿದ್ದಾರೆ.

ಅಮಿತಾಬ್ ಬಚ್ಚನ್ ಮನೆಗೆ ಬಾಂಬ್ ಬೆದರಿಕೆ

ಇತ್ತೀಚೆಗೆ ಮುಂಬೈ ಮೇಯರ್ ಋತು ತಾವಡೆ ಅವರಿಗೆ ಇಮೇಲ್ ಮೂಲಕ ಅಮಿತಾಭ್ ಬಚ್ಚನ್ ಅವರ ನಿವಾಸ ‘ಜಲ್ಸಾ’ವನ್ನು ಬಾಂಬ್‌ನಿಂದ ಸ್ಫೋಟಿಸುವುದಾಗಿ ಬೆದರಿಕೆ ಬಂದಿತ್ತು. ಇದರ ಜೊತೆಗೆ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೂ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಗ್ ಬಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಜಲ್ಸಾ ನಿವಾಸದ ಹೊರಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅಮಿತಾಭ್ ಬಚ್ಚನ್ ಬುಲೆಟ್‌ಪ್ರೂಫ್ ಗಾಜಿನ ಹಿಂದಿನಿಂದ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.

ಬೆದರಿಕೆ ಇಮೇಲ್‌ನಲ್ಲಿ ಏನಿತ್ತು?

ಮುಂಬೈ ಮೇಯರ್ ಋತು ತಾವಡೆ ಅವರಿಗೆ ಬಂದ ಬೆದರಿಕೆ ಇಮೇಲ್‌ನಲ್ಲಿ ಬೃಹತ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮುಖ್ಯ ಕಚೇರಿಯಲ್ಲಿರುವ ಮೇಯರ್ ಕಚೇರಿಯಲ್ಲಿ ಮಧ್ಯಾಹ್ನ 3:11ಕ್ಕೆ ಸ್ಫೋಟ ಸಂಭವಿಸಲಿದೆ ಎಂದು ಹೇಳಲಾಗಿತ್ತು. ಬಳಿಕ ಕಚೇರಿ ಆವರಣದಲ್ಲಿ ತಪಾಸಣೆ ನಡೆಸಿದರೂ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ. ಈ ಬೆದರಿಕೆಗಳ ಬಳಿಕ ಪೊಲೀಸ್ ಆಡಳಿತ ಇನ್ನಷ್ಟು ಎಚ್ಚರಿಕೆ ವಹಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನೂ ಪರಿಶೀಲಿಸಲಾಗುತ್ತಿದೆ. ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿಯೂ ಭದ್ರತೆ ಹೆಚ್ಚಿಸಲಾಗಿದೆ.

ಬಿಗ್ ಬಿ ಭದ್ರತೆ ಹೆಚ್ಚಳ

ಬಾಂಬ ಬೆದರಿಕೆಯ ನಡುವೆಯೂ ಅಮಿತಾಭ್ ಬಚ್ಚನ್ ಪ್ರತಿ ಭಾನುವಾರ ಅಭಿಮಾನಿಗಳನ್ನು ಭೇಟಿಯಾಗುವ ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಆದರೆ ಈ ಬಾರಿ ಅವರ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು. ಅವರ ಪುತ್ರ ಅಭಿಷೇಕ್ ಬಚ್ಚನ್ ಕೂಡ ಅವರ ಜೊತೆಗಿದ್ದರು.

ಪೊಲೀಸರ ಪ್ರಕಾರ, ಉಪ ಮೇಯರ್ ಸಂಜಯ್ ಘಾಡಿ ಅವರಿಗೂ ಕಳುಹಿಸಲಾದ ಇಮೇಲ್‌ನಲ್ಲಿ ಅಕ್ಟೋಬರ್ 31ರಂದು ಶಾಲೆಯೊಂದರ ಮೇಲೆ ಗ್ರೆನೇಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಅಕ್ಟೋಬರ್ 31ರಿಂದ ನವೆಂಬರ್ 27ರ ನಡುವೆ ಅಮಿತಾಭ್ ಬಚ್ಚನ್ ಅವರ ಜುಹು ನಿವಾಸ ‘ಜಲ್ಸಾ’ವನ್ನು ಗುರಿಯಾಗಿಸುವುದಾಗಿಯೂ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿತ್ತು. ಈ ಇಮೇಲ್‌ನಲ್ಲಿ ‘ಖಲಿಸ್ತಾನ್’ ಎಂಬ ಪದವೂ ಕಾಣಿಸಿಕೊಂಡಿತ್ತು. ನವೆಂಬರ್ 27ರಂದು ಮಹಾಲಕ್ಷ್ಮಿ ರೇಸ್‌ಕೋರ್ಸ್ ಪ್ರದೇಶದಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ವೇಳೆ ದಾಳಿ ನಡೆಸುವುದಾಗಿ ಕೂಡ ಬೆದರಿಕೆ ನೀಡಲಾಗಿತ್ತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಡುಗಡೆಗೆ ಮೊದಲೇ 'ರಾಮಾಯಣ' ಚಿತ್ರದ 'ರಾಮ-ರಾವಣ'ರ ಬಹುದೊಡ್ಡ ಸೀಕ್ರೆಟ್ ಹೇಳಿಬಿಟ್ಟ ಯಶ್! ಇದೇ ಬೇಕಾಗಿರೋದು!
ರಾಮಾಯಣ ಚಿತ್ರಕ್ಕಾಗಿ ಯಶ್ ಸಂಭಾವನೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ..! ಸಂಪೂರ್ಣ ಸಂಭಾವನೆ ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ದೇಣಿಗೆ ಕೊಟ್ಟ ಈ ನಟ