Kim Baby Bar Exam Passed: ಮೂರನೇ ಸಲ ಪರೀಕ್ಷೆ ಬರೆದು ಪಾಸ್ ಆದ ಖ್ಯಾತ ನಟಿ!

By Suvarna News  |  First Published Dec 15, 2021, 5:48 PM IST

ಪರೀಕ್ಷೆ ಬರೆಯುವುದಾಗಿ ಅನೌನ್ಸ್‌ ಮಾಡಿ, ಎರಡು ಸಲ ಫೇಲ್ ಆಗಿದ್ದ ಕಿಮ್. ಅಂತೂ ಇಂದೂ ಇದೀಗ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಅಷ್ಟಕ್ಕೂ ಏನು ಪರೀಕ್ಷೆ ಇದು?


ಅಮೆರಿಕಾದ ಖ್ಯಾತ ನಟಿ, ಮೀಡಿಯಾ ಜನಪ್ರಿಯ ಪರ್ಸೋನಾಲಿಟಿ ಕಿಮ್ ಕಾರ್ಡಶಿಯಾನ್ (Kim Kardashian) ಇದೀಗ ಬೇಬಿ ಬಾರ್ (Baby Bar Exam) ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಸಂಭ್ರಮದ ಸುದ್ದಿ ಹಂಚಿಕೊಂಡ ನಟಿಗೆ, ನೆಟ್ಟಿಗರು ನಾನ್ ಸ್ಟಾಪ್ ಪ್ರಶ್ನೆ ಕೇಳುವುದಕ್ಕೆ ಶುರು ಮಾಡಿದ್ದಾರೆ. ಮಕ್ಕಳನ್ನು ಯಾರು ನೋಡಿಕೊಳ್ಳುವುದು? ಪರೀಕ್ಷೆ ಬರೆಯುವುದಕ್ಕೂ ಇಷ್ಟೊಂದು ಹಾಟ್ ಆಗಿ ಹೋಗಿದ್ರಾ? ಎಂದು ಕಾಲೆಳೆಯುತ್ತಿದ್ದಾರೆ. 

ವಿಶ್ವದ ಅತಿ ಹೆಚ್ಚು ಹಾಟ್ ಸೆಲೆಬ್ರಿಟಿಯಲ್ಲಿ ಒಬ್ಬರಾಗಿರುವ ಕಿಮ್ ಯಾವ ಕಾರಣಕ್ಕೆ ಬೆಬಿ ಬಾರ್ ಪರೀಕ್ಷೆ ಬರೆಯಲು ನಿರ್ಧಾರಿಸಿದ್ದರೋ ಗೊತ್ತಿಲ್ಲ. ಆದರೆ 2019ರಲ್ಲಿ ಈ ನಿರ್ಧಾರವನ್ನು ಅನೌನ್ಸ್ ಮಾಡಿದ್ದಂತೂ ಹೌದು!

Latest Videos

undefined

'ಓ ದೇವರೆ ನಾನು ಈ ಸಲ ಬೇಬಿ ಬಾರ್ ಪರೀಕ್ಷೆ ಪಾಸ್ ಆಗಿರುವೆ. ಕನ್ನಡಿಯಲ್ಲಿ ನನ್ನನ್ನ ನಾನು ನೋಡಿಕೊಂಡರೆ ಹೆಮ್ಮೆ ಆಗುತ್ತದೆ. ನನ್ನ ಲಾ ಸ್ಕೂಲ್ ಜರ್ನಿ (Law School) ಬಗ್ಗೆ ಯಾರಿಗೂ ಗೊತ್ತಿಲ್ಲ, ದಯವಿಟ್ಟು ಇದು ಸುಲಭವಾದ ಜರ್ನಿ ಅಂದುಕೊಳ್ಳಬೇಡಿ. ಅಥವಾ ನನಗೆಂದು ಯಾರೂ ಸುಲಭ ಮಾಡಿಕೊಟ್ಟಿರಲಿಲ್ಲ,' ಎಂದು ಟ್ಟೀಟ್ ಮಾಡಿದ್ದಾರೆ. 

