ಸಾಹಸ ಸನ್ನಿವೇಶ ಚಿತ್ರೀಕರಿಸಲು ಬಾಹ್ಯಾಕಾಶದಲ್ಲಿ ನಾಸಾ ಕೊಡ್ತು ನಟನಿಗೆ ಅವಕಾಶ!

By Suvarna NewsFirst Published May 7, 2020, 2:37 PM IST
Highlights

ಮೊದಲ ಬಾರಿ ನಾಸಾ ಕೊಡ್ತು ಸಾಹಸಮಯ ಸನ್ನಿವೇಶದ  ಚಿತ್ರೀಕರಣಕ್ಕೆ ಅವಕಾಶ, ಹೊಸ ದಾಖಲೆ ಸೃಷ್ಟಿ ಮಾಡಲಿದ್ದಾರೆ ಟಾಮ್‌ ಕ್ರೂಸ್....

'Mission Impossible' ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಚಿತ್ರದ ಒಂದೊಂದು ತುಣುಕುಗಳನ್ನು ಮಿಸ್‌ ಮಾಡದೆ ನೋಡಿದರೆ ರೋಮಾಂಚನ ಉಂಟಾಗುತ್ತದೆ.  ಇಷ್ಟೆಲ್ಲಾ ಹೇಳಿದ್ಮೇಲೆ  ನಟ ಯಾರೆಂದು ನಿಮಗೆ  ಗೊತ್ತಾಗಿರ್ಬೇಕಲ್ವಾ? 

ಹೌದು! 57 ವರ್ಷವಾದರೂ ಇನ್ನೂ  ಹುಡುಗನಂತೆ ವಿಭಿನ್ನ ಸನ್ನಿವೇಶಗಳನ್ನು ಪ್ರಯೋಗಿಸುವ ನಟ ಟಾಲ್‌ ಕ್ರೂಸ್‌ ಈಗ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅದುವೇ ಬಾಹ್ಯಾಕಾಶದಲ್ಲಿ ಚಿತ್ರೀಕರಣ...

ನಾಸಾ ಕೊಟ್ಟ ಒಪ್ಪಿಗೆ:

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಟಾಮ್‌ ಕ್ರೂಸ್‌ ಮುಂದಿನ ಸಿನಿಮಾದ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ ಎನ್ನಲಾಗಿದೆ. ಈಗಾಗಲೇ  ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ .  ನಾಸಾ ಅಡಳಿತ ಮುಖ್ಯಸ್ಥರಾದ ಜಿಮ್‌ ಟ್ಟಿಟ್ಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.'ಟಾಮ್ ಕ್ರೂಸ್‌ ಬಾಹ್ಯಾಕಾಶದಲ್ಲಿ ಶೂಟಿಂಗ್ ನಡೆಸುವ  ಮತ್ತು  ಸಿನಿಮಾದವರ ಜೊತೆ ಕೆಲಸ ಮಾಡುವ ಬಗ್ಗೆ ನನಗೆ ತುಂಬಾನೇ ರೋಮಾಂಚನವಾಗಿದೆ ' ಎಂದು ಬರೆದಿದ್ದಾರೆ.

ಹಾಲಿವುಡ್‌ಗೆ ಹಾರಲಿದ್ದಾರಾ ಹೃತಿಕ್ ರೋಶನ್?

ಅಷ್ಟೇ ಅಲ್ಲದೆ 'ನಾಸಾ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ನನಸಾಗಿಸಲು ಹೊಸ ತಲೆಮಾರಿನ ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳನ್ನು ಪ್ರೇರೇಪಿಸಲು ನಮಗೆ ಜನಪ್ರಿಯ ಮಾಧ್ಯಮಗಳ ಸಹಾಯ ಬೇಕಾಗುತ್ತದೆ' ಎಂದು ಟ್ಟೀಟ್ ಮಾಡಿದ್ದಾರೆ.

'ಇದು ಮಿಷನ್‌ ಇಂಪಾಸಿಬಲ್‌ ಫಿಲ್ಮ್ ರೀತಿ ಅಲ್ಲ ಹಾಗೂ ಯಾವುದೇ ಸ್ಟುಡಿಯೋ ಕೆಲಸ ಸೇರಿಕೊಳ್ಳುವುದಿಲ್ಲ. ಮೊದಲ ನಿರೂಪಣೆ ಮೂಲಕ ಬಾಹ್ಯಾಕಾಶವನ್ನು ಪರಿಚಯಿಸಲಾಗುತ್ತದೆ ಆ ನಂತರ ಇನ್ನಿತ್ತರ ಸನ್ನಿವೇಶಗಳನ್ನು ಸ್ಕೆಚ್‌ ಮೂಲಕ ತೋರಿಸಲಾಗುತ್ತದೆ' ಎಂದು ಚಿತ್ರತಂಡ ಬರೆದುಕೊಂಡಿತ್ತು.

ಜಗತ್ತಿನ ನಂಬರ್‌ 1 ಹಾಟ್‌ ನಟಿಗೆ ಬರ್ತಡೆ ಸಂಭ್ರಮ, ಸೌಂದರ್ಯಕ್ಕೆ ಎಣೆ ಎಲ್ಲಿ!

ಟಾಮ್ ಕ್ರೂಸ್‌ ಪ್ರತಿ ಚಿತ್ರದಲ್ಲೂ ವಿಭಿನ್ನವಾದ ಸಾಹಸ ಸನ್ನಿವೇಶ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಸೂಪರ್ ಹಿಟ್ ಸಿನಿಮಾ ಮಿಷನ್‌ ಇಂಪಾಸಿಬಲ್‌ನ  ಫಾಲೌಟ್‌ ಶೂಟಿಂಗ್‌ನಲ್ಲಿ ನೇತಾಡುವ ಸನ್ನಿವೇಶದಲ್ಲಿ ಕ್ರೂಸ್‌ಗೆ ಗಂಭೀರ ಗಾಯವಾಗಿತ್ತು. ಕೆಲ ದಿನಗಳಲ್ಲಿ ಚೇತರಿಸಿಕೊಂಡು ಬುರ್ಜ್‌ ಖಲೀಫಾ ಕಟ್ಟಡವನ್ನೇ ಹತ್ತಿದ್ದರು.

click me!