ಮಧ್ಯರಾತ್ರಿ ಬರುವ ಬ್ರೆಸ್ಟ್ ಪಂಪ್ ಸೌಂಡ್‌ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು? ಗಮನ ಸೆಳೆದ ಮೀಮ್ಸ್

Published : Oct 31, 2026, 10:05 AM IST
Deepika Padukone

ಸಾರಾಂಶ

ತಾಯ್ತನ ಎಂಜಾಯ್‌ ಮಾಡ್ತಿರುವ ನಟಿ ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್‌ ನಲ್ಲಿ ಸ್ಟೋರಿ ಒಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಬ್ರೆಸ್ಟ್‌ ಪಂಪ್‌ ಬಗ್ಗೆ ಅವರು ಹಾಕಿದ ಮೀಮ್‌ ಎಲ್ಲರ ಗಮನ ಸೆಳೆದಿದೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ತಮ್ಮ ಮಾತೃತ್ವದ ಸುಂದರ ಕ್ಷಣಗಳನ್ನು ಎಂಜಾಯ್ ಮಾಡ್ತಿದ್ದಾರೆ. ಇತ್ತೀಚೆಗೆ ಎರಡನೇ ಮಗುವಿಗೆ ಜನ್ಮ ನೀಡಿರುವ ದೀಪಿಕಾ ಪಡುಕೋಣೆ, ಮಗಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಹಲವು ಮಜವಾದ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ದೀಪಿಕಾ ಈಗ ಮತ್ತೊಂದು ಪೋಸ್ಟ್‌ ಮೂಲಕ ಎಲ್ಲರನ್ನು ನಗಿಸಿದ್ದಾರೆ.

ದೀಪಿಕಾ ಹಂಚಿಕೊಂಡ ತಮಾಷೆಯ ಪೋಸ್ಟ್ ಏನು?

ದೀಪಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬ್ರೆಸ್ಟ್ ಪಂಪ್ಗೆ ಸಂಬಂಧಿಸಿದ ತಮಾಷೆಯ ಮೀಮ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬ್ರೆಸ್ಟ್ ಪಂಪ್ನಿಂದ ಬರುವ ಶಬ್ದವನ್ನು ಅವರು ಭಯಾನಕ ಶಬ್ಧಕ್ಕೆ ಹೋಲಿಕೆ ಮಾಡಿದ್ದಾರೆ. ಮಧ್ಯರಾತ್ರಿ ಬ್ರೆಸ್ಟ್ ಪಂಪ್ನಿಂದ ಕೇಳಿಬರುವ ಸೌಂಡ್, ಯಾವುದೋ ದೆವ್ವದ ಮನೆಯಲ್ಲಿ ಕೇಳಿಸುವ ಭಯಾನಕ ಶಬ್ದದಂತಿರುತ್ತದೆ ಎಂದು ಮೀಮ್ನಲ್ಲಿ ತಮಾಷೆ ಮಾಡಿದ್ದಾರೆ.

ವಿಡಿಯೋದಲ್ಲಿರುವ ಸಾಲುಗಳು ಕೂಡ ಸಖತ್ ಫನ್ನಿಯಾಗಿವೆ. ಭೂತದ ಮನೆಯಲ್ಲ, ಇದು ಮಧ್ಯರಾತ್ರಿ ನಿಮ್ಮ ಬ್ರೆಸ್ಟ್ ಪಂಪ್ನಿಂದ ಬರುವ ಶಬ್ದ ಎಂಬ ಅರ್ಥದ ಮೀಮ್ ಅನ್ನು ದೀಪಿಕಾ ಹಂಚಿಕೊಂಡಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳ ತಾಯಿ ದೀಪಿಕಾ

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2018ರ ನವೆಂಬರ್ 14ರಂದು ಕೊಂಕಣಿ ಹಾಗೂ ಸಿಂಧಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಮದುವೆಯಾದ ಸುಮಾರು ಆರು ವರ್ಷಗಳ ಬಳಿಕ, 2024ರ ಸೆಪ್ಟೆಂಬರ್ನಲ್ಲಿ ಈ ಜೋಡಿ ಮೊದಲ ಮಗಳು ದುವಾಳನ್ನು ಸ್ವಾಗತಿಸಿತ್ತು. ಇದೀಗ 2026ರ ಸೆಪ್ಟೆಂಬರ್ 19ರಂದು ದಂಪತಿಗೆ ಎರಡನೇ ಹೆಣ್ಣು ಮಗು ಜನಿಸಿದೆ. ತಮ್ಮ ಎರಡನೇ ಮಗಳಿಗೆ ದೇವಿ ಪಡುಕೋಣೆ ಸಿಂಗ್ ಎಂದು ಹೆಸರಿಟ್ಟಿದ್ದಾರೆ.

ಮಾತೃತ್ವದ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿ

ಮಾತೃತ್ವದ ಸಂಭ್ರಮದಲ್ಲಿರುವ ದೀಪಿಕಾ, ತಮ್ಮ ಸಿನಿಮಾ ಕೆಲಸಗಳನ್ನೂ ಮುಂದುವರಿಸುತ್ತಿದ್ದಾರೆ. ಸದ್ಯ ಅವರು ಎರಡು ಬಹುನಿರೀಕ್ಷಿತ ಸಿನಿಮಾಗಳ ಮೂಲಕ ಸುದ್ದಿಯಲ್ಲಿದ್ದಾರೆ. ಶಾರುಖ್ ಖಾನ್ ಜೊತೆಗಿನ ಕಿಂಗ್ ಸಿನಿಮಾ ಈ ವರ್ಷದ ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ, ಅಲ್ಲು ಅರ್ಜುನ್ ಜೊತೆ ರಾಕಾ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ: 'ನಟ ಸಾರ್ವಭೌಮ' ನಟಿ ಭಾವುಕ!