ಆಂಧ್ರ ಸರ್ಕಾರದ ವಿರುದ್ಧ ಚಿತ್ರರಂಗ ತೀವ್ರ ಆಕ್ರೋಶ. ಜಗನ್ ತೆಗೆದುಕೊಂಡ ನಿರ್ಧಾರಕ್ಕೆ ಮಿಶ್ರ ಅಭಿಪ್ರಾಯ....
ಕೊರೋನಾ ಲಾಕ್‌ಡೌನ್ (Covid Lockdown) ನಿಂದ ಅತಿ ಹೆಚ್ಚು ಹೊಡೆತ ಕಂ ನಷ್ಟ ಎದುರಿಸಿದ ಕ್ಷೇತ್ರ ಅಂದ್ರೆ ಸಿನಿಮಾರಂಗ. ಚಿತ್ರೀಕರಣ ಇಲ್ಲದೆ ಸಿನಿಮಾ ಬಿಡುಗಡೆ ಇಲ್ಲದೆ ಕಲಾವಿದರು, ನಿರ್ದೇಶಕರು ಮತ್ತು ನಿರ್ಮಾಪಕ ಕೈ ಕಟ್ಟಿದಂತಾಗಿತ್ತು. ಆದರೀಗ ನಿಟ್ಟುಸಿರು ಬಿಟ್ಟಿರುವ ಚಿತ್ರಮಂದಿರಕ್ಕೆ ಆಂಧ್ರ ಪ್ರದೇಶ (Andra Pradesh) ಸರ್ಕಾರ ದೊಡ್ಡ ಶಾಕ್ ತಂದುಕೊಟ್ಟಿದೆ. ಚಿತ್ರರಂಗದವರು ಮಾತ್ರವಲ್ಲದೆ ವೀಕ್ಷಕರು ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆಂಧ್ರ ಪ್ರದೇಶ ಸರ್ಕಾರವೂ ಚಿತ್ರಮಂದಿರಗಳ ಟಿಕೆಟ್ Theater Tickets) ಬೆಲೆಯನ್ನು ಏರಿಸಬೇಕು ಎಂದು ಚಿರಂಜೀವಿ (Chiranjeevi) ನೇತೃತ್ವದಲ್ಲಿ ತೆಲುಗು ಚಿತ್ರರಂಗವು ಸಿಎಂ ಜಗನ್ ಮೋಹನ್ ರೆಡ್ಡಿ ಅವರಿಗೆ ಮನವಿ ಮಾಡಿತ್ತು. ಇದಕ್ಕೆ ಒಪ್ಪಿಕೊಂಡ ಜಗನ್ ಚಿತ್ರರಂಗಕ್ಕೂ ಸೇರಿಸಿ ಶಾಕ್ ನೀಡಿದ್ದಾರೆ. ಟಿಕೆಟ್ ದರ ಹೆಚ್ಚಿಸುವುದಲ್ಲದೆ ರಾಜ್ಯಾದಾದ್ಯಂತ ಚಿತ್ರಮಂದಿರಗಳ ಟಿಕೆಟ್ ಅನ್ನು ರಾಜ್ಯ ಸರ್ಕಾರವೇ ಮಾರಾಟ ಮಾಡುತ್ತದೆ ಎಂದು ಅದೇಶ ನೀಡಿದ್ದಾರೆ.
Jr NTR Emotional: ಅಪ್ಪುಗೆ ಕೊನೆಯ ಬಾರಿ 'ಗೆಳೆಯ' ಹಾಡು ಹಾಡಿದ ಜ್ಯೂನಿಯರ್!ಇದೀಗ ಆಂಧ್ರ ಪ್ರದೇಶ ಸರ್ಕಾರ ಹೊಸ ಟಿಕೆಟ್ ದರಗಳನ್ನು ಘೋಷಣೆ ಮಾಡಿದ್ದು ದರಗಳ ಬಗ್ಗೆ ತೆಲುಗು ಚಿತ್ರರಂಗ ಅಸಮಾಧಾನ ವ್ಯಕ್ತಪಡಿಸಿದೆ. ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿನ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಪ್ರೀಮಿಯಂ ಟಿಕೆಟ್ ದರ 250 ರೂ ದಾಟುವಂತಿಲ್ಲ. ಡಿಲಕ್ಸ್ ವಿಭಾಗದ ದರ 150 ರೂ ದಾಟುವಂತಿಲ್ಲ ಹಾಗೇ ಎಕಾನಮಿ ಕ್ಲಾಸ್ ಟಿಕೆಟ್ 75 ರೂ ದಾಟುವಂತಿಲ್ಲ ಎಂದಿದ್ದಾರೆ. ಇದರ ಜೊತೆಗೆ ಎಸಿ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ದಾಟುವಂತಿಲ್ಲ, ಡಿಲಕ್ಸ್ 60ರೂ ಹಾಗೂ ಎಕಾನಮಿ 40 ರೂ ದಾಟುವಂತಿಲ್ಲ. ಎಸಿ ಇಲ್ಲದ ಚಿತ್ರಮಂದಿರಗಳು ಪ್ರೀಮಿಯಂ ಟಿಕೆಟ್ ದರ 60ರೂ, ಡಿಲಕ್ಸ್ 40ರೂ,ಎಕಾನಮಿ 20ರೂ ಇರಬೇಕು ಎಂದು ಆದೇಶ ಹೊರಡಿಸಿದ್ದಾರೆ.
