
ಸಮಂತಾ ರುಥ್ ಪ್ರಭು(Samantha Ruth Prabhu) ನಾಗಚೈತನ್ಯ(Naga chaitanya) ಅವರಿಂದ ಬೇರ್ಪಟ್ಟು ಆಗಲೇ ಎರಡು ತಿಂಗಳಾಯಿತು. ವಿಚ್ಚೇದನೆಯಾಗಿ ಕೆಲವೇ ದಿನಗಳಲ್ಲಿ ನಾಗ ಚೈತನ್ಯ ಅವರು ತಮ್ಮ ಲವ್‌ಸ್ಟೋರಿ(Love story) ಸಿನಿಮಾ ಸಂಬಂಧ ಬ್ಯುಸಿಯಾಗಿದ್ದರು. ನಟಿ ಸಮಂತಾ ಫ್ಯಾಮಿಲಿ ಮ್ಯಾನ್ 2(Family man 2) ನಂತರ ದೊಡ್ಡ ಸಿನಿಮಾ ಯಾವುದೂ ಕೈಗೆತ್ತಿಕೊಳ್ಳಲಿಲ್ಲ.ಆದರೆ ಈಗ ನಟಿ ವಿಚ್ಚೇದನೆ ನಂತರ ಮೊದಲ ಸಿನಿಮಾ ಸೈನ್ ಮಾಡಿದ್ದಾರೆ. ಪುಷ್ಪಾ(Pushpa) ಹಾಗೂ ಕಾತು ವಾಕುಲ ರಂಡು ಖಾದಲ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರೋ ನಟಿ ಸಿನಿಮಾ ಕೈಗೆತ್ತಿಕೊಂಡಿದ್ದು ಶೂಟಿಂಗ್ ಕೂಡಾ ಶುರು ಮಾಡಿದ್ದಾರೆ.
ನಾಗ ಚೈತನ್ಯ ಅವರಿಂದ ವಿಚ್ಚೇದನೆ ಪಡೆದು ಲಾಂಗ್ ಗ್ಯಾಪ್ ಕೊಟ್ಟ ನಂತರ ನಟಿ ಬ್ಯಾಕ್ ಟು ವರ್ಕ್ ಆಗಿದ್ದಾರೆ. ಹೌದು. ವಿಚ್ಚೇದನೆ ನಂತರ ನಟಿ ಚಾರ್ ದಮ್ ಯಾತ್ರಾ, ದುಬೈ ಟ್ರಿಪ್ ಅಂತ ವೆಕೇಷನ್‌ನಲ್ಲಿ ಬ್ಯುಸಿಯಾಗಿದ್ದರು. ಆದರೆ ಈಗ ಮತ್ತೆ ಕೆಲಸ ಶುರುಮಾಡಿದ್ದಾರೆ. ನಟಿ ಹರಿ ಹಾಗೂ ಹರೀಶ್ ಜೊತೆ ತಮ್ಮ ಮುಂದಿನ ಬಹುಭಾಷಾ ಸಿನಿಮಾ ಓಕೆ ಮಾಡಿದ್ದು ಇದಕ್ಕೆ ಯಶೋದ ಎಂಬ ಟೈಟಲ್ ಕೂಡಾ ಓಕೆ ಮಾಡಲಾಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.
Most Searched Female Celebrities 2021: ಕತ್ರಿನಾ, ದೀಪಿಕಾ ಜೊತೆ ಸಮಂತಾ!
ಯಶೋದಾ ವಿಚ್ಚೇದನೆ ನಂತರ ಸಮಂತಾರ ಮೊದಲ ಸಿನಿಮಾ ಆಗಿದೆ. ಡಿ.06ರಂದು ಸಿನಿಮಾದ ಶೂಟಿಂಗ್ ಶುರುವಾಗಿದೆ. ಹೈದರಾಬಾದ್‌ನಲ್ಲಿ ಪೂಜಾ ಕಾರ್ಯಕ್ರಮದೊಂದಿಗೆ ಮೊದಲ ದಿನದ ಶೂಟಿಂಗ್ ಶುರುವಾಗಿದೆ. ಹರಿ ಹಾಗೂ ಹರೀಶ್ ಸಿನಿಮಾ ನಿರ್ದೇಶನ ಮಾಡಲಿದ್ದು ಶಿವಲೆಂಕ ಕೃಷ್ಣ ಪ್ರಸಾದ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದಿತ್ಯ 369, ಸಮ್ಮೋಹನಮ್ ಸಿನಿಮಾ ನಿರ್ಮಿಸಿದ್ದ ಕೃಷ್ಣ ಪ್ರಸಾದ್ ಈ ಸಿನಿಮಾಗೂ ಬಂಡವಾಳ ಹೂಡುತ್ತಿದ್ದಾರೆ.
