
ಹಿಂದಿ ಸೋನಿ ಟಿವಿಯಲ್ಲಿ (Sony Tv) ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್‌ಪತಿ ಸೀಸನ್ (Kaun Banega Crorepati) 13 ಪ್ರಸಾರವಾಗುತ್ತಿದೆ. ನವೆಂಬರ್ ಕೊನೆ ವಾರದಲ್ಲಿ ಪ್ರಸಾರವಾದ ಸ್ಟುಡೆಂಟ್ ಸ್ಪೆಷಲ್ ವೀಕ್ (Student Special Week) ಎಪಿಸೋಡ್‌ನಲ್ಲಿ ಹಿಮಾಚಲ ಪ್ರದೇಶದ ಅರುಣೋದಯ್ ಶರ್ಮಾ ಭಾಗವಹಿಸಿದ್ದ. ಈ 9 ವರ್ಷದ ಪುಟ್ಟ ಮಾತಿನ ಮಲ್ಲ 90 ವರ್ಷದವರಂತೆ ಮಾತನಾಡಿ, ಅಮಿತಾಭ್ ಬಚ್ಚನ್‌ಗೆ (Amitabh Bachchan) ಹೊಟ್ಟೆ ನೋವು ಬರುಷ್ಟು ನಗಿಸಿದ್ದಾರಂತೆ. ತಪ್ಪದೇ ಈ ಎಪಿಸೋಡ್ ನೋಡಿ ಎಂದು ಅಮಿತಾಭ್ ಟ್ಟೀಟ್ ಮಾಡಿದ್ದಾರೆ.
ಟ್ಟಿಟರ್‌ನಲ್ಲಿ (Twitter) ಆ್ಯಕ್ಟಿವ್ ಆಗಿರುವ ಬಚ್ಚನ್ ಸಾಮಾನ್ಯವಾಗಿ ಪ್ರಸಾರವಾಗುವ ಮುನ್ನ ಯಾವ ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳುವುದಿಲ್ಲ. ಆದರೆ ಈ ಫನ್ ಎಪಿಸೋಡ್ (Episode) ಬಗ್ಗೆ ಚಿತ್ರೀಕರಣವಾದ ಮುರು ದಿನವೇ ಬರೆದುಕೊಂಡಿದ್ದರು. 'ಇದು ನಾನು ಈವರೆಗೂ ಮಾಡಿಲ್ಲ. ಆದರೆ ಇದರ ಬಗ್ಗೆ ಬರೆಯದೇ ಇರುವುದಕ್ಕಾಗಿಲ್ಲ. ದಯವಿಟ್ಟು ಈ 9 ವರ್ಷದ ಹುಡುಗನ ಕೆಬಿಸಿ ಎಪಿಸೋಡ್ ನೋಡುವುದನ್ನು ಮಿಸ್ ಮಾಡಬೇಡಿ. ಎಂದೂ ನೋಡಿರದ ಎಪಿಸೋಡ್ ಇದು,' ಎಂದು ಟ್ಟೀಟ್ ಮಾಡಿದ್ದರು.
ಅರುಣೋದಯ್ (Arunoday) ಹಾಟ್ ಸೀಟ್‌ನಲ್ಲಿ ಕುಳಿತುಕೊಳ್ಳುವುದಕ್ಕೆ ಆಯ್ಕೆ ಆಗುತ್ತಿದ್ದಂತೆ, ನೃತ್ಯ ಹೆಜ್ಜೆ ಹಾಕಿದ್ದಾನೆ, ಅದನ್ನು ನೋಡಿ ಬಚ್ಚನ್ ಸಖತ್ ಎಂಜಾಯ್ ಮಾಡಿದ್ದಾರೆ. ಮಿಸ್ಟರ್ ಬಚ್ಚನ್ ಜೊತೆ ಆಟವಾಡುವಾಗ ಅರುಣೋದಯ್ ತಮ್ಮ ಮನೆಯವರು ಹೇಗಿದ್ದಾರೆ, ತನ್ನ ಇಷ್ಟಗಳು ಏನು? ಯಾಕೆ ಇಷ್ಟೊಂದು ಮಾತನಾಡುತ್ತಾನೆ? ದೊಡ್ಡವನಾದಾಗ ಏನು ಆಗಬೇಕು? ತನ್ನ ಆಸೆಗಳು ಏನು ಎಂದು ಮಾತನಾಡಿದ್ದಾನೆ, 'ನನ್ನ ಕನಸುಗಳು ಆಗಾಗ ಬದಲಾಗುತ್ತವೆ. ನಾನು ಉದ್ಯಮಿ (Business Man) ಸಿನಿಮಾ ನೋಡಿದ ಕೂಡಲೇ ಉದ್ಯಮಿಯಾಗಬೇಕು ಅನಿಸುತ್ತದೆ. ಐಎಎಸ್ ಆಫೀಸರ್ (IAS Officer)ಗೆ ಸಂಬಂಧಿಸಿದ ಕಾರ್ಯಕ್ರಮ ನೋಡಿದರೆ, ಐಎಎಸ್ ಆಫೀಸರ್ ಆಗಬೇಕು ಅನಿಸುತ್ತದೆ. ಹೀಗಾಗಿ ನನಗೆ ಗೊತ್ತಾಗೋಲ್ಲ. ಏನ್ ಅಂದ್ರೆ ನನ್ನ ಹೈಟ್ ನನಗೆ ಇಷ್ಟ ಇಲ್ಲ,' ಎಂದು ಹಾಟ್ ಸೀಟ್‌ನಲ್ಲಿ ಕುಳಿತು ಪಟ ಪಟ ಅಂತ ಮಾತನಾಡಿದ್ದಾನೆ.