'ಕಳೆದು ಎರಡು ವರ್ಷಗಳಲ್ಲಿ ನಾನು ಮೂರು ಸಲ ಈ ಪರೀಕ್ಷೆಯಲ್ಲಿ ಫೇಲ್ ಆಗಿರುವೆ. ಫೇಲ್ ಆದೆ ಅಂತ ಬೇಸರ ಮಾಡಿಕೊಳ್ಳದೇ, ಸ್ಟ್ರಾಂಗ್ ಆಗಿ ಮೇಲೆದ್ದು ಓದಲು ಶುರು ಮಾಡಿದೆ. ನಾನು ಇದನ್ನು ಪಾಸ್ ಆಗಲೇ ಬೇಕು, ಎಂಬ ಮನಸ್ಸು ಮಾಡಿಕೊಂಡೆ. ಮೂರನೇ ಸಲ ಪರೀಕ್ಷೆ ಬರೆಯುವಾಗ ನನಗೆ ಕೊರೋನಾ ಸೋಂಕು ತಗುಲಿತ್ತು. 104 ಜ್ವರ ಇದ್ದರೂ ಯಾವ ಕಾರಣ ನೀಡದೇ ಓದಲು ಶುರು ಮಾಡಿದ್ದಕ್ಕೆ ಈ ಪ್ರತಿಫಲ ಸಿಕ್ಕಿದೆ,' ಎಂದು ಕಿಮ್ ಬರೆದುಕೊಂಡಿದ್ದಾರೆ. 

'ಕ್ಯಾಲಿಫೋರ್ನಿಯಾದಲ್ಲಿ ನಾನು ಓದುತ್ತಿರುವ ಲಾಗೆ ಎರಡು ಬಾರ್ ಪರೀಕ್ಷೆ ತೆಗೆದುಕೊಳ್ಳಬೇಕಿದೆ. ಇದು ಮೊದಲನೇ ಪರೀಕ್ಷೆ ಆಗಿದ್ದು ನಾನು ಮೂರನೇ ಸಲ ಪಾಸ್ ಆಗಿರುವೆ. ಅಲ್ಲಿನ ಜನಪ್ರಿಯ ಲಾಯರ್‌ಗಳ ಜೊತೆ ಮಾತನಾಡಿದ್ದಾಗ ಅವರು ಇವೆಲ್ಲಾ ಸಾಧ್ಯವಿಲ್ಲ ಎಂದು ಹೇಳಿದ್ದರು. ಎಲ್ಲರಂತೆ ನಾನೂ ಕಾಲೇಜಿಗೆ ಹೋಗಿ, ಬೇರೊಬ್ಬರ ಸಹಾಯ ಪಡೆದುಕೊಂಡು ಓದಬೇಕು ಎಂದು ಹೇಳಿದ್ದರು. ಆದರೆ ನನಗೆ ಯಾವ ಆಯ್ಕೆಯೂ ಇರಲಿಲ್ಲ. ನನ್ನ ಸಾಧನೆ ನೋಡಿದರೆ ನನಗೆ ಹೆಮ್ಮೆ ಆಗುತ್ತಿದೆ. ಯಾರು ಏನು ಬೇಕಿದ್ದರೂ ಸಾಧನೆ ಮಾಡಬಹುದು,' ಎಂದು ಕಿಮ್ ಹೇಳಿದ್ದಾರೆ. 

ಮತ್ತೆ ಒಂದಾಗಲಿದ್ದರಾ ಕಿಮ್ ಕಾರ್ಡಶಿಯಾನ್ ಮತ್ತು ಕಾನ್ಯೆ ವೆಸ್ಟ್‌ ?

'ನಾನು ಕೆಲವೊಬ್ಬರಿಗೆ ಮಾತ್ರ ವೈಯಕ್ತಿಕವಾಗಿ ಧನ್ಯವಾದಗಳನ್ನು ಹೇಳುತ್ತೇನೆ. ನಾನು ಸರಿಯಾದ ಲಾ ಶಾಲೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಹಾಯ ಮಾಡಿದವರು, ಪ್ರತಿ ಸಲವೂ ನಾನು ಕೋರ್ಟ್‌ಗೆ ಭೇಟಿ ಕೊಡುವಾಗ ನನ್ನ ಜೊತೆಗೆ ಇದ್ದವರಿಗೆ, ನನಗೆ ಮೂಡುತ್ತಿದ್ದ ಸಣ್ಣ ಪುಟ್ಟ ಪ್ರಶ್ನೆಗಳಿಗೂ ಬೇಸರಿಸಿಕೊಳ್ಳದೇ ಉತ್ತರ ಕೊಟ್ಟವರಿಗೆ ದೊಡ್ಡ ನಮಸ್ಕಾರಗಳು,' ಎಂದು ಬರೆದು ಮೂವರನ್ನು ಟ್ಯಾಗ್ ಮಾಡಿದ್ದಾರೆ. 

'ನಾನು ದಿನಕ್ಕೆ  10 ಗಂಟೆಗಳ ಕಾಲ ಓದುತ್ತಿದ್ದೆ. ಅದರಲ್ಲಿ ನಾಲ್ಕು ಗಂಟೆಗಳು ಝೋಮ್ ವಿಡಿಯೋ ಕಾಲ್‌ನಲ್ಲಿ (Zoom Video call) ಟೆಸ್ಟ್‌ ತೆಗೆದುಕೊಂಡು ಪ್ರಾಕ್ಟೀಸ್ ಮಾಡಿಸುತ್ತಿದ್ದವರು ಇಬ್ಬರು. ಲಾ ಸ್ಕೂಲ್‌ ಬಾರ್ ಪಪರೀಕ್ಷೆ ತಯಾರಿ ಮಾಡಲು ಸಾಧ್ಯವಾಗಿದ್ದು ನಿಮ್ಮಿಂದ. ನೀವು ನನ್ನ ಜೀವನ ಬದಲಾಯಿಸಿದ್ದೀರಿ, ಎಂದು ಇಬ್ಬರು ಶಿಕ್ಷಕರನ್ನು ಟ್ಯಾಗ್ ಮಾಡಿದ್ದಾರೆ. 

ನಟಿಗೆ ಡೈಮಂಡ್ ರಿಂಗ್ ಮತ್ತು ಕಾಂಟ್ರಾಸೆಪ್ಟಿವ್ ಮಾತ್ರೆ ಗಿಫ್ಟ್ ಕೊಟ್ಟ ಫ್ಯಾನ್ ವಿರುದ್ಧ ದೂರು

'ನಾನು ಪಾಸ್ ಆಗಿರುವ ವಿಚಾರ ಕೇಳಿದ್ದರೆ, ತಂದೆ (Father) ತುಂಬಾನೇ ಸಂತೋಷ ಪಡುತ್ತಾರೆ. ಅದೇ ಸಮಯಕ್ಕೆ ಶಾಕ್ ಕೂಡ ಆಗುತ್ತಾರೆ. ನಾನು ಈ ದಾರಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಅವರು ಇದ್ದಿದ್ದರೆ ಪ್ರೋತ್ಸಾಹಿಸುತ್ತಿದ್ದರು. ಮೊದಲ ಅಟೆಂಪ್ಟ್‌ನಲ್ಲಿ ಪಾಸ್ ಆಗದ್ದಿದ್ದರೆ, ಇನ್ನೂ ಖುಷಿಯಾಗುತ್ತಿತ್ತು. ಆದರೆ ನನ್ನ ವಿಚಾರದಲ್ಲಿ ಅವರು ನನ್ನ ಚಿಯರ್ ಲೀಡರ್ ಆಗಿರುತ್ತಿದ್ದರು. ಕೊನೆಯದಾಗಿ ನಾನು ಏನು ಹೇಳಲು ಇಷ್ಟ ಪಡುತ್ತೇನೆ ಅಂದ್ರೆ ನಿಮ್ಮ ತಲೆಯಲ್ಲಿ ಸಾಧನೆ ವಿಚಾರ ಬಂದು ಕೂತಿದೆ ಅಂದ್ರೆ ದಯವಿಟ್ಟು ಬಿಟ್ಟು ಕೊಡಬೇಡಿ. ಮೊದಲು ಮನಸ್ಸು ಮಾಡಿ, ಆನಂತರ ಶ್ರಮ ಹಾಕಿ. ಖಂಡಿತ ಜಯ ನಿಮ್ಮದಾಗುವುದು. ಆಮೇಲೆ ಅದರ ಖುಷಿ ಎಷ್ಟಿರುತ್ತೆ, ಎಂದು ನೀವು ಫೀಲ್ ಮಾಡಿ ಹೇಳಿ,' ಎಂದಿದ್ದಾರೆ ಕಿಮ್.

 

click me!