ಯಶೋದ ನ್ಯೂ ಏಜ್ ಥ್ರಿಲ್ಲರ್ ಸಿನಿಮಾ. ಫ್ಯಾಮಿಲಿ ಮ್ಯಾನ್ 2 ಸಿನಿಮಾ ಮೂಲಕ ಸಮಂತಾ ಪ್ಯಾನ್ ಇಂಡಿಯಾ ಎಟೆನ್ಶನ್ ಪಡೆದಿದ್ದಾರೆ. ಅವರ ಈಗಿನ ಇಮೇಜ್‌ಗೆ ಅನುಗುಣವಾಗಿ, ಹೆಚ್ಚು ಪ್ರೇಕ್ಷಕ ವರ್ಗವನ್ನು ತಲುಪಲಿದೆ ಎಂದು ನಿರ್ಮಾಪಕ ಹೇಳಿದ್ದಾರೆ. ನಿಮ್ಮ ಆಶಿರ್ವಾದದೊಂದಿಗೆ ಎಂದು ಕ್ಯಾಪ್ಶನ್ ಕೊಟ್ಟು ನಟಿ ಈ ಸುದ್ದಿಯನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಅರೇಂಜ್‌ಮೆಂಟ್ಸ್ ಆಫ್ ಲವ್
BAFTA-ವಿಜೇತ ಚಲನಚಿತ್ರ ನಿರ್ಮಾಪಕ 'ಡೌನ್‌ಟೌನ್ ಅಬ್ಬೆ' ಖ್ಯಾತಿಯ ಫಿಲಿಪ್ ಜಾನ್ ನಿರ್ದೇಶಿಸುವ ತನ್ನ ಮೊದಲ ಅಂತರರಾಷ್ಟ್ರೀಯ ಸಿನಿಮಾ 'ಅರೇಂಜ್‌ಮೆಂಟ್ಸ್ ಆಫ್ ಲವ್' ಪ್ರಾಜೆಕ್ಟ್ ಮಾಡುತ್ತಿದ್ದಾರೆ ಸಮಂತಾ. 'ಅರೇಂಜ್‌ಮೆಂಟ್ಸ್ ಆಫ್ ಲವ್' ಎಂಬುದು ಭಾರತೀಯ ಲೇಖಕ ಟೈಮೆರಿ ಎನ್. ಮುರಾರಿಯವರ ಅದೇ ಶೀರ್ಷಿಕೆಯ 2004 ರ ಅತ್ಯಧಿಕ ಮಾರಾಟವಾದ ಕಾದಂಬರಿಯ ರೂಪಾಂತರವಾಗಿದೆ. ಸಮಂತಾ ತನ್ನ ಸ್ವಂತ ಪತ್ತೇದಾರಿ ಏಜೆನ್ಸಿಯನ್ನು ನಡೆಸುತ್ತಿರುವ ಮತ್ತು ಹುಡುಕಾಟದ ಭಾಗವಾಗಿರುವ 27 ವರ್ಷದ ಪ್ರಗತಿಪರ ದ್ವಿಲಿಂಗಿ ತಮಿಳು ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ.
Samantha Speaks about Sex: ಒಂದಿನ ಆಹಾರ ಬೇಕಾದ್ರೂ ಬಿಡ್ತೀನಿ, ಸೆಕ್ಸ್ ಬಿಡಲ್ಲ ಎಂದ ನಟಿ
ಸಮಂತಾ ನಾಗ ಚೈತನ್ಯದಿಂದ ಬೇರ್ಪಟ್ಟಾಗಿನಿಂದ, ಅವರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಸ್ಪೂರ್ತಿದಾಯಕ ಮಾತುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದಕ್ಷಿಣದ ಸೂಪರ್‌ಸ್ಟಾರ್ ನಿಜ ಜೀವನದಲ್ಲಿ ನಿಧಾನವಾಗಿ ಮತ್ತು ಸ್ಥಿರವಾಗಿ ಮುಂದುವರಿಯಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಸಮಂತಾ.
ವಿಚ್ಚೇದನೆ ನಂತರ ಮುಗಿಯದ ಟ್ರೋಲ್, ಕೊನೆಗೂ ಉತ್ತರ ಕೊಟ್ರು ಸಮಂತಾ
ಪುಷ್ಪಾಗೆ ಸಮಂತಾ ಐಟಂ ಸಾಂಗ್
'ಪುಷ್ಪ' ಚಿತ್ರತಂಡ ಅಲ್ಲು ಅರ್ಜುನ್ ಹಾಗೂ ಸಮಂತಾ ಹೆಜ್ಜೆ ಹಾಕುವ ಹಾಡಿನ ಪೋಸ್ಟರ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಸೆಟ್ ಹಾಕಲಾಗಿದ್ದು ಈ ಹಾಡಿನ ಶೂಟಿಂಗ್ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.