'ನನ್ನ ಬಳಿ 5 ಸಾವಿರ ರೂಪಾಯಿ ಇದೆ. ನನಗೇನು ಕೌನ್ ಬನೇಗಾ ಕರೋಡ್ ಪತಿಗೆ ಬರಬೇಕು ಅಂತಿರಲಿಲ್ಲ. 20 ರೂಪಾಯಿಯನ್ನು ಜೇಬಿನಲ್ಲಿ (Pocket) ಇಟ್ಟುಕೊಂಡು ತಿರುಗುವುದರಲ್ಲಿ ಮಜಾ ಬರಲ್ಲ. ಅದಕ್ಕೆ ಇಲ್ಲಿಗೆ ಬಂದೆ, ಆಯ್ಕೆ ಆಗಿದ್ದೇನೆ. ಆಟನೂ ಆಡ್ತೀನಿ,' ಎಂದು ಅರುಣೋದಯ್ ಹೇಳಿದಾಗ ಬಚ್ಚನ್ ಸಿಕ್ಕಾಪಟ್ಟೆ ನಕ್ಕಿದ್ದಾರೆ. ಅಮಿತಾಭ್ ಎದುರಿಗಿದ್ದಾಗ ಸ್ಪರ್ಧಿಗಳು ಹೇಗೆ ಗಾಬರಿ ಆಗುತ್ತಾರೆ, ಮಾತನಾಡಲು ಪದಗಳ ಹೊರಡುವುದಿಲ್ಲ, ಎಂದು ಅರುಣೋದಯ್ ಮಿಮಿಕ್ರಿ ಮಾಡಿ ತೋರಿಸಿದ್ದಾನೆ.
ಪ್ರತಿಷ್ಠಿತ St.Edward ಶಾಲೆಯಲ್ಲಿ ಅರುಣೋದಯ್ ನಾಲ್ಕನೇ ತರಗತಿ ಓದುತ್ತಿದ್ದಾನೆ. ತಂದೆ ಜಗದೀಶ್ ಶರ್ಮಾ (Jagadish Sharma) ಮತ್ತು ತಾಯಿ ಮಮತಾ ಪೌಲ್ (Mamata Paul) ಶೋಗೆ ಆಗಮಿಸಿದ್ದರು. ಅರುಣೋದಯ ಶರ್ಮಾ ಅವರ ತಂದೆ ಜಗದೀಶ್ ಶರ್ಮಾ ಜಿಲ್ಲಾ ಖಜಾನೆ ಅಧಿಕಾರಿಯಾಗಿದ್ದು, ತಾಯಿ ಮಮತಾ ಪಾಲ್ ಶರ್ಮಾ ಶಿಮ್ಲಾ ಅರ್ಬನ್‌ನ ಸಿಡಿಪಿಒದಲ್ಲಿ (CDPO) ಉದ್ಯೋಗಿಯಾಗಿದ್ದಾರೆ. ಖಾಸಗಿ ಮಾಧ್ಯಮಗಳು ಮಮತಾ ಅವರನ್ನು ಮಾತನಾಡಿಸಲು ಯತ್ನಿಸಿದ್ದಾರೆ.ಆದರೆ ಕಂಪನಿಯ ನಿಯಮಗಳ ಪ್ರಕಾರ ಅವರು ಕೆಬಿಸಿ ಎಪಿಸೋಡ್‌ಗಳು ಪ್ರಸಾರ ಮತ್ತು ಎರಡು ಸಲ ಮರು ಪ್ರಸಾರ ಆಗುವವರೆಗೂ ಏನೂ ಪ್ರತಿಕ್ರಿಯೆ ಅಥವಾ ಹೇಳಿಕೆ ನೀಡುವಂತಿಲ್ಲ, ಎಂದಿದ್ದಾರೆ. ಆದರೆ ಇಡೀ ಕುಟುಂಬ ಮಿಸ್ಟರ್ ಬಚ್ಚನ್ ಭೇಟಿ ಮಾಡಿದ್ದಕ್ಕೆ ಸಂತೋಷವಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.