undefined
ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮೆಲ್ಟಿಫ್ಲೆಕ್ಸ್‌ಗಳ ಪ್ರೀಮಿಯಂ ಟಿಕೆಟ್ ದರ 150, ಡಿಲಕ್ಸ್ 100, ಎಕಾನಮಿ 60ರೂ ದಾಟುವಂತಿಲ್ಲ. ಎಸಿ ಚಿತ್ರಮಂದಿರಗಳು ಪ್ರೀಮಿಯರ್ ಟಿಕೆಟ್‌ಗೆ 70 ರೂ, ಡಿಲಕ್ಸ್‌ಗೆ 50 ರೂ, ಎಕಾನಮಿಗೆ 30 ದಾಟುವಂತಿಲ್ಲ.
ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಲ್ಟಿಫ್ಲೆಕ್ಸ್‌ನ ಪ್ರೀಮಿಯಂ ಟಿಕೆಟ್ 120 ರೂ, ಡಿಲ್ಸಕ್ ಟಿಕೆಟ್ 80 ರೂ, ಎಕಾನಮಿ ಟಿಕೆಟ್ 40 ರೂ ದಾಟುವಂತಿಲ್ಲ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚಿತ್ರಮಂದಿರಗಳು ಮಲ್ಟಿಫ್ಲೆಕ್ಸ್ ಪ್ರೀಮಿಯರ್ ಟಿಕೆಟ್ 80 ರೂ, ಡಿಲಕ್ಸ್ 50 ರೂ, ಎಕಾನಮಿ 30 ರೂ. ಎಸಿ ಇಲ್ಲದ ಚಿತ್ರಮಂದಿರಗಳು 20,15 10 ರೂ ದಾಟುವಂತಿಲ್ಲ.
RRR Kannada Dubbing: ತೆಲುಗು ನಟರು ಕನ್ನಡದಲ್ಲಿ ಸಣ್ಣ ತಪ್ಪು ಮಾಡಿದರೂ ಎದ್ದು ಕಾಣುತ್ತೆ?ಟಿಕೆಟ್ ಬೆಲೆಗಳನ್ನು ಕೇಳಿ ಜನರು ಶಾಕ್ ಆಗಿದ್ದಾರೆ. ಅಲ್ಲದೆ ಖಾಸಗಿ ಕಾರ್ಯಕ್ರಮದಲ್ಲಿ ನಟ ಪವನ್ ಕಲ್ಯಾಣ್ (Pawan Kalyan) ಸರ್ಕಾರದ ವಿರುದ್ಧ ಮಾತನಾಡಿದ್ದಾರೆ. 'ನಾವು ಕಷ್ಟ ಪಟ್ಟು ತಗೆದ ಚಿತ್ರವನ್ನು ನೀನು ಹೇಗೆ ಮಾರಾಟ ಮಾಡುತ್ತೀಯಾ?' ಎಂದಿದ್ದಾರೆ. ಟಿಕೆಟ್ ದರದಲ್ಲಿ ಚಿತ್ರಕ್ಕೆ ಹಾಕಿರುವ ಬಂಡವಾಳ ವಾಪಸ್ ಬರುವ ಅಂಬೋಣ ಇಡುತ್ತಿದೆ ಆದರೆ ಜಗನ್ ಸರ್ಕಾರ ಇದಕ್ಕೆಲ್ಲ ಕೇರ್ ಮಾಡುತ್ತಿಲ್ಲ. ಹಾಲಿವುಡ್ ಅವರ ಜೊತೆ ಜಗನ್ ಸೇರಿಕೊಂಡು ತೆಲುಗು ಚಿತ್ರರಂಗ ಬೀಳಿಸುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 2022ರಲ್ಲಿ ಬಿಡುಗಡೆಗೆ ಕಾಯುತ್ತಿರುವ ಆರ್‌ಆರ್‌ಆರ್, ಭೀಮಾ ನಾಯಕ್ ಸಿನಿಮಾ ವಿರುದ್ಧ ಸಂಚು ರೂಪಿಸಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಚಿತ್ರಮಂದಿರ ಮಾಲೀಕರು ಸಂಘದವರು ಜಗನ್ ಸರ್ಕಾರದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ.
'ಗಜನ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಆರ್‌ಆರ್‌ಆರ್ (RRR) ಚಿತ್ರಕ್ಕೆ ತೊಂದರೆ ಆಗುತ್ತಿರುವುದು ನಿಜವೇ ಆದರೆ ನಮ್ಮ ತಂಡಕ್ಕೆ ಕೋರ್ಟ್ ಮೆಟ್ಟಿಲು ಏರುವ ಪ್ಲಾನ್ ಇಲ್ಲ. ನಾವು ನಮ್ಮ ಆಂಧ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸುವ ಪ್ರಯತ್ನ ಮಾಡುತ್ತೇವ' ಎಂದು ನಿರ್ಮಾಪಕರು ಮಾತನಾಡಿದ್ದಾರೆ.