32ವರ್ಷದ ಹಾರ್ದಿಕ್ ಪಾಂಡ್ಯಾ ಜೊತೆ 51ರ ಅಮೀಷಾ ಪಾಟೀಲ್ ಡೇಟಿಂಗ್! ನಟಿ ಹೇಳಿಕೆ ವೈರಲ್

Published : Sep 07, 2026, 04:41 PM IST
Ameesha Patel

ಸಾರಾಂಶ

ಟೀಂ ಇಂಡಿಯಾದ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಜೊತೆ ಬಾಲಿವುಡ್ ನಟಿ ಅಮೀಷಾ ಪಾಟೀಲ್ ಡೇಟಿಂಗ್ ಮಾಡುತ್ತಿದ್ದಾರೆ, ಹೀಗಾಗಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ರೂಮರ್ಸ್ ಕೇಳಿ ಬಂದಿದ್ದು, ಇದೀಗ ಸೋಶಿಯಲ್ ಮೀಡಿಯಾ ಟ್ರೋಲ್ ಗಳಿಗೆ ನಟಿ ಖಡಕ್ ಉತ್ತರ ನೀಡಿದ್ದಾರೆ. ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗಿದೆ.

ಹಾರ್ದಿಕ್ ಪಾಂಡ್ಯ ಜೊತೆ ಅಮೀಷಾ ಪಟೇಲ್ ರೊಮ್ಯಾನ್ಸ್?

ಬಾಲಿವುಡ್ ನಟಿ ಅಮೀಷಾ ಪಟೇಲ್ ಹಾಗೂ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಹೆಸರು ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ‘ಕಹೋ ನಾ ಪ್ಯಾರ್ ಹೈ’ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಅಮೀಷಾ ಪಟೇಲ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತಮ್ಮ ಸಿನಿಮಾಗಳು, ವೈಯಕ್ತಿಕ ವಿಚಾರಗಳು ಹಾಗೂ ವಿವಿಧ ವಿಷಯಗಳ ಬಗ್ಗೆ ಅವರು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ.

ಇತ್ತೀಚೆಗೆ ಅಮೀಷಾ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಮಾತುಕತೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋದಲ್ಲಿ ಅಮೀಷಾ, ಹಾರ್ದಿಕ್ ಅವರ ಭುಜದ ಮೇಲೆ ಕೈ ಇಟ್ಟಿರುವುದನ್ನು ಗಮನಿಸಿದ ಕೆಲವರು, ಇಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿರಬಹುದೇ ಎಂದು ಊಹಾಪೋಹಗಳನ್ನು ಹರಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಒಬ್ಬ ನೆಟ್ಟಿಗ ‘ರೆಡಿಟ್‌ನಲ್ಲಿ ಹರಿದಾಡುತ್ತಿರುವ ಅಮೀಷಾ ಮತ್ತು ಹಾರ್ದಿಕ್ ಕುರಿತ ವದಂತಿಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ’ ಎಂದು ಪೋಸ್ಟ್ ಮಾಡಿದ್ದ. ವಿಶೇಷವಾಗಿ ಬೆಂಗಳೂರಿನ ಹೋಟೆಲ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಅಮೀಷಾ, ಹಾರ್ದಿಕ್ ಅವರ ಭುಜದ ಮೇಲೆ ಕೈ ಇಟ್ಟಿದ್ದನ್ನು ಉಲ್ಲೇಖಿಸಿ ಆತನ ಪೋಸ್ಟ್ ಮಾಡಿದ್ದ.

ಅಮೀಷಾ ಪಾಟೀಲ್ ಖಡಕ್ ಉತ್ತರ

ಈ ಪೋಸ್ಟ್ ಅಮೀಷಾ ಅವರ ಗಮನಕ್ಕೂ ಬಂದಿದೆ. ಅವರು ಆ ಪೋಸ್ಟ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡು ವ್ಯಂಗ್ಯಭರಿತವಾಗಿ ನೆಟ್ಟಿಗನಿಗೆ ತಿರುಗೇಟು ನೀಡಿದ್ದಾರೆ. “ಹೌದು, ನೀನು ಹೇಳಿದ್ದು ಸರಿಯಾಗಿದೆ. ನಾನು ಅವರ ಮೇಲೆ ಕೈ ಇಟ್ಟಿದ್ದು ನಿಜಕ್ಕೂ ತುಂಬಾ ರೊಮ್ಯಾಂಟಿಕ್ ಆಗಿತ್ತು. ನಿನ್ನನ್ನು ನನಗೆ ಗೊತ್ತಿಲ್ಲ, ಆದರೆ ನಿನಗೆ ಯಾವುದೇ ಹುಡುಗಿ ಸ್ನೇಹಿತೆ ಇಲ್ಲ ಎಂದು ಖಚಿತವಾಗಿ ಹೇಳಬಹುದು. ಇಂತಹ ವಿಷಯಗಳ ಬಗ್ಗೆ ಪೋಸ್ಟ್ ಮಾಡುವ ಮೊದಲು ಒಬ್ಬ ಹುಡುಗಿಯನ್ನು ಸ್ನೇಹಿತೆಯನ್ನಾಗಿ ಮಾಡಿಕೊಳ್ಳಬೇಕು” ಎಂಬ ಅರ್ಥದಲ್ಲಿ ಅಮೀಷಾ ಪ್ರತಿಕ್ರಿಯಿಸಿದ್ದಾರೆ.

ಹಾರ್ದಿಕ್ ಜೊತೆ ಮತ್ತೆ ಕಾಣಿಸಿಕೊಂಡ ಅಮೀಷಾ

ಇದರ ನಡುವೆ ಅಮೀಷಾ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ಅವರು ಮುಂಬೈನ ತಾಜ್ ಮಹಲ್ ಪ್ಯಾಲೇಸ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಭೇಟಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅಮೀಷಾ, ಹಾರ್ದಿಕ್ ಅವರನ್ನು ತಮ್ಮ ಕೆಲವು ಸ್ನೇಹಿತರೊಂದಿಗೆ ಪರಿಚಯಿಸುತ್ತಿರುವ ದೃಶ್ಯ ಕಂಡುಬಂದಿದೆ.

ಹಾರ್ದಿಕ್ ಪಾಂಡ್ಯ ವೈಯಕ್ತಿಕ ಜೀವನ

ಹಾರ್ದಿಕ್ ಪಾಂಡ್ಯ ಅವರ ವೈಯಕ್ತಿಕ ಜೀವನವೂ ಈ ಹಿಂದೆ ಸಾಕಷ್ಟು ಸುದ್ದಿಯಾಗಿತ್ತು. ಅವರು ನಟಿ ನತಾಶಾ ಸ್ಟಾಂಕೋವಿಕ್ ಅವರನ್ನು 2020ರಲ್ಲಿ ವಿವಾಹವಾಗಿದ್ದರು. ಅದೇ ವರ್ಷ ಅವರಿಗೆ ಆಗಸ್ತ್ಯ ಎಂಬ ಮಗ ಜನಿಸಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ, 2024ರ ಜುಲೈ 18ರಂದು ಈ ಜೋಡಿ ವಿಚ್ಚೇದನ ಪಡೆದಿದ್ದರು. ಸದ್ಯ ಹಾರ್ದಿಕ್ ಪಾಂಡ್ಯಾ ಮಾಡೆಲ್ ಮಾಹಿಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನೀಟ್‌ ಪ್ರತಿಭಟನೆಯಿಂದ ಬಿಗ್‌ ಬಾಸ್‌ ವೇದಿಕೆಗೆ – ಸಲ್ಮಾನ್ ಮುಂದೆ ಜಗಳ ಆಡಿದ್ರೂ ಸಿಗ್ಲಿಲ್ಲ ಅವಕಾಶ
ಇಂಗ್ಲೆಂಡ್​ ಬಿಟ್ಟು ಭಾರತಕ್ಕೆ ಬಂದು Hanuman Anshನಿಂದ 100 ಕೋಟಿ ಗಳಿಸಿದ 21ರ ಯುವತಿ: ಯಾರೀ ನಿರ್ಮಾಪಕಿ