ಲಾಕ್‌ಡೌನ್‌ ಪಕ್ಕಕಿಟ್ಟು ಕಬಡ್ಡಿ ಆಡಿದ ಸ್ಯಾಂಡಲ್‌ವುಡ್‌ ನಟಿ ವಿಡಿಯೋ ವೈರಲ್!

Suvarna News   | Asianet News
Published : May 07, 2020, 11:47 AM IST
ಲಾಕ್‌ಡೌನ್‌ ಪಕ್ಕಕಿಟ್ಟು ಕಬಡ್ಡಿ ಆಡಿದ ಸ್ಯಾಂಡಲ್‌ವುಡ್‌ ನಟಿ ವಿಡಿಯೋ ವೈರಲ್!

ಸಾರಾಂಶ

ಸೌತ್‌ ಇಂಡಿಯಾ ಸುಂದರಿ ರಕುಲ್‌ ಪ್ರೀತ್‌ ಸಿಂಗ್‌ ಲಾಕ್‌ಡೌನ್‌ ಟೈಮ್‌ನಲ್ಲಿ ಕಬಡ್ಡಿ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾಲೇಜು ದಿನಗಳಲ್ಲಿ ಪಾಕೆಟ್‌ ಮನಿಗೋಸ್ಕರ್‌ ಮಾಡಲಿಂಗ್ ಮಾಡುತ್ತಾ 'ಗಿಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಈಗ ಬಾಲಿವುಡ್ ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಲಾಕ್‌ಡೌನ್: 200 ಕುಟುಂಬಗಳನ್ನು ದತ್ತು ಪಡೆದ ಬಾಲಿವುಡ್ ನಟಿ

ಮಾಡಿದ್ದು ಒಂದೇ ಕನ್ನಡ ಸಿನಿಮಾವಾದರೂ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಕುಲ್‌ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. 

ಬಾಲ್ಯದ ನೆನಪು:

ನಟ-ನಟಿಯರು ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಇನ್‌ಡೋರ್‌ ಗೇಮ್‌ಗಳನ್ನು ಆಡಿದ್ದಾರೆ. ಹಿಂದಿನ ಕಾಲದಲ್ಲಿ ಚೌಕಬಾರಾ, ಅಳುಗುಳಿ ಮನೆ,ಲಗೋರಿ, ಕಬಡ್ಡಿ  ಹಾಗೂ ಅನೇಕ ಆಟಗಳು ತುಂಬಾನೇ ಫೇಮಸ್ಸು . ಲಾಕ್‌ಡೌನ್‌ನಲ್ಲಿ ರಕುಲ್‌ ಈಗ ಅದನ್ನೇ ಮಾಡಿದ್ದಾರೆ. 

 

ಅಣ್ಣ ಅಮನ್‌ ಜೊತೆ ದಿಂಬು ಹಿಡಿದುಕೊಂಡು ಕಬಡ್ಡಿ  ಆಡಿದ್ದಾರೆ. ಈ ವಿಡಿಯೋವನ್ನು ರಕುಲ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳು 'ನಟಿಯಾದರೂ ಪರ್ವಾಗಿಲ್ಲ ಹಳೇ   ಆಟಗಳನ್ನು ಮರೆತಿಲ್ಲ' ಎಂದು ಕಾಮೆಂಟ್‌ ಮಾಡಿದ್ದಾರೆ. ರಕುಲ್‌ಗೆ ಲಾಕ್‌ಡೌನ್‌ ಟೈಮ್ ಫ್ಯಾಮಿಲಿ ಜೊತೆ ಕಾಲ ಕಳೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಫುಲ್‌ ಖುಷ್‌ ಆಗಿದ್ದಾರೆ.

ರಕುಲ್‌ ಯೋಗ ಮಂತ್ರ:

ಇದೇನಪ್ಪಾ! ಸಿನಿಮಾ ಶೂಟಿಂಗ್‌ ನಲ್ಲಿ  ಫುಲ್‌ ಬ್ಯುಸಿ ಅನ್ನುವ ನಟಿ ಮಣಿಯರು ಹೇಗೆ ಇಷ್ಟೊಂದು ಫಿಟ್‌ ಆಗಿರುತ್ತಾರೆ ಎಂಬ ಅಭಿಮಾನಿಗಳ ಕುತೂಹಲಕ್ಕೆ ರಕುಲ್‌ ಉತ್ತರ ನೀಡಿದ್ದಾರೆ. 2018ರಲ್ಲಿ ಯೋಗ ಜರ್ನಿ ಶುರು ಮಾಡಿದ ರಕುಲ್‌ ಈಗ ಪಿಲೇಟ್ಸ್ ಪಟು.  'ಕೆಲ ದಿನಗಳ ಹಿಂದೆ' ಎಂದು ಬರೆದುಕೊಂಡು ತಲೆ ಕೆಳಗೆ ಕಾಲು ಮೇಲೆ ಮಾಡಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

'ಪ್ರಪಂಚ ಸರಿ ಇದ್ದಾಗ ನಾನು ಉಲ್ಟಾ  ಆಗಿದ್ದೆ. ನನ್ನ ಯೋಗ ಜರ್ನಿ ಶುರುವಾಗಿದ್ದು 2018ರಲ್ಲಿ. ಅಂದಿನಿಂದ ಇಲ್ಲಿಯವರೆಗೂ  ಜೀವನದಲ್ಲಿ ತುಂಬಾ ಖುಷಿಯಾಗಿರುವೆ. ಎಲ್ಲವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಮಾಡುತ್ತಿರುವೆ. ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳಬಾರು, ಆಗುತ್ತದೆ ಎಂದು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ' ಎಂದು ಬರೆದುಕೊಂಡಿದ್ದಾರೆ.

 

ಅಷ್ಟೆ ಅಲ್ಲದೆ ಲಾಕ್‌ಡೌನ್‌ನಲ್ಲಿ ತಮ್ಮ ದಿನಚರಿ ಹೇಗಿರುತ್ತದೆ ಎಂದು ವಿಡಿಯೋ ಮಾಡಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಒಟ್ಟಿನಲ್ಲಿ ರುಕುಲ್‌ ಸಿಕ್ಕಾಪಟ್ಟೆ ಫಿಟ್ನೆಸ್‌ ಫ್ರೀಕ್‌, ಯೋಗ ಮಾಡುತ್ತಿರುತ್ತಾರೆ ಇಲ್ಲವಾದರೆ ಆಟವಾಗುತ್ತಾ ಡ್ಯಾನ್ ಮಾಡುತ್ತಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?