2021ಕ್ಕೆ ನಿಂಬೆ, ಮೆಣಸಿನಕಾಯಿ ಕಟ್ಟಿದ ಅಮಿತಾಭ್‌

By Suvarna News  |  First Published Dec 15, 2020, 1:56 PM IST

2021ಕ್ಕೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿದ ಫೋಟೋವನ್ನು ನಟ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ ಅಮಿತಾಭ್


ಮೆಗಾಸ್ಟಾರ್ ಅಮಿತಾಭ್ ಬಚ್ಚನ್ 2021ದನ್ನು ಕೆಟ್ಟ ಕಣ್ಣುಗಳಿಂದ ರಕ್ಷಿಸೋಕೆ ನಿಂಬೆ ಮೆಣಸಿನಕಾಯಿ ಕಟ್ಟಿದ್ದಾರೆ. 78 ವರ್ಷದ ಬಾಲಿವುಡ್ ಬಿಗ್‌ ಬಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಹಿರಿಯ ನಟ.

2021ಕ್ಕೆ ನಿಂಬೆ ಮತ್ತು ಮೆಣಸಿನಕಾಯಿ ಕಟ್ಟಿದ ಫೋಟೋವನ್ನು ನಟ ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಕೆಟ್ಟ ಕಣ್ಣಿನಿಂದ ಬಚಾವಾಗಲು ನಿಂಬೆ ಮೆಣಸಿನ ಕಾಯಿ ಕಟ್ಟುವ ಸಂಪ್ರದಾಯ ಭಾರತದಾದ್ಯಂತ ಇದೆ.

Tap to resize

Latest Videos

ಖ್ಯಾತ ನಟಿಯ ಆತ್ಮಹತ್ಯೆ: ಗುಟ್ಟಾಗಿ ಮದುವೆಯಾಗಿದ್ದ ಪತಿ ಅರೆಸ್ಟ್

ಇದನ್ನೇ ಫಾಲೋ ಮಾಡಿದ್ದಾರೆ ನಟ. 2020 ಕೊರೋನಾದಿಂದಾಗಿ ಅತ್ಯಂತ ಕಷ್ಟದ ಸಮಯವಾಗಿತ್ತು. 2021 ಚೆನ್ನಾಗಿರಲಿ, ಕೆಟ್ಟ ದೃಷ್ಟಿ ಬೀಳದಿರಲಿ ಎಂದು ಈ ರೀತಿ ಮಾಡಿದ್ದಾರೆ ನಟ.

2020 ಮುಗಿಲು ಕೆಲವೇ ದಿನ ಇದೆ. 2021ಕ್ಕೆ ಕೆಟ್ಟ ದೃಷ್ಟಿ ಬೀಳದಿರಲಿ. ನಿಂಬೆ, ಮೆಣಸು ಕಟ್ಟಿ ರಕ್ಷಿಸಲು ನಾನು ಬಯಸುತ್ತೇನೆ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಪೋಸ್ಟ್‌ಗೆ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ.

click me!