
ಬಾಲಿವುಡ್ ನ ಶಹೆನ್ಶಾ, ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ನಟ ಅಮಿತಾಭ್ ಬಚ್ಚನ್ ಬ್ಲಾಗ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಅಮಿತಾಬ್ ಬಚ್ಚನ್, ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ಆಸ್ಪತ್ರೆ, ಐಸಿಯು, ಶಸ್ತ್ರಚಿಕಿತ್ಸೆ ಅನುಭವವನ್ನು ಬರೆದುಕೊಂಡಿದ್ದಾರೆ. ಇದು ಅಭಿಮಾನಿಗಳ ಮಧ್ಯೆ ಚರ್ಚೆಯ ವಿಷ್ಯವಾಗಿದೆ.
ಬಾಲಿವುಡ್ ಬಿಗ್ ಬಿ, 83 ವರ್ಷದ ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಆಸ್ಪತ್ರೆ, ಐಸಿಯು, ಶಸ್ತ್ರಚಿಕಿತ್ಸೆ ಹಾಗೂ ಮನೆಗೆ ವಾಪಸ್ ಬಂದ ಅನುಭವವನ್ನು ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ, ಐಸಿಯುನಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಆರೈಕೆ, ಬಳಿಕ ಮನೆಗೆ ಮರಳುವುದು ಜೀವನದ ಅತ್ಯಂತ ಕಠಿಣ ಹಂತಗಳಲ್ಲಿ ಒಂದು ಎಂದು ಬರೆದಿದ್ದಾರೆ.
Yash Toxic Movie: ಕಿಯಾರಾ ಅಡ್ವಾಣಿ ಬಳಿಕ ತಾರಾ ಸುತಾರಿಯಾ, ನಯನತಾರಾ ಜೊತೆಯೂ ಯಶ್ ರೊಮ್ಯಾನ್ಸ್! ಏನ್ರೀ..ಕಥೆ ಇದು
ಅವರು ದೈಹಿಕ ನೋವಿನಷ್ಟೇ ಅಲ್ಲ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿಯೂ ಈ ಸಮಯ ತುಂಬಾ ಸವಾಲಿನದ್ದಾಗಿರುತ್ತದೆ ಎಂದು ಹೇಳಿದ್ದಾರೆ. ಒಂದು ದಿನ ಎಲ್ಲರ ಮೆಚ್ಚುಗೆ ಪಡೆದ ಚಾಂಪಿಯನ್ ಆಗಿರುತ್ತೀರಿ. ಮತ್ತೊಂದು ದಿನ ಸೋಲು ನಿಮ್ಮ ಮುಂದೆ ನಿಂತಿರುತ್ತದೆ. ಆ ಸಂದರ್ಭದಲ್ಲಿ ಕೆಲವರು ಧೈರ್ಯದಿಂದ ಹೋರಾಡುತ್ತಾರೆ. ಇನ್ನೂ ಕೆಲವರು ಪರಿಸ್ಥಿತಿಗೆ ಶರಣಾಗುತ್ತಾರೆ. ಆದರೆ ಧೈರ್ಯ ಕಳೆದುಕೊಳ್ಳದವರೇ ನಿಜವಾದ ಚಾಂಪಿಯನ್ಗಳು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಯಾವ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು, ಯಾವ ಶಸ್ತ್ರಚಿಕಿತ್ಸೆ ನಡೆದಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.ಇದು ಅಭಿಮಾನಿಗಳಲ್ಲಿ ಆತಂಕ ಹೆಚ್ಚಲು ಕಾರಣವಾಗಿದೆ,. ಅಮಿತಾಬ್ ಬಚ್ಚನ್ ಬ್ಲಾಗ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಶೀಘ್ರವೇ ಗುಣಮುಖರಾಗಿ ಬನ್ನಿ ಅಂತ ಅಭಿಮಾನಿಗಳು ಕಮೆಂಟ್ ಹಾಕ್ತಿದ್ದಾರೆ.
The Odyssey Movie: ಭಾರತದಲ್ಲಿ ದಾಖಲೆ ಮಟ್ಟದಲ್ಲಿ ಕಲೆಕ್ಷನ್
83ನೇ ವಯಸ್ಸಿನಲ್ಲೂ ಅಮಿತಾಬ್ ಬಚ್ಚನ್ ಸುಮ್ಮನೆ ಕುಳಿತಿಲ್ಲ. ತಮ್ಮ ಕೆಲಸವನ್ನು ಮುಂದುವರೆಸಿರುವ ಅವರು, ಸಿನಿಮಾ ಜೊತೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿದ್ದಾರೆ. ಇಳಿ ವಯಸ್ಸಿನಲ್ಲಿ ಕಾಡುವ ಸಮಸ್ಯೆಗಳನ್ನು ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿರುತ್ತಾರೆ. ಅಮಿತಾಬ್ ಬಚ್ಚನ್ ಅಭಿನಯದ ಕಲ್ಕಿ 2898 AD ಚಿತ್ರದ ಮುಂದಿನ ಭಾಗದಲ್ಲಿ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ.
T 5806 - खेल समाप्त हो गया ! पर काम चल रहा है
— Amitabh Bachchan (@SrBachchan) July 20, 2026